ರೆಂಟಲ್ ಇವಿ ಸ್ಕೂಟರ್ ಕಂಪನಿಗೆ 2 ಸಾವಿರ ಸ್ಕೂಟರ್ ವಿತರಣೆ ಮಾಡಲಿದೆ ಆಂಪಿಯರ್
ಕರೋನಾ ವೈರಸ್ ಪರಿಣಾಮ ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, ವೈರಸ್ ಭೀತಿಯಿಂದ ಬಹುತೇಕರು ಸ್ವಂತ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಹೊಸ ವಾಹನ ಖರೀದಿಯು ಎಲ್ಲರಿಗೂ ಕಷ್ಟಸಾಧ್ಯ. ಹೀಗಾಗಿ ಪರಿಸ್ಥಿತಿಗೆ ಅನುಗುಣವಾಗಿ ನಿಗದಿತ ಅವಧಿಗಾಗಿ ರೆಂಟಲ್ ವಾಹನಗಳ ಮೂಲಕ ಇಂತಿಷ್ಟು ಅವಧಿಗೆ ಮಾಲೀಕತ್ವ ಪಡೆದುಕೊಳ್ಳುವ ಪ್ರಕ್ರಿಯೆ ಹೆಚ್ಚುತ್ತಿದೆ.

ಸೆಲ್ಫ್ ಡ್ರೈವ್ ಮತ್ತು ಸೆಲ್ಫ್ ರೈಡ್ ವಾಹನಗಳಿಗೆ ಮಹಾನಗರಗಳಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುತ್ತಿದ್ದು, ಇಬೈಕ್‌ಗೊ ಎನ್ನುವ ಕಂಪನಿಯು ಕೂಡಾ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮೂಲಕ ರೆಂಟಲ್ ಪ್ರಕ್ರಿಯೆಯನ್ನು ಹೆಚ್ಚಿಸುತ್ತಿದೆ. ಇದಕ್ಕಾಗಿ ದೇಶದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಜೊತೆಗೂಡಿರುವ ಇಬೈಕ್‌ಗೊ ಕಂಪನಿಯು ಸುಮಾರು 2 ಸಾವಿರ ಹೈ ರೆಂಜ್ ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಸಲ್ಲಿಸಿದೆ.

ಆಂಪಿಯರ್ ಜೊತೆಗೂಡಿ ಗ್ರಾಹಕರಿಗೆ ಹೈ ರೆಂಜ್ ಮೈಲೇಜ್ ಹೊಂದಿರುವ ಇವಿ ಸ್ಕೂಟರ್‌ಗಳನ್ನು ನಿಗದಿತ ಅವಧಿಗೆ ಬಾಡಿಗೆ ಆಧಾರದ ಮೇಲೆ ಮಾಲೀಕತ್ವ ನೀಡಲಿರುವ ಇಬೈಕ್‌ಗೊ ಕಂಪನಿಯು ಆಕರ್ಷಕ ದರಗಳಲ್ಲಿ ರೆಂಟಲ್ ಇವಿ ಸ್ಕೂಟರ್ ನೀಡುವುದಾಗಿ ಹೇಳಿಕೊಂಡಿದೆ.

ಇಬೈಕ್‌ಗೊ ಕಂಪನಿಗೆ 2 ಸಾವಿರ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಶೀಘ್ರದಲ್ಲೇ ವಿತರಣೆ ಮಾಡುವುದಾಗಿ ಹೇಳಿಕೊಂಡಿರುವ ಆಂಪಿಯರ್ ಕಂಪನಿಯು ಈಗಾಗಲೇ ಹಲವಾರು ರೆಂಟಲ್ ಕಂಪನಿಗಳ ಜೊತೆಗೂಡಿ ಇವಿ ಸ್ಕೂಟರ್‌ಗಳನ್ನು ಬಾಡಿಗೆಗೆ ಒದಗಿಸುತ್ತಿದೆ.

ಇದೀಗ ಇಬೈಕ್‌ಗೊ ಕಂಪನಿಯು ಕೂಡಾ ಹಲವು ಹೊಸ ಫೀಚರ್ಸ್‌ಗಳೊಂದಿಗೆ ರೆಂಟಲ್ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಆಂಪಿಯರ್ ಕಂಪನಿಯು ತನ್ನ ಹೈ ಎಂಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪ್ರಮುಖ ಫೀಚರ್ಸ್‌ಗಳ ಅಳವಡಿಕೆಯೊಂದಿಗೆ ವಿತರಣೆ ಮಾಡಲಿದೆ.

ಇನ್ನು ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆಂಪಿಯರ್ ಕಂಪನಿಯು ತನ್ನ ಪ್ರಮುಖ ಸ್ಕೂಟರ್ ಮಾದರಿಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಸೇರ್ಪಡೆಗೊಳಿಸಿದ್ದು, ಹೊಸ ವೆರಿಯೆಂಟ್‌ಗಳು ಅಧಿಕ ಮೈಲೇಜ್, ಅಧಿಕ ಮಟ್ಟದ ಲೋಡಿಂಗ್ ಸಾಮರ್ಥ್ಯ ಹೊಂದಿವೆ.

ಆಂಪಿಯರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ವೆರಿಯೆಂಟ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಕೂಟರ್‌ಗಳಿಂತೂ ಹೈ ಎಂಡ್ ಮಾದರಿಯಾಗಿರಲಿವೆ. ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್‌ಗಳಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಸೌಲಭ್ಯ, ಹೆಚ್ಚಿನ ಮಟ್ಟದ ಲೋಡಿಂಗ್ ಸಾಮಾರ್ಥ್ಯವನ್ನು ನೀಡಲಾಗಿದೆ.

ಹೊಸ ವೆರಿಯೆಂಟ್‌ಗಳನ್ನು ರಿಯೋ, ವಿ48, ಮ್ಯಾಗ್ನಸ್ 60 ಮತ್ತು ಜೀಲ್ ಮಾದರಿಗಳಲ್ಲಿ ಪರಿಚಯಿಸಲಾಗಿದ್ದು, ರಿಯೋ ಪ್ಲಸ್, ರಿಯೋ ಎಲೈಟ್, ವಿ48 ಪ್ಲಸ್, ಮ್ಯಾಗ್ನಸ್ 60 ಸ್ಲೋ ಸ್ಪೀಡ್ ಮತ್ತು ಜೀಲ್ ಇಎಕ್ಸ್ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರಿಯೋ ಪ್ಲಸ್ ಮಾದರಿಯು ರೂ.42,490, ರಿಯೋ ಎಲೈಟ್ ರೂ.42,999, ವಿ48 ಪ್ಲಸ್ ರೂ.36,190, ಮ್ಯಾಗ್ನಸ್ 60 ಸ್ಲೋ ಸ್ಪೀಡ್ ರೂ.49,999 ಮತ್ತು ಜೀಲ್ ಇಎಕ್ಸ್ ಮಾದರಿಯು ರೂ.66,949 ಬೆಲೆ ಹೊಂದಿದೆ.

ಹೊಸ ಇವಿ ಸ್ಕೂಟರ್ ವೆರಿಯೆಂಟ್‌ಗಳಲ್ಲಿ ಮೈಲೇಜ್ ಹೆಚ್ಚಳಕ್ಕಾಗಿ ಲೀಥಿಯಂ ಮತ್ತು ಲೀಡ್ ಆ್ಯಸಿಡ್ ಬ್ಯಾಟರಿ ಮಾದರಿಗಳನ್ನು ಅಳವಡಿಸಲಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 65 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಅಪ್‌ಗ್ರೇಡ್ ಮಾದರಿಗಳಲ್ಲಿ ಶೇ.10 ಮೈಲೇಜ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಸ ಮಾದರಿಗಳಲ್ಲಿ ಜೋಡಣೆ ಮಾಡಲಾಗಿದೆ.


Click it and Unblock the Notifications








