ಬಿಡುಗಡೆಯಾಯ್ತು ಹೊಸ ಯಮಹಾ ಡಬ್ಲ್ಯುಆರ್ 155ಆರ್ ಬೈಕ್
ಯಮಹಾ ಕಂಪನಿಯು ಕಳೆದ ವರ್ಷ ಇಂಡೋನೇಷ್ಯಾದಲ್ಲಿ ಡಬ್ಲ್ಯುಆರ್ 155ಆರ್ ಆಫ್-ರೋಡ್ ಬೈಕನ್ನು ಬಿಡುಗಡೆಗೊಳಿಸಿತ್ತು, ಇದೀಗ ಈ ಹೊಸ ಯಮಹಾ ಡಬ್ಲ್ಯುಆರ್ 155ಆರ್ ಆಫ್-ರೋಡ್ ಬೈಕನ್ನು ಥೈಲ್ಯಾಂಡ್‍ನಲ್ಲಿ ಬಿಡುಗಡೆಗೊಳಿಸಿದೆ.

ಯಮಹಾ ಕಂಪನಿಯು ಈ ಆಫ್-ರೋಡ್ ಡಬ್ಲ್ಯುಆರ್ 155ಆರ್ ಬೈಕನ್ನು ಭಾರತದಲ್ಲಿಯು ಬಿಡುಗಡೆಗೊಳಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಯಮಹಾ ಡಬ್ಲ್ಯುಆರ್ 155ಆರ್ ಬೈಕನ್ನು ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಯಮಹಾ ಡಬ್ಲ್ಯುಆರ್ 155ಆರ್ ಆಫ್-ರೋಡ್ ಬೈಕಿನಲ್ಲಿ ವಿ3.0 ಎಂಜಿನ್ ಅನ್ನು ಅಳವಡಿಸಲಾಗಿದೆ.

ಯಮಹಾ ಡಬ್ಲ್ಯುಆರ್ 155ಆರ್ ಬೈಕಿನಲ್ಲಿ 155 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 16 ಬಿಹೆಚ್‍ಪಿ ಪವರ್ ಮತ್ತು 14.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಯಮಹಾ ಡಬ್ಲ್ಯುಆರ್ 155ಆರ್ ಬೈಕ್ ಸಂಪೂರ್ಣವಾಗಿ ವಿಭಿನ್ನವಾದ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಬೈಕ್ 18 ಇಂಚಿನ ರೇರ್ ವ್ಹೀಲ್‍ಗಳೊಂದಿಗೆ ಸೆಮಿ-ಡಬಲ್ ಕ್ರೆಡಲ್ ಫ್ರೇಮ್ ಹೊಂದಿದೆ.

ಈ ಬೈಕ್ 41 ಎಂಎಂ ಫ್ರಂಟ್ ಫೋರ್ಕ್ಸ್ ಮತ್ತು ಪ್ರಿಲೋಡ್-ಅಡ್ಜೆಸ್ಟೆಬಲ್ ಗ್ಯಾಸ್-ಚಾರ್ಜ್ಡ್ ರೇರ್ ಮೊನೊ-ಶಾಕ್ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಈ ಬೈಕಿನ 240 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಅಂತರರಾಷ್ಟ್ರೀಯ-ಸ್ಪೆಕ್ ಮಾದರಿಯು ಎಬಿಎಸ್ ಅನ್ನು ಹೊಂದಿಲ್ಲ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಬೈಕಿನಲ್ಲಿ ಸಿಂಗಲ್ ಚಾನೆಲ್ ಯುನಿಟ್ ಅನ್ನು ಹೊಂದಿರಲಿದೆ.

ಯಮಹಾ ಡಬ್ಲ್ಯೂಆರ್ 155ಆರ್ 888 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇದು ತುಸು ಅದಿಕ ಎತ್ತರವಾಗಿದೆ. ಈ ಬೈಕಿನಲ್ಲಿ 8.1-ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕ್ 245 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಭಾರತದಲ್ಲಿ ಯಮಹಾ ಡಬ್ಲ್ಯೂಆರ್ 155ಆರ್ ಬೈಕ್ ಬಿಡುಗಡೆಯಾದ ಬಳಿಕ ಹೀರೋ ಎಕ್ಸ್‌ಪಲ್ಸ್ 200 ಮತ್ತು ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿಗೆ ಪೈಪೋಟಿ ನೀಡಬಹುದು. ಈ ಬೈಕ್ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಗಿಂತ ಸ್ವಲ್ಪ ಹೆಚ್ಚಿನ ಪವರ್ ಮತ್ತು ಹಿಮಾಲಯನ್ ಬೈಕ್ ಗಿಂತ ತೂಕ ಹೆಚ್ಚಿರುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಆಫ್ ರೋಡ್ ಬೈಕುಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಭಾರತದಲ್ಲಿ ಆಫ್ ರೋಡ್ ಬೈಕ್ ಪ್ರಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯಮಹಾ ಡಬ್ಲ್ಯುಆರ್ 155ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications