2020ರ ಯಮಹಾ ಬೋಲ್ಟ್ ಕ್ರೂಸರ್ ಬೈಕ್ ಅನಾವರಣ
ಯಮಹಾ ಮೋಟಾರ್ಸ್ ಕಂಪನಿಯು 2020ರ ಬೋಲ್ಟ್ ಕ್ರೂಸರ್ ಬೈಕನ್ನು ಅನಾವರಣಗೊಳಿಸಿದೆ. ಹೊಸ ಯಮಹಾ ಬೋಲ್ಟ್ ತನ್ನ ಹಿಂದಿನ ಮಾದರಿಯ ಅದೇ ಬಾಬರ್ ಶೈಲಿಯ ರೆಟ್ರೊ-ಥೀಮ್ ಅನ್ನು ಅನ್ನು ಹೊಂದಿದೆ.

ಈ ಹೊಸ ಯಮಹಾ ಬೋಲ್ಟ್ ಕ್ರೂಸರ್ ಬೈಕ್ ಜೂನ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಯಮಹಾ ಕಂಪನಿಯು 2020ರ ಬೋಲ್ಟ್ ಕ್ರೂಸರ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಹೊಸ ಯಮಹಾ ಬೋಲ್ಟ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಬೈಕಿನ ಫ್ಯೂಯಲ್ ಟ್ಯಾಂಕ್ ಟಿಯರ್-ಡ್ರಾಪ್ ಆಕಾರವನ್ನು ಹೊಂದಿದೆ. ಈ ಹೊಸ ಬೈಕ್ ಕ್ಲೀನ್ ಬಾಡಿ ಪ್ಯಾನೆಲ್‌ಗಳೊಂದಿಗೆ ಗ್ರಾಫಿಕ್ಸ್ ಅನ್ನು ಹೊಂದಿದೆ.

ಹೊಸ ಯಮಹಾ ಬೈಕಿನ ಸೀಟ್ ಕೇವಲ 690 ಎಂಎಂ ಎತ್ತರವನ್ನು ಹೊಂದಿದೆ. ಇದರಿಂದ ಬೈಕ್ ಸವಾರನು ಆರಾಮದಾಯಕವಾಗಿ ಸವಾರಿ ಮಾಡಬಹುದು. ಹೊಸ ಯಮಹಾ ಬೈಕಿನ ಹಲವಾರು ಫೀಚರ್‍ಗಳನ್ನು ಹೊಂದಿದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಹೊಸ ಯಮಹಾ ಬೋಲ್ಟ್ ಕ್ರೂಸರ್ ಬೈಕ್ ಎಲ್ಇಡಿ ಲೈಟಿಂಗ್, ಫೂಲ್ ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ರೆಟ್ರೊ ಸ್ಟೈಲ್ ಟರ್ನ್ ಇಂಡೀಕೇಟರ್ ಮತ್ತು ಪೊಸಿಷನ್ ಲೈಟ್ಸ್ ಅನ್ನು ಹೊಂದಿದೆ. ಹೊಸ ಯಮಹಾ ಬೋಲ್ಟ್ ಕ್ರೂಸರ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಆರ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ವ್ಹೀಲ್ ಮತ್ತು ಸಸ್ಪೆಂಷನ್ ಸೆಟಪ್ ನಲ್ಲಿ ಗಮನಾರ್ಹ ಬದಲಾವಣೆಗಳಿದೆ.

ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಸ್ಪೋಕ್ ವ್ಜೀಲ್ ಗಳನ್ನು ಹೊಂದಿದ್ದರೆ, ಆರ್ ರೂಪಾಂತರವು ಕ್ಯಾಸ್ಟ್ ಅಲಾಯ್ ರಿಮ್ ವ್ಹೀಲ್ ಅನ್ನು ಹೊಂದಿದೆ. ಯಮಹಾ ಬೋಲ್ಟ್ ಬೈಕಿನಲ್ಲಿ ಸಸ್ಪೆಂಷನ್ ನಲ್ಲಿ ಗೋಲ್ಡನ್ ಬಣ್ಣದ ಅಂಶಗಳಿದ್ದರೆ, ಸ್ಟ್ಯಾಂಡರ್ಡ್ ರೂಪಾಂತರವು ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿದೆ.
MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಯಮಹಾ ಬೋಲ್ಟ್ ಕ್ರೂಸರ್ ಬೈಕಿನ ಸ್ಟ್ಯಾಂಡರ್ಡ್ ಮತ್ತು ಆರ್ ಎಂಬ ಎರಡು ರೂಪಾಂತರಗಳಲ್ಲಿ ಒಂದೇ ರೀತಿಯ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎರಡು ರೂಪಾಂತರದಲ್ಲಿ 942 ಸಿಸಿ ವಿ-ಟ್ವಿನ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 5500 ಆರ್‌ಪಿಎಂನಲ್ಲಿ 53 ಬಿಹೆಚ್‍ಪಿ ಪವರ್ ಮತ್ತು 3000 ಆರ್‌ಪಿಎಂನಲ್ಲಿ 80 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

2020ರ ಯಮಹಾ ಬೋಲ್ಟ್ ಕ್ರೂಸರ್ ಬೈಕಿನಲ್ಲ್ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ಗಾಗಿ ಎರಡು ಕಡೆಗಳಲ್ಲಿ ಒಂದೇ ಡಿಸ್ಕ್ ಗಳಿಂದ ನಿಯಂತ್ರಿಸಲಾಗುತ್ತದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

2020ರ ಯಮಹಾ ಬೋಲ್ಟ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಯಮಹಾ ಕಂಪನಿಯು ಬೋಲ್ಟ್ ಕ್ರೂಸರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.


Click it and Unblock the Notifications