ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾದ ದೃಶ್ಯವೊಂದು ಲೀಕ್ ಆಗಿದೆ. ಈ ದೃಶ್ಯದಲ್ಲಿ ನಟ ಅಕ್ಷಯ್ ಕುಮಾರ್‍‍ರವರು ಸೂಪರ್‍‍ಬೈಕ್ ಅನ್ನು ಚಲಾಯಿಸುತ್ತಿದ್ದು, ಅವರ ಹಿಂದೆ ನಟಿ ಕತ್ರಿನಾ ಕೈಫ್‍‍ರವರು ಕುಳಿತಿದ್ದಾರೆ.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಇದರಲ್ಲೇನು ವಿಶೇಷ ಅಂತೀರಾ? ಈ ಬೈಕಿನಲ್ಲಿರುವ ಇಬ್ಬರೂ ಸಹ ಹೆಲ್ಮೆಟ್ ಧರಿಸಿಲ್ಲ. ಈ ದೃಶ್ಯದಲ್ಲಿ ಅಕ್ಷಯ್‍‍ಕುಮಾರ್‍‍ರವರು ಮಧ್ಯಮ ಸಾಮರ್ಥ್ಯದ ಹೋಂಡಾ ಸಿ‍‍ಬಿ‍ಆರ್ 650ಎಫ್ ಬೈಕ್ ಅನ್ನು ಚಾಲನೆ ಮಾಡುತ್ತಿದ್ದಾರೆ. ಈ ಬೈಕ್ ಅನ್ನು ಇತ್ತೀಚಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.7.70 ಲಕ್ಷಗಳಾಗಿದೆ. ಅಪಘಾತವಾದಾಗ ಸವಾರ ಹಾಗೂ ಹಿಂಬದಿಯ ಸವಾರರ ತಲೆಗೆ ಪೆಟ್ಟು ಬೀಳದಂತೆ ತಡೆಯುವ ಉದ್ದೇಶದಿಂದ ಹೆಲ್ಮೆಟ್‍ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್‍‍ರವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು, ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದರೆ ಅಭಿಮಾನಿಗಳಿಗೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ. ಅಕ್ಷಯ್ ಕುಮಾರ್‍‍ರವರು ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಈ ಹಿಂದೆಯೂ ಸಹ ಇದೇ ಸಿನಿಮಾದ ಸ್ಟಂಟ್‍‍ಗಾಗಿ ಡುಕಾಟಿ ಮಾಂಸ್ಟರ್ ಬೈಕ್ ಅನ್ನು ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ್ದರು. ಈ ಬಗ್ಗೆ ಚಿತ್ರದ ನಿರ್ದೇಶಕರಾದ ರೋಹಿತ್ ಶೆಟ್ಟಿರವರು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಯಾವುದೇ ಸ್ಟಂಟ್‍‍ಗಳನ್ನು ಮಾಡುವ ಮೊದಲು ಸುರಕ್ಷತೆಗೆ ಆದ್ಯತೆ ನೀಡಬೇಕು. ಈ ಚಿತ್ರದಲ್ಲಿರುವ ಸ್ಟಂಟ್‍‍ಗಳನ್ನು ಪರಿಣಿತರ ಸಹಾಯದೊಂದಿಗೆ ಮಾಡಲಾಗಿದೆ. ಇವುಗಳನ್ನು ಅನುಕರಣೆ ಮಾಡದಿರಿ ಎಂದು ಹೇಳಿದ್ದಾರೆ.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಆದರೆ ಇದನ್ನು ಜನರು ಪರಿಗಣಿಸುವುದಿಲ್ಲ. ಜನರಿಗೆ ತಕ್ಷಣಕ್ಕೆ ಕಣ್ಣಿಗೆ ಕಾಣುವುದು ಅಕ್ಷಯ್‍ ಕುಮಾರ್‍‍ರವರು ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುತ್ತಿರುವುದು. ಅಕ್ಷಯ್ ಕುಮಾರ್‍‍ರವರು ಮಾತ್ರವಲ್ಲದೇ ಹಾಲಿವುಡ್ ನಟರಾದ ಟಾಮ್ ಕ್ರೂಸ್‍‍ರವರು ಸಹ ತಮ್ಮ ಮಿಷಮ್ ಇಂಪಾಸಿಬಲ್ ಚಿತ್ರಕ್ಕಾಗಿ ಹೆಲ್ಮೆಟ್ ಧರಿಸದೇ ಬಿ‍ಎಂ‍‍ಡಬ್ಲ್ಯು ಬೈಕ್ ಚಾಲನೆ ಮಾಡಿದ್ದರು.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ನಟ ಅಕ್ಷಯ್ ಕುಮಾರ್‍‍ರವರು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಅವರು ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಸಹ ಮೂಡಿಸಿದ್ದಾರೆ. ಹೋಂಡಾ ಮೋಟಾರ್‍‍ಸೈಕಲ್ಸ್ ಹಾಗೂ ಸ್ಕೂಟರ್ ಇಂಡಿಯಾ ಜೊತೆಗೆ ಹಲವು ಸುರಕ್ಷತಾ ಅಭಿಯಾನಗಳಲ್ಲಿ ಭಾಗಿಯಾಗಿದ್ದಾರೆ.

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಅಕ್ಷಯ್ ಕುಮಾರ್

ಇನ್ನು ಮುಂದಾದರೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅಕ್ಷಯ್ ಕುಮಾರ್‍‍ರವರು ತಮ್ಮ ಸಿನಿಮಾಗಳಲ್ಲಿಯೂ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡಲಿ ಎಂದು ಆಶಿಸೋಣ.

Most Read Articles

Kannada
English summary
Akshay Kumar rides bike without wearing helmet. Read in Kannada.
Story first published: Friday, February 14, 2020, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X