ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಯಮಹಾ ತನ್ನ ಸ್ಟ್ರೀಟ್‌ಫೈಟರ್ ಸರಣಿಯ ಎಂಟಿ-125 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. 2021ರ ಯಮಹಾ ಎಂಟಿ-125 ಬೈಕ್ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ.

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

2021ರ ಯಮಹಾ ಎಂಟಿ-125 ಬೈಕ್ ಸ್ಟಾರ್ಮ್ ಫ್ಲೂ, ಐಕಾನ್ ಬ್ಲೂ ಮತ್ತು ಟೆಕ್ ಬ್ಲ್ಯಾಕ್ ಎಂಬ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಯಮಹಾ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು 10 ಲೀಟರ್‌ನಿಂದ 11 ಲೀಟರ್‌ಗೆ ಹೆಚ್ಚಿಸಿದೆ. ಇದರಿಂದಾಗಿ ಬೈಕಿನ ತೂಕವು 140 ಕೆ.ಜಿಯಿಂದ 142 ಕೆ.ಜಿಗೆ ಏರಿದೆ. ಈ ಬದಲಾವಣೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಮುಖ ಬದಲಾವಣೆಗಳು ಕಂಡುಬಂದಿಲ್ಲ.

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

2021ರ ಯಮಹಾ ಎಂಟಿ-125 ಬೈಕಿನಲ್ಲಿ 124 ಸಿಸಿ ಲಿಕ್ವಿಡ್-ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,000 ಆರ್‌ಪಿಎಂನಲ್ಲಿ 14.9 ಬಿಹೆಚ್‍ಪಿ ಪವರ್ ಮತ್ತು 8000 ಆರ್‌ಪಿಎಂನಲ್ಲಿ 11.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಈ ಹೊಸ ಯಮಹಾ ಎಂಟಿ-125 ಬೈಕ್ 47.6 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇದು ಸಣ್ಣ ಸಿಸಿ ಮಾದರಿಯಾಗಿದ್ದರೂ ಪರ್ಫಾಮೆನ್ಸ್ ಆಧಾರಿತ ಬೈಕ್ ಆಗಿದೆ. ಇದು ಯಮಹಾ ಎಂಟಿ-15 ಬೈಕಿನ ಕಿರಿಯ ಸಹೋದರ ಎಂದೇ ಹೇಳಬಹುದು.

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಯಮಹಾ ಎಂಟಿ-15 ಮಾದರಿಯ ವಿನ್ಯಾಸವನ್ನು ಈ ಹೊಸ ಎಂಟಿ-125 ಬೈಕ್ ಹೊಂದಿದೆ. ಇನ್ನು ಈ ಬೈಕಿನಲ್ಲಿ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಜೋಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಇನ್ನು ಹೊಸ ಯಮಹಾ ಎಂಟಿ-125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಇನವರ್ಡಡ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅಲ್ಯೂಮಿನಿಯಂ ಸ್ವಿಂಗಾರ್ಮ್ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಯಮಹಾ ಎಂಟಿ-125 ಬಕಿನ ಮುಂಭಾಗದಲ್ಲಿ 292 ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ರೇಡಿಯಲ್ ಕ್ಯಾಲಿಪರ್ ಅನ್ನು ಹೊಂದಿದೆ. ಇನ್ನು ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಇನ್ನು ಯಮಹಾ ತನ್ನ 2021ರ ಆರ್3 ಬೈಕನ್ನು ಜಪಾನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತು. ಈ ಹೊಸ ಯಮಹಾ ಆರ್3 ಬೈಕ್ 2021ರ ಜನವರಿ 15ರಂದು ಜಪಾನ್ ನಲ್ಲಿ ಬಿಡುಗಡೆಯಾಗಲಿದೆ. ಯಮಹಾ ಕಂಪನಿಯು ತನ್ನ ತವರಿನಲ್ಲಿ ವಾರ್ಷಿಕವಾಗಿ 3700 ಹೊಸ ಆರ್3 ಬೈಕುಗಳನ್ನು ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ.

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಜಪಾನ್ ಮಾರುಕಟ್ಟೆಯಲ್ಲಿ ಈ ಹೊಸ ಯಮಹಾ ಆರ್3 ಬೈಕಿನ ಬೆಲೆಯು ಭಾರತೀಯ ಕರೆನ್ಸಿ ಪ್ರಕಾರ ರೂ.4.89 ಲಕ್ಷಗಳಾಗಿದೆ. ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಲು, 2021ರ ಯಮಹಾ ಆರ್3 ಹೊಸ ಮತ್ತು ಆಕರ್ಷಕ ಸಯಾನ್ ಬಣ್ಣ ಆಯ್ಕೆಯನ್ನು ನೀಡಲಾಗಿದೆ. ಇನ್ನು ಈ ಹೊಸ ಬೈಕಿನಲ್ಲಿ ಬಾಡಿವರ್ಕ್ ಹೆಚ್ಚಿನ ಶೇಕಡಾವಾರು ಪ್ರಮಾಣವು ಸಯಾನ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಅನಾವರಣವಾಯ್ತು 47 ಕಿ.ಮೀ ಮೈಲೇಜ್ ನೀಡುವ ಹೊಸ ಯಮಹಾ ಎಂಟಿ-125 ಬೈಕ್

ಇನ್ನು ಹೊಸ ಯಮಹಾ ಎಂಟಿ -125 ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆದರೆ ಭಾರತದಲ್ಲಿ ಈ ಹೊಸ ಯಮಹಾ ಎಂಟಿ-125 ಪರ್ಫಾಮೆನ್ಸ್ ಆಧಾರಿತ ಬೈಕ್ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

Article Published On: Friday, December 25, 2020, 19:36 [IST]
English summary
2021 Yamaha MT125 Unveiled. Read In Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+