ಬರಲಿದೆ ಮತ್ತೊಂದು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್: ಕಡಿಮೆ ಖರ್ಚಿನಲ್ಲಿ ಓಡಾಡಬಹುದು!

ಗ್ರೀವ್ಸ್ ಎಲೆಕ್ಟ್ರಿಕ್‌ ಇ-ಮೊಬಿಲಿಟಿ ಅಂಗಸಂಸ್ಥೆಯಾದ ಆಂಪಿಯರ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗೆ ಆಂಪಿಯರ್ ಎನ್‌ಎಕ್ಸ್‌ಜಿ (Ampere NXG) ಎಂಬ ಕೋಡ್ ನೇಮ್ ನೀಡಲಾಗಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಿಂದ ಪ್ರೀಮಿಯಂ ಕೊಡುಗೆಯಾಗಲಿದೆ.

ಹೊಸ ಆಂಪಿಯರ್ NXG ಎಲೆಕ್ಟ್ರಿಕ್ ಸ್ಕೂಟರ್ ಕಳೆದ ಕೆಲವು ತಿಂಗಳುಗಳಿಂದ ಟೆಸ್ಟ್ ನಡೆಸುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಏಪ್ರಿಲ್ 30 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಆಂಪಿಯರ್ NXG ಕಾನ್ಸೆಪ್ಟ್ ಅನ್ನು ಕಳೆದ ವರ್ಷ 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಟ್ರೇಡ್‌ಮಾರ್ಕ್ ಫೈಲಿಂಗ್‌ನಿಂದ ಸೂಚಿಸಿದಂತೆ ಅಂತಿಮ ಉತ್ಪಾದನಾ ಆವೃತ್ತಿಯನ್ನು ನೆಕ್ಸಸ್ ಎಂದು ಕರೆಯುವ ಸಾಧ್ಯತೆಗಳಿದೆ.

Ampere NXG Electric Scooter

ಈ ಹೊಸ ಆಂಪಿಯರ್ NXG ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಖರೀದಿಸಲು ಬಯಸುವವರು ಟೋಜನ್ ಮೊತ್ತ ರೂ.499 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಇನ್ನು ಹೊಸ ಆಂಪಿಯರ್ NXG ಎಲೆಕ್ಟ್ರಿಕ್ ಸ್ಕೂಟರ್ ಈಗಾಗಲೇ ದೇಶದಲ್ಲಿ ಅನೇಕ ಬಾರಿ ರೋಡ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಮಾದರಿಯ ಕೆಲವು ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ.

ಹೊಸ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದು ಕಾಶ್ಮೀರದಿಂದ ಕನ್ಯಾಕುಮಾರಿ ರೈಡ್ ಅನ್ನು ಸಹ ಪೂರ್ಣಗೊಳಿಸಿದೆ ಜೊತೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತನ್ನನ್ನು ನೋಂದಾಯಿಸಿಕೊಂಡಿದೆ. ಮುಂಬರುವ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ತಮ್ಮ ದೈನಂದಿನ ಬಳಕೆಗಾಗಿ ದ್ವಿಚಕ್ರ ವಾಹನವನ್ನು ಹುಡುಕುತ್ತಿರವರನ್ನು ಮತ್ತು ಕುಟುಂಬ-ಆಧಾರಿತ ಖರೀದಿದಾರರನ್ನು ಗುರಿಯಾಗಿರಿಸಿಕೊಂಡಿದೆ.

Ampere NXG Electric Scooter

ಈ ಹೊಸ ಎಲೆಕ್ಟಿಕ್ ಸ್ಕೂಟರ್ ಯಾವುದೇ ಸ್ಪೋರ್ಟಿ ಟಚ್ ಇಲದೇ ವಿನ್ಯಾಸವನ್ನು ಸರಳವಾಗಿ ಇರಿಸಲಾಗಿದೆ. ಅಲ್ಲದೇ ಇ ಸ್ಕೂಟರ್ ನಲ್ಲಿ ಪ್ರಾಯೋಗಿಕ ಅಂಶಗಳಿಗೆ ಎಲ್ಲಾ ಗಮನವನ್ನು ನೀಡಲಾಗಿದೆ. ಒಟ್ಟಾರೆಯಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ದೊಡ್ಡ ಗಾತ್ರದಲ್ಲಿ ಕಾಣುತ್ತದೆ. ಇದು ದೀರ್ಘವಾದ ಸೀಟ್ ಮತ್ತು ನೈಜ-ಜೀವನದ ಪ್ರಾಯೋಗಿಕ ಬಳಕೆಯ ಆಸಕ್ತಿಯಲ್ಲಿ ದೊಡ್ಡ ಫ್ಲಾಟ್ ಫ್ಲೋರ್ಬೋರ್ಡ್ ಅನ್ನು ಪಡೆಯುತ್ತದೆ.

ಈ ಆಂಪಿಯರ್ ಎನ್‌ಎಕ್ಸ್‌ಜಿ ಎಲೆಕ್ಟ್ರಿಕ್ ಸ್ಕೂಟರ್ ಹೊಚ್ಚ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 12-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಫೀಚರ್ಸ್ ಗಳನ್ನು ನೀಡಲಾಗಿದೆ.

ಫೀಚರ್ಸ್ ಗಳಲ್ಲಿ ಎಲ್ಇಡಿ ಲ್ಯಾಂಪ್ ಗಳನ್ನು ಮತ್ತು ಬ್ಲೂಟೂತ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ನ್ಯಾವಿಗೇಷನ್‌ನೊಂದಿಗೆ ಫುಲ್ ಡಿಜಿಟಲ್ TFT ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಬಹುದು. ಈ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಜಾಜ್ ಚೇತಕ್ ಮತ್ತು ಟಿವಿಎಸ್ ಐಕ್ಯೂಬ್ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ಎಥರ್ ರಿಜ್ಟಾ ಮತ್ತು ಓಲಾ ಎಸ್ 1 ಎಕ್ಸ್‌ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 24, 2024, 13:43 [IST]
English summary
New ampere nxg electric scooter launch date details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+