ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅದರಂತೆ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳ ಮಾರಾಟವೂ ಸಹ ಗಮನಾರ್ಹವಾಗಿ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿರುವುದು.

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಭಾರತದಲ್ಲಿರುವ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಸಹ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಈಗ ಆಲ್ಫಾ ವೆಕ್ಟರ್ ಕಂಪನಿಯು ತನ್ನ ಹೊಸ ಇ-ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಆಲ್ಫಾ ವೆಕ್ಟರ್ ಕಂಪನಿಯು ಮೆರಾಕಿ ಬೈ 91 ಎಂಬ ಹೆಸರಿನ ಇ-ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಆಲ್ಫಾ ವೆಕ್ಟರ್ ಕಂಪನಿಯ ಮೊದಲ ಇ-ಬೈಕ್ ನ ಬೆಲೆ ರೂ.29,999ಗಳಾಗಿದೆ. ಈ ಬೈಕ್‌ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಅಥವಾ ಆರ್‌ಸಿ ಬುಕ್ ನ ಅಗತ್ಯವಿಲ್ಲ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಈ ಎಲೆಕ್ಟ್ರಿಕ್ ವಾಹನವು ಹಲವಾರು ವಿಶೇಷ ತಂತ್ರಜ್ಞಾನಗಳನ್ನು ಹೊಂದಿದೆ. ಈ ಇ-ಬೈಕಿನಲ್ಲಿರುವ 6.36 ಎಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿಯು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 35 ಕಿ.ಮೀಗಳವರೆಗೆ ಚಲಿಸುತ್ತದೆ.

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಈ ಇ-ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಆಲ್ಫಾ ವೆಕ್ಟರ್ ಕಂಪನಿಯು ಈ ಇ-ಬೈಕ್‌ನಲ್ಲಿ 250 ವ್ಯಾಟ್‌ ಸಾಮರ್ಥ್ಯದ ಐಪಿ 65 ಎಂಬ ವಾಟರ್ ಪ್ರೂಫ್ ಪಿಎಲ್‌ಟಿಸಿ ಮೋಟರ್ ಅನ್ನು ಬಳಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಈ ಬ್ಯಾಟರಿಯು 2.5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಕೆಲವು ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು 4ರಿಂದ 6 ಗಂಟೆಗಳು ಬೇಕಾಗುತ್ತವೆ.

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಇವುಗಳಿಗೆ ಹೋಲಿಸಿದರೆ ಮೆರಾಕಿ ಬೈ 91 ಇ-ಬೈಸಿಕಲ್ ವೇಗವಾಗಿ ಚಾರ್ಜ್ ಆಗುತ್ತದೆ. ಈ ಎಲೆಕ್ಟ್ರಿಕ್ ಬೈಕಿನಲ್ಲಿ ಆಟೋಮ್ಯಾಟಿಕ್ ಇ-ಬ್ರೇಕ್, ಕೀ ಲಾಕ್ ಸ್ವಿಚ್ ಹಾಗೂ ಕೀ ಲೆಸ್ ಆನ್ ನಂತಹ ಹಲವಾರು ವಿಶೇಷ ಫೀಚರ್ ಗಳಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಈ ರೀತಿಯ ವಿಶೇಷ ಫೀಚರ್ ಗಳ ಮೂಲಕ ಈ ಎಲೆಕ್ಟ್ರಿಕ್ ಬೈಕ್ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೂ ಮುನ್ನವೇ 100ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಸ್ವೀಕರಿಸಿದೆ.

ರೂ.30 ಸಾವಿರ ಬೆಲೆಯ ಈ ಬೈಕ್ ಚಾಲನೆಗೆ ಡಿಎಲ್, ಆರ್‌ಸಿ ಬೇಕಿಲ್ಲ

ಈ ಇ-ಬೈಕ್ ಅನ್ನು ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಪುಣೆ ಹಾಗೂ ಅಹಮದಾಬಾದ್‌ ನಗರಗಳಲ್ಲಿ ಮಾರಾಟ ಮಾಡಲಾಗುವುದೆಂದು ಆಲ್ಫಾ ವೆಕ್ಟರ್ ಕಂಪನಿಯು ತಿಳಿಸಿದೆ.

Most Read Articles

Kannada
English summary
Alpha Vector company launches new e-bike in India. Read in Kannada.
Story first published: Saturday, November 7, 2020, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X