ಅನಾವರಣಗೊಂಡ ಯಮಹಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಮೂಲದ ಯಮಹಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಸದ್ಯದಲ್ಲಿಯೇ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ.

ಯಮಹಾ ಕಂಪನಿಯು ಇತ್ತೀಚಿಗಷ್ಟೇ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇಸಿ-05 ಅನ್ನು ಅನಾವರಣಗೊಳಿಸಿತು. ಈ ಸ್ಕೂಟರಿನಲ್ಲಿ ಗೊಗೊರೊ ಕಂಪನಿಯ ಸ್ವಾಪೇಬಲ್ ಬ್ಯಾಟರಿ ಟೆಕ್ನಾಲಜಿಯನ್ನು ಅಳವಡಿಸಲಾಗುವುದು. ಎಲೆಕ್ಟ್ರಿಕ್ ವಾಹನಗಳಲ್ಲಿ ಸ್ವಾಪೇಬಲ್ ಬ್ಯಾಟರಿ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಲು ಯಮಹಾ, ಕವಾಸಕಿ, ಸುಜುಕಿ ಹಾಗೂ ಹೋಂಡಾ ಕಂಪನಿಗಳು ಕೈ ಜೋಡಿಸಿದ ನಂತರ ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಅನಾವರಣಗೊಂಡ ಯಮಹಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ದ್ವಿ ಚಕ್ರವಾಹನ ಉದ್ಯಮದಲ್ಲಿ ದೈತ್ಯ ಕಂಪನಿಯಾಗಿರುವ ಯಮಹಾ, ತೈವಾನ್ ಮೂಲದ ಗೊಗೊರೊ ಕಂಪನಿಯ ಜೊತೆಗೆ ಬ್ಯಾಟರಿ ಟೆಕ್ನಾಲಜಿ ಹಂಚಿಕೆಯ ಬಗ್ಗೆ ಸಹಭಾಗಿತ್ವ ಹೊಂದಿದೆ. ಇದರಿಂದಾಗಿ ಪವರ್ ಯೂನಿಟ್‍‍ಗಳನ್ನು ಸುಲಭವಾಗಿ ಬದಲಾಯಿಸಬಹುದಾಗಿದೆ.

ಅನಾವರಣಗೊಂಡ ಯಮಹಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ಯಮಹಾ ಇಸಿ-05 ಸ್ಕೂಟರ್‍‍ನಲ್ಲಿ ಈ ಟೆಕ್ನಾಲಜಿಯನ್ನು ಅಳವಡಿಸಲಾಗುವುದು. ಈ ಟೆಕ್ನಾಲಜಿಯನ್ನು ಎರಡೂ ಕಂಪನಿಗಳೂ ಜೊತೆಗೂಡಿ ಅಭಿವೃದ್ಧಿಪಡಿಸಲಿವೆ. ಈ ಸ್ಕೂಟರ್‍‍ನಲ್ಲಿರುವ ಸ್ಪೆಸಿಫಿಕೇಶ್‍‍ಗಳ ಬಗ್ಗೆ ಯಮಹಾ ಕಂಪನಿಯು ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸಿಲ್ಲ.

ಅನಾವರಣಗೊಂಡ ಯಮಹಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ಯಮಹಾ ಕಂಪನಿಯು ದೂರದ ಪ್ರಯಾಣಕ್ಕೆ ಹಾಗೂ ಎರಡು ನಗರಗಳ ಮಧ್ಯದ ಪ್ರಯಾಣಕ್ಕೆ ಅನುಕೂಲವಾಗುವಂತಹ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಿದ್ದು, ಇಸಿ-05 ಸ್ಕೂಟರ್ ಅನ್ನು ಒಂದು ಬಾರಿಗೆ ಚಾರ್ಜ್ ಮಾಡಿದರೆ 80 ಕಿ.ಮೀ ನಿಂದ 100 ಕಿ.ಮೀವರೆಗೆ ಚಲಾಯಿಸಬಹುದು ಎಂದು ಹೇಳಲಾಗುತ್ತಿದೆ. ಯಮಹಾ ಇಸಿ-05 ಸ್ಕೂಟರ್ ಅನ್ನು ಈ ವರ್ಷದ ಆಗಸ್ಟ್ ನಿಂದ ತೈವಾನ್ ದೇಶದಲ್ಲಿ ಮಾರಾಟ ಮಾಡಲಾಗುವುದು.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಅನಾವರಣಗೊಂಡ ಯಮಹಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ಹೊಸ ಸ್ಕೂಟರ್ ಅನ್ನು ಪ್ರಪಂಚಾದ್ಯಂತವಿರುವ ಬಹುತೇಕ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುವುದು. ಇದರಿಂದಾಗಿ ಸ್ವಾಪೇಬಲ್ ಬ್ಯಾಟರಿ ಟೆಕ್ನಾಲಜಿಯ ವಾಹನವು ಬಹು ದೇಶಗಳಿಗೆ ಕಾಲಿಡುವುದು ಖಚಿತವಾಗಿದೆ.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಅನಾವರಣಗೊಂಡ ಯಮಹಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ಯಮಹಾ ಕಂಪನಿಗೆ ಭಾರತವು ಬಹುದೊಡ್ಡ ಮಾರುಕಟ್ಟೆಯಾಗಿದ್ದು, ಸುಮಾರು ಮೂರು ದಶಕಗಳಿಂದ ಭಾರತದಲ್ಲಿ ತನ್ನ ವಹಿವಾಟನ್ನು ನಡೆಸುತ್ತಿದೆ. ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಕುರಿತು ಇದುವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಅನಾವರಣಗೊಂಡ ಯಮಹಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ಯಮಹಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಮುಂಬರುವ ದಿನಗಳಲ್ಲಿ ಅತ್ಯಾಧುನಿಕವಾದ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

Most Read Articles

Kannada
Read more on ಯಮಹಾ yamaha
English summary
Yamaha Unveils EC-05 Electric Scooter With Battery Swapping Tech - Read in kannada
Story first published: Thursday, June 13, 2019, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X