ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಜನಪ್ರಿಯವಾಗಿರುವ ಆಂಪಿಯರ್ ಕಂಪನಿಯು ವಿಶೇಷ ಯೋಜನೆಯೊಂದನ್ನು ಘೋಷಿಸಿದೆ. ವಿನಿಮಯ ಯೋಜನೆಯ ಆಧಾರದ ಮೇಲೆ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವುದಾಗಿ ಕಂಪನಿಯು ಪ್ರಕಟಿಸಿದೆ.

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಆಂಪಿಯರ್ ತನ್ನ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳತ್ತ ಜನರನ್ನು ಆಕರ್ಷಿಸಲು ಈ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಗಾಗಿ ಆಂಪಿಯರ್ ಕಂಪನಿಯು ಕ್ರೆಡ್ ಆರ್ ಎಂಬ ಕಂಪನಿಯೊಂದಿಗೆ ಕೈಜೋಡಿಸಿದೆ.

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಈ ಎರಡೂ ಕಂಪನಿಗಳು ಜತೆಗೂಡಿ ಹಳೆಯ ಸ್ಕೂಟರ್‌ಗಳನ್ನು ವಿನಿಮಯ ಮಾಡಿಕೊಂಡು ಹೊಸ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಲುಪಿಸಲು ಸಜ್ಜಾಗಿವೆ. ಈ ಕಂಪನಿಗಳು ಹೋಂಡಾ ಆಕ್ಟಿವಾದಿಂದ ಟಿವಿಎಸ್ ಜೂಪಿಟರ್ ವರೆಗೆ ಎಲ್ಲಾ ರೀತಿಯ ಸ್ಕೂಟರ್‌ಗಳನ್ನು ವಿನಿಮಯ ಮಾಡಿಕೊಳ್ಳಲಿವೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಇತ್ತೀಚೆಗೆ ಎಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯು ಸಹ ಇದೇ ರೀತಿಯ ಯೋಜನೆಯನ್ನು ಘೋಷಿಸಿದೆ. ಈಗ ಆಂಪಿಯರ್ ಕಂಪನಿಯು ಸಹ ವಿನಿಮಯ ಯೋಜನೆಯನ್ನು ಘೋಷಿಸಿದೆ.

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಕ್ರೆಡ್ ಆರ್, ಎಕ್ಸ್ ಚೇಂಜ್ ಮಾಡಲು ಬರುವ ಸ್ಕೂಟರ್ ಗಳ ಗುಣಮಟ್ಟ ಹಾಗೂ ದಾಖಲಾತಿಗಳನ್ನು ಪರಿಶೀಲಿಸುತ್ತದೆ. ನಂತರ ಹಳೆಯ ಸ್ಕೂಟರ್‌ಗೆ ಬೆಲೆಯನ್ನು ನಿಗದಿಪಡಿಸಿ, ಅದನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಇದರ ಆಧಾರದ ಮೇಲೆ ಗ್ರಾಹಕರು ಖರೀದಿಸಲು ಬಯಸುವ ಹೊಸ ಆಂಪಿಯರ್ ಸ್ಕೂಟರ್‌ನ ಮೌಲ್ಯ ಹಾಗೂ ವಿನಿಮಯ ಮಾಡಿಕೊಂಡ ಹಳೆಯ ಸ್ಕೂಟರ್‌ನ ಮೌಲ್ಯವನ್ನು ಲೆಕ್ಕಹಾಕಲಾಗುತ್ತದೆ. ನಂತರ ಹೆಚ್ಚುವರಿ ಹಣವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಈ ವಿಶೇಷ ವಿನಿಮಯ ಯೋಜನೆಯ ಮೊದಲ ಹಂತವನ್ನು ಬೆಂಗಳೂರು, ನವದೆಹಲಿ, ಪುಣೆ ಹಾಗೂ ಹೈದರಾಬಾದ್‌ಗಳಲ್ಲಿ ಆರಂಭಿಸಲಾಗಿದೆ. ಈ ವಿಶೇಷ ಸೇವೆಯನ್ನು ಶೀಘ್ರದಲ್ಲೇ ದೇಶದ ಇತರ ನಗರಗಳಲ್ಲಿಯೂ ಆರಂಭಿಸಲಾಗುವುದು ಎಂದು ಆಂಪಿಯರ್ ಕಂಪನಿ ತಿಳಿಸಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಾಗೂ ಮಾಲಿನ್ಯ ಮಟ್ಟವನ್ನು ಕಡಿಮೆಗೊಳಿಸಲು ಆಂಪಿಯರ್ ಕಂಪನಿಯು ಹೆಜ್ಜೆ ಹಾಕಿದೆ. ಕಂಪನಿಯು ಭಾರತದಲ್ಲಿ ಗ್ರೀವ್ಸ್ ಕಾಟನ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ.

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಕರೋನಾ ವೈರಸ್‌ನಿಂದ ಉಂಟಾದ ವಿವಿಧ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಮಾರಾಟ ಹಾಗೂ ಉತ್ಪಾದನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಆರಂಭಿಸಿದೆ. ಇದರ ಅಂಗವಾಗಿ ಈ ವಿನಿಮಯ ಯೋಜನೆಯನ್ನು ಆರಂಭಿಸಿದೆ. ಆಂಪಿಯರ್ ಈ ಹಿಂದೆ ಆಕರ್ಷಕ ಮಾಸಿಕ ಕಂತು ಯೋಜನೆಯನ್ನು ಆರಂಭಿಸಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹಳೆ ಪೆಟ್ರೋಲ್ ಸ್ಕೂಟರ್ ನೀಡಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ

ಆಂಪಿಯರ್ ಭಾರತದಲ್ಲಿರುವ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಇದುವರೆಗೂ 60,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿದೆ. ಈ ಸಂಖ್ಯೆಯು ಶೀಘ್ರದಲ್ಲೇ ಮತ್ತಷ್ಟು ಹೆಚ್ಚಾಗಲಿದೆ ಎಂಬ ಆಶಾಭಾವನೆಯನ್ನು ಕಂಪನಿ ಹೊಂದಿದೆ.

Most Read Articles

Kannada
English summary
Ampere scooter launches old scooter exchange scheme. Read in Kannada.
Story first published: Tuesday, September 15, 2020, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X