ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಗ್ರೀವ್ಸ್ ಎಲೆಕ್ಟ್ರಿಕ್‌ ಇ-ಮೊಬಿಲಿಟಿ ಅಂಗಸಂಸ್ಥೆಯಾದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು ತನ್ನ ಇ-ವಾಹನ ಉತ್ಪನ್ನಗಳ ಮಾರಾಟಕ್ಕೆ ವಿವಿಧ ತಂತ್ರಗಳನ್ನು ರೂಪಿಸುತ್ತಿದೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ದೇಶಾದ್ಯಂತ ಈಗಾಗಲೇ ಪ್ರಮುಖ ನಗರಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆದಿರುವ ಆಂಪಿಯರ್ ಕಂಪನಿಯು ಇದೀಗ ಇ-ಕಾಮರ್ಸ್ ಪ್ಲ್ಯಾಟ್‌ಫಾರ್ಮ್‌ನಲ್ಲೂ ಮಾರಾಟಕ್ಕೆ ಚಾಲನೆ ನೀಡಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಆಂಪಿಯರ್ ಕಂಪನಿಯು ಇ-ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದ್ದು, ಫ್ಲಿಪ್‌ಕಾರ್ಟ್ ಆಟೋ ವಿಭಾಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಗೆ ಅವಕಾಶ ನೀಡಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಇ-ಕಾಮರ್ಸ್ ಪ್ಲ್ಯಾಟ್‌ಫಾರ್ಮ್ ಮೂಲಕ ಬುಕಿಂಗ್ ಮಾಡಿ ಇ-ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ವಿಶೇಷ ರಿಯಾಯ್ತಿಗಳನ್ನು ಸಹ ಘೋಷಣೆ ಮಾಡಿದ್ದು, ಶೀಘ್ರದಲ್ಲಿಯೇ ಕಂಪನಿಯು ಮತ್ತಷ್ಟು ಹೊಸ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಖರೀದಿಗೆ ಅವಕಾಶ ನೀಡಲಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ದೇಶಾದ್ಯಂತ ಸದ್ಯ ಇ-ಕಾಮರ್ಸ್ ಪ್ಲ್ಯಾಟ್‌ಫಾರ್ಮ್ ಮೂಲಕ ಇ-ವಾಹನ ಖರೀದಿ ಪ್ರಕ್ರಿಯೆ ಹೆಚ್ಚುತ್ತಿರುವುದರಿಂದ ಹೊಸ ಮಾರಾಟ ವಿಭಾಗದ ಮೇಲೆ ಆಂಪಿಯರ್ ವಿಶೇಷ ಆಸಕ್ತಿ ವಹಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಪ್ರಸ್ತುತ ಮಾರುಕಟ್ಟೆಯಲ್ಲಿ 190 ನಗರಗಳಲ್ಲಿ ತನ್ನ ಮಾರಾಟ ಜಾಲ ಹೊಂದಿರುವ ಆಂಪಿಯರ್ ಕಂಪನಿಯು ಬರೋಬ್ಬರಿ 300 ಮಾರಾಟ ಮಳಿಗೆಗಳ ಮೂಲಕ ಗ್ರಾಹಕರ ತಲುಪಲು ಯಶಸ್ವಿಯಾಗಿರುವ ಕಂಪನಿಯು ಕಳೆದ ವರ್ಷ 50 ಸಾವಿರ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಹೊಸ ಗುರಿಸಾಧನೆಗೆ ಪಾತ್ರವಾಗಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಕಳೆದ 13 ವರ್ಷಗಳಲ್ಲಿ ಮೊದಲ ಬಾರಿಗೆ ಕಳೆದ ಎರಡು ವರ್ಷಗಳಿಂದ ಪೆಟ್ರೋಲ್ ವಾಹನಗಳ ಅಬ್ಬರದ ನಡುವೆಯು ಪರಿಸರ ಸ್ನೇಹಿ ವಾಹನಗಳ ಮಾರಾಟದಲ್ಲಿ ಬದ್ದತೆ ಪ್ರದರ್ಶಿಸುವ ಮೂಲಕ ಹೊಸ ಸಾಧನೆಯತ್ತ ಮುನ್ನುಗ್ಗುತ್ತಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್‌ಗಳಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಸೌಲಭ್ಯ, ಹೆಚ್ಚಿನ ಮಟ್ಟದ ಲೋಡಿಂಗ್ ಸಾಮಾರ್ಥ್ಯವನ್ನು ನೀಡಲಾಗಿದ್ದು, ಹೊಸ ವೆರಿಯೆಂಟ್‌ಗಳನ್ನು ರಿಯೋ, ವಿ48, ಮ್ಯಾಗ್ನಸ್ 60, ಜೀಲ್, ಮ್ಯಾಗ್ನಸ್ ಇಎಕ್ಸ್ ಮಾದರಿಗಳಲ್ಲಿ ಪರಿಚಯಿಸಲಾಗಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ಎಲೆಕ್ಟ್ರಿಕ್ ವಾಹನಗಳ ಮಾದರಿಗಳಿಗೆ ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಹರಿದುಬರುತ್ತಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಆಂಪಿಯರ್ ಕಂಪನಿಯು ಸಹ ಇವಿ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇತ್ತೀಚೆಗೆ ಗ್ರಾಹಕರ ಬೇಡಿಕೆಯೆಂತೆ ಮತ್ತೊಂದು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ. ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯನ್ನು ಆಧರಿಸಿ ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಮೈಲೇಜ್ ರೇಂಜ್ ಹೊಂದಿರುವ ಮ್ಯಾಗ್ನಸ್ ಇಎಕ್ಸ್(Magnus EX) ಮಾದರಿಯನ್ನು ಬಿಡುಗಡೆ ಮಾಡಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಹೊಸ ಮ್ಯಾಗ್ನಸ್ ಇಎಕ್ಸ್ ಮಾದರಿಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 68,999 ಬೆಲೆ ಹೊಂದಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಆಂಪಿಯರ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಇವಿ ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಆಂಪಿಯರ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ದೀರ್ಘ ಶ್ರೇಣಿಯ ಜೊತೆಗೆ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಇದು ಪ್ರತಿ ಚಾರ್ಜ್‌ಗೆ ಗರಿಷ್ಠ 121 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿಯೊಂದಿಗೆ 1200-ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಇದು ಇವಿ ಸ್ಕೂಟರ್ ಆರಂಭಿಕ ಮಾದರಿಗಳ ವಿಭಾಗದಲ್ಲಿರುವ ಅತ್ಯಧಿಕ ರೇಟಿಂಗ್ ಹೊಂದಿರುವ ಆವೃತ್ತಿಯಾಗಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಮ್ಯಾಗ್ನಸ್ ಇಎಕ್ಸ್ ಇ-ಸ್ಕೂಟರ್‌ನಲ್ಲಿ ಡಿಟ್ಯಾಚೇಬಲ್, ಹಗುರವಾದ ಮತ್ತು ಪೋರ್ಟಬಲ್ ಸುಧಾರಿತ ಲೀಥಿಯಂ ಬ್ಯಾಟರಿ ಜೋಡಿಸಿರುವುದರಿಂದ ಸ್ಕೂಟರ್ ಮಾಲೀಕರು ಪ್ಲಗ್-ಆನ್-ದಿ-ವಾಲ್ ಚಾರ್ಜ್ ಪಾಯಿಂಟ್‌ನಲ್ಲಿ ಯಾವುದೇ 5-amp ಸಾಕೆಟ್ ಮೂಲಕ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಹೊಸ ಇವಿ ಸ್ಕೂಟರ್‌ನಲ್ಲಿ ಡಿಟ್ಯಾಚೇಬಲ್ ಬ್ಯಾಟರಿ ಸೆಟಪ್ ಸೇರಿಸಿರುವುದರಿಂದ ಮನೆ, ಕಚೇರಿ, ಕಾಫಿ ಶಾಪ್ ಅಥವಾ ಯಾವುದೇ ಕಡೆಗಳಲ್ಲಿ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಈ ಸ್ಕೂಟರ್‌ನಲ್ಲಿ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದೀಗ ಫ್ಲಿಪ್‌ ಕಾರ್ಟ್‌ನಲ್ಲೂ ಖರೀದಿಗೆ ಲಭ್ಯ

ಸ್ಕೂಟರ್ ಮಾಲೀಕರು ತಮ್ಮ ಆದ್ಯತೆಗೆ ಅನುಗುಣವಾಗಿ ಇಕೋ ಮೋಡ್ ಮತ್ತು ಪವರ್ ಮೋಡ್‌ನಲ್ಲಿ ರೈಡ್ ಮಾಡಬಹುದಾಗಿದ್ದು, ಇಕೋ ಮೋಡ್‌ನಲ್ಲಿ ಸ್ಕೂಟರ್ ಮೈಲೇಜ್ ಗರಿಷ್ಠ ಪ್ರಮಾಣದಲ್ಲಿ ಹಿಂದಿರುಗಿಸಲಿದೆ.

ಪವರ್ ಮೋಡ್ ಮೂಲಕ ಉತ್ತಮ ವೇಗ ಪಡೆದುಕೊಳ್ಳಬಹುದಾಗಿದ್ದು, ಸೊನ್ನೆಯಿಂದ 40 ಕಿ.ಮೀ ಸ್ಪೀಡ್‌ನಲ್ಲಿ ಚಲಿಸಲು 10 ಸೆಕೆಂಡು ತೆಗೆದುಕೊಳ್ಳುತ್ತದೆ. ಹಾಗೆಯೇ ಸ್ಕೂಟರ್ ಚಾಲನೆ ಅನುಕೂಲಕರವಾಗಿ ಹೊಸ ವಿನ್ಯಾಸದ ವಿಶಾಲವಾದ ಆಸನಗಳನ್ನು ನೀಡಲಾಗಿದ್ದು, 450 ಎಂಎಂ ಲೆಗ್‌ರೂಮ್ ಸ್ಪೇಸ್ ಸಿಗುತ್ತದೆ.

Most Read Articles

Kannada
English summary
Ampere electric scooters now available in e commerce platform
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X