ಬಿಡುಗಡೆಯಾಯ್ತು ಬಿಎಸ್-6 ಕವಾಸಕಿ ಝಡ್650 ಬೈಕ್
ಕವಾಸಕಿ ಕಂಪನಿಯು ತನ್ನ 2021ರ ಝಡ್650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಕವಾಸಕಿ 2021ರ ಝಡ್650 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.94 ಲಕ್ಷಗಳಾಗಿದೆ.

ಹೊಸ ಕವಾಸಕಿ ಝಡ್650 ಬೈಕಿನ ಬೆಲೆಯು ಹಿಂದಿನ ಮಾದರಿಗಿಂತ ರೂ.25 ಸಾವಿರದಷ್ಟು ಹೆಚ್ಚಿಸಲಾಗಿದೆ. ಕವಾಸಕಿ ಕಂಪನಿಯು ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಹೊಸ ಝಡ್650 ಬೈಕನ್ನು ಅನಾವರಣಗೊಳಿಸಿದ್ದರು. ಈ ಬೈಕಿನಲ್ಲಿ ಎಲ್‍ಇಡಿ ಹೆಡ್‍ಲೈಟ್, 4.3 ಇಂಚಿನ ಟಿಎಫ್‍ಟಿ ಕಲರ್ ಇನ್ಸ್ ಟ್ರೂಮೆಂಟೆಷನ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹಾಗೂ ಡನ್‍ಲಪ್ ಸ್ಪೋರ್ಟ್ಸ್ ಮ್ಯಾಕ್ಸ್ ರೋಡ್‍ಸ್ಪೋರ್ಟ್ ಟಯರ್‍ಗಳಿವೆ.

ಈ ಬೈಕಿನಲ್ಲಿರುವ ಎಲ್‍ಇಡಿ ಹೆಡ್‍ಲೈಟ್ ಹಾಗೂ ಟಿಎಫ್‍ಟಿ ಇನ್ಸ್ ಟ್ರೂಮೆಂಟೆಷನ್ ಸ್ಕ್ರೀನ್‍ಗಳು ಈ ಬೈಕಿನ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಬೈಕಿನಲ್ಲಿ ಕಡಿಮೆ ತೂಕದ ಚಾಸೀಸ್ ಹಾಗೂ ಆರಾಮದಾಯಕವಾದ ಸೀಟುಗಳನ್ನು ಅಳವಡಿಸಲಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಝಡ್ 650 ಬೈಕಿನಲ್ಲಿ 649 ಸಿಸಿಯ ಲಿಕ್ವಿಡ್ ಕೂಲ್ಡ್ ಟ್ವಿನ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‍ಪಿಎಂನಲ್ಲಿ 68 ಬಿಹೆಚ್‍ಪಿ ಪವರ್ ಹಾಗೂ 6,700 ಆರ್‍ಪಿಎಂನಲ್ಲಿ 64 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಹೊಸ ಕವಾಸಕಿ ಝಡ್650 ಬೈಕ್ ಮೆಟಾಲಿಕ್ ಸ್ಪಾರ್ಕ್ ಬ್ಲ್ಯಾಕ್ ಎಂಬ ಒಂದೇ ಬಣ್ಣದಲ್ಲಿ ಲಭ್ಯವಿರಲಿದೆ. ಈ ಹೊಸ ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಬೈಕಿನಲ್ಲಿ ಎಂಜಿನ್ ನವೀಕರಣ ಮತ್ತು ಸ್ಟೈಲಿಂಗ್ ನಲ್ಲಿ ಕೆಲವು ಬದಲಾವಣೆಗಳನ್ನು ಹೊರತುಪಡಿಸಿ ಇತರ ಬದಲಾವಣೆಗಳು ಯಾವುದು ಮಾಡಲಾಗಿಲ್ಲ. ಈ ಹೊಸ ಬೈಕ್ 15-ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ 191 ಕೆಜಿ ತೂಕವಿದೆ.

ಸಸ್ಪೆಂಷನ್‍ಗಳಿಗಾಗಿ ಈ ಬೈಕಿನಲ್ಲಿ ಮುಂಭಾಗದಲ್ಲಿ 41 ಎಂಎಂನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ಗಳಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂನ ಪೆಟಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಇದಲ್ಲದೆ ಕವಾಸಕಿ ಕಂಪನಿಯು ನಿಂಜಾ ಝಡ್‍ಎಕ್ಸ್ 25ಆರ್ ಬೈಕ್ ಅನ್ನು ಆನ್‍ಲೈನ್ ನಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ನಿಂಜಾ ಝಡ್‍ಎಕ್ಸ್ 25ಆರ್ ಬೈಕನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.

ಹೊಸ ಕವಾಸಕಿ ಝಡ್650 ಬೈಕ್ ಮಿಡಲ್ ವೇಟ್ ವಿಭಾಗದ ಕೆಟಿಎಂ ಡ್ಯೂಕ್ 790, ಸುಜುಕಿ ಜಿಎಸ್ಎಕ್ಸ್-ಎಸ್ 750, ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮತ್ತು ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ 750 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications