ಬಿಎಸ್-6 ಎಫೆಕ್ಟ್- ಎಪ್ರಿಲಿಯಾ ಹೊಸ ಸ್ಕೂಟರ್‌ಗಳ ಬೆಲೆಯಲ್ಲಿ ಭಾರೀ ಏರಿಕೆ..
ಮುಂದಿನ ತಿಂಗಳು ಎಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೊಸ ಎಂಜಿನ್ ಪ್ರೇರಿತ ವಾಹನ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದೀಗ ಬಿಡುಗಡೆಗೆ ಸಿದ್ದವಾಗಿರುವ ಎಪ್ರಿಲಿಯಾ ಸ್ಕೂಟರ್‌ಗಳು ಸಹ ದುಬಾರಿ ಬೆಲೆ ಪಡೆದುಕೊಂಡಿದ್ದು, ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಬಿಎಸ್-4 ವಾಹನಗಳಿಂತಲೂ ಬಿಎಸ್-6 ವಾಹನಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಿದ್ದು, ಹೊಸ ಎಂಜಿನ್ ಜೊತೆಗೆ ವಾಹನಗಳ ಪ್ರಮುಖ ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಲಾಗಿದೆ. ಜೊತೆಗೆ ಹೊಸ ಎಂಜಿನ್‌ನಿಂದಾಗಿ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಇಳಿಕೆಯಾಗಿರುವುದಲ್ಲದೆ ಮೈಲೇಜ್ ಪ್ರಮಾಣವು ಹೆಚ್ಚಳಗೊಂಡಿದೆ. ಆದರೆ ಬೆಲೆ ಏರಿಕೆಯಲ್ಲಿ ಒಂದೇ ಬಾರಿಗೆ ಶೇ. 5ರಿಂದ ಶೇ.20 ಬೆಲೆ ಹೆಚ್ಚಳ ಮಾಡಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಲಿದೆ.

ಸದ್ಯ ಬಿಡುಗಡೆಯ ಸಿದ್ದತೆಯಲ್ಲಿರುವ ಎಪ್ರಿಲಿಯಾ ಹೊಸ ಸ್ಕೂಟರ್‌ಗಳು ಈ ಹಿಂದಿನ ದರಕ್ಕಿಂತಲೂ ದುಬಾರಿ ದರ ಹೊಂದಿದ್ದು, ಕನಿಷ್ಠ ರೂ.18 ಸಾವಿರದಿಂದ ರೂ. 19 ಸಾವಿರ ತನಕ ಹೆಚ್ಚುವರಿ ಬೆಲೆ ಪಡೆದುಕೊಂಡಿವೆ.

ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಗೊಂಡಿದ್ದ ಸ್ಟ್ರೋಮ್ 125 ಸ್ಕೂಟರ್ ಮಾದರಿಯ ಬಿಎಸ್-6 ಎಂಜಿನ್ ಜೋಡಣೆ ನಂತರ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ.86,638 ಬೆಲೆ ಪಡೆದುಕೊಂಡಿದ್ದು, ಇದು ಬಿಎಸ್-4 ಆವೃತ್ತಿಗಿಂತಲೂ ರೂ. 18,696 ದುಬಾರಿಯಾಗಿದೆ.

ಎಸ್ 125 ಸ್ಕೂಟರ್ ಮಾದರಿಯು ಹೊಸ ಎಂಜಿನ್ ಜೋಡಣೆ ನಂತರ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 92,181 ಬೆಲೆ ಪಡೆದುಕೊಂಡಿದ್ದು, ಬಿಎಸ್-4 ಆವೃತ್ತಿಗಿಂತಲೂ ರೂ.18,490 ಹೆಚ್ಚುವರಿ ದರ ಪಡೆದುಕೊಂಡಿದೆ. ಹಾಗೆಯೇ ಎಸ್ಆರ್ 160 ಮಾದರಿಯು ಹೊಸ ಎಂಜಿನ್‌ನೊಂದಿಗೆ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,04,476 ಬೆಲೆ ಹೊಂದಿದ್ದು, ಬಿಎಸ್-4 ಆವೃತ್ತಿಗಿಂತ ರೂ.19,417 ಹೆಚ್ಚುವರಿ ಬೆಲೆ ಪಡೆದುಕೊಂಡಿದೆ.

ಇನ್ನುಳಿದ ಎಸ್160 ಕಾರ್ಬನ್ ಮತ್ತು ಎಸ್ಆರ್ 160 ರೇಸ್ ಆವೃತ್ತಿಯು ಕ್ರಮವಾಗಿ ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,07,570 ಮತ್ತು 1,13,671 ಬೆಲೆ ಹೊಂದಿದ್ದು, ಇವುಗಳು ಬಿಎಸ್-4 ಆವೃತ್ತಿಯ ಬೆಲೆಗಿಂತಲೂ ರೂ.19,441 ಮತ್ತು ರೂ.19,366 ಹೆಚ್ಚುವರಿ ದರ ಪಡೆದುಕೊಂಡಿವೆ.

ಹೊಸ ಎಪ್ರಿಲಿಯಾ ಸ್ಕೂಟರ್‌ಗಳ ಬೆಲೆ(ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ)
| ಸ್ಕೂಟರ್ ಮಾದರಿ | ಬಿಎಸ್-6 ದರ | ಬಿಎಸ್-4 ದರ | ಹೆಚ್ಚಳವಾದ ದರ |
| ಸ್ಟ್ರೋಮ್ 125 | ರೂ. 86,638 | ರೂ. 67,942 | ರೂ. 18,696 |
| ಎಸ್ಆರ್ 125 | ರೂ. 92,181 | ರೂ. 73,691 | ರೂ. 18,490 |
| ಎಸ್ಆರ್ 160 | ರೂ. 104,476 | ರೂ. 85,059 | ರೂ. 19,417 |
| ಎಸ್ಆರ್ 160 ಕಾರ್ಬನ್ | ರೂ. 107,570 | ರೂ. 88,129 | ರೂ. 19,441 |
| ಎಸ್ಆರ್ 160 ರೇಸ್ | ರೂ. 113,671 | ರೂ. 94,305 | ರೂ. 19,366 |

ಇನ್ನು ಹೊಸ ಸ್ಕೂಟರ್‌ಗಳಲ್ಲಿ ಬಿಎಸ್-6 ಎಂಜಿನ್ ಜೋಡಣೆ ನಂತರ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಹೊಸ ಎಮಿಷನ್ ನಿಯಮ ಅನುಗುಣವಾಗಿ ಎಂಜಿನ್ ಸಾಮಾರ್ಥ್ಯಕ್ಕೆ ಅನುಗುಣವಾಗಿ ಪರ್ಫಾಮೆನ್ಸ್‌ನಲ್ಲಿ ಏರಿಳಿಕೆ ಮಾಡಲಾಗಿದೆ.

ಎಂಜಿನ್ ಸಾಮರ್ಥ್ಯಕ್ಕಿಂತೂ ಹೆಚ್ಚು ಹಾರ್ಸ್ ಪವರ್ ನೀಡುವ ವಾಹನ ತಯಾರಕ ಸಂಸ್ಥೆಗಳಿಗೆ ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಬಿಎಸ್-6 ನಿಯಮ ಪಾಲನೆ ಸಾಧ್ಯವಿಲ್ಲದ ಹಲವು ವಾಹನಗಳ ಮಾರಾಟವನ್ನೇ ಸ್ಥಗಿತಗೊಳಿಸಲಾಗಿದೆ.

ಇದೀಗ ಎಪ್ರಿಲಿಯಾ ಸಂಸ್ಥೆಯು ಹೊಸ ನಿಯಮ ಅನುಗುಣವಾಗಿ ಎಂಜಿನ್ ಉನ್ನತೀಕರಣದ ಜೊತೆಗೆ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯನ್ನು ಕಾಯ್ದುಕೊಂಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಸ್ಕೂಟರ್ ಮಾದರಿಗಳಲ್ಲದೆ ಮ್ಯಾಕ್ಸಿ ಸ್ಕೂಟರ್ ಮಾದರಿಗಳನ್ನು ಭಾರತದಲ್ಲೂ ಬಿಡುಗಡೆಗೆ ಎಪ್ರಿಲಿಯಾ ಸಿದ್ದವಾಗುತ್ತಿದೆ.


Click it and Unblock the Notifications