ಆಟೋ ಎಕ್ಸ್‌ಪೋ 2020: ಮ್ಯಾಕ್ಸಿ ಸ್ಕೂಟರ್ ಅನಾವರಣಗೊಳಿಸಿದ ಎಪ್ರಿಲಿಯಾ
ಎಪ್ರಿಲಿಯಾ ಕಂಪನಿಯು ತನ್ನ ಹೊಸ 160 ಸಿಸಿಯ ಮ್ಯಾಕ್ಸಿ ಸ್ಕೂಟರ್ ಅನ್ನು ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ಸ್ಕೂಟರ್ ಸದ್ಯದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಎಪ್ರಿಲಿಯಾ ಎಸ್‍ಎಕ್ಸ್ ಆರ್ ಸ್ಕೂಟರ್ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಸ್ಕೂಟರಿಗೆ ಪೈಪೋಟಿ ನೀಡಲಿದೆ. ಎಸ್‍ಎಕ್ಸ್ ಆರ್ 160 ಸ್ಕೂಟರ್ ಇಟಲಿ ಮೂಲದ ಎಪ್ರಿಲಿಯಾ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಮೊದಲ ಮ್ಯಾಕ್ಸಿ ಸ್ಕೂಟರ್ ಆಗಿದೆ.

ಹೊಸ ಎಪ್ರಿಲಿಯಾ ಎಸ್‍ಎಕ್ಸ್ ಆರ್ 160 ಮ್ಯಾಕ್ಸಿ ಸ್ಕೂಟರ್ ಹಲವಾರು ಫೀಚರ್, ಎಕ್ವಿಪ್‍ಮೆಂಟ್‍ಗಳ ಜೊತೆಗೆ ಬೋಲ್ಡ್ ಹಾಗೂ ಸ್ಟ್ರೈಕಿಂಗ್ ಡಿಸೈನ್ ಅನ್ನು ಹೊಂದಿದೆ. ಎಸ್‍ಎಕ್ಸ್ ಆರ್ 160 ಸ್ಕೂಟರ್ ಮುಂಭಾಗದ ಏಪ್ರಾನ್‍ನಲ್ಲಿ ಡ್ಯುಯಲ್ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದೆ.

ಈ ಡ್ಯುಯಲ್ ಹೆಡ್‍ಲ್ಯಾಂಪ್‍ಗಳಿಗೆ ಎಲ್‍ಇಡಿ ಡಿಆರ್‍ಎಲ್‍ಗಳನ್ನು ಜೋಡಿಸಲಾಗಿದೆ. ಮುಂಭಾಗದಲ್ಲಿರುವ ದೊಡ್ಡ ಗಾತ್ರದ ವಿಂಡ್‍ಸ್ಕ್ರೀನ್, ಡ್ಯುಯಲ್ ಟೋನ್ ರೆಡ್ ಹಾಗೂ ಬ್ಲಾಕ್ ಬಣ್ಣವನ್ನು ಹೊಂದಿದ್ದು, ಈ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಈ ಸ್ಕೂಟರಿನ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್‍ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್‍ಗಳು ಸಹ ಈ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಸ್ಕೂಟರ್ ಸವಾರ ಹಾಗೂ ಹಿಂಬದಿಯ ಪ್ರಯಾಣಿಕರಿಗೆ ಆರಾಮದಾಯಕವಾಗಿರುವ ಸೀಟ್‍ಗಳನ್ನು ನೀಡಲಾಗಿದೆ.

ಈ ಸ್ಕೂಟರಿನ ಹಿಂಭಾಗದಲ್ಲಿ ಸ್ಲೀಕ್ ಆಗಿರುವ ಎಲ್‍ಇಡಿ ಟೇಲ್‍ಲೈಟ್‍ಗಳಿವೆ. ಎಪ್ರಿಲಿಯಾದ ಈ ಸ್ಕೂಟರ್ ಹಲವಾರು ಫೀಚರ್ ಹಾಗೂ ಎಕ್ವಿಪ್‍ಮೆಂಟ್‍ಗಳನ್ನು ಹೊಂದಿದೆ. ಇವುಗಳಲ್ಲಿ ಸ್ಟೈಲಿಶ್ ಅಲಾಯ್ ವ್ಹೀಲ್, ಡಿಸ್ಕ್ ಬ್ರೇಕ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ದೊಡ್ಡದಾದ ಅಂಡರ್ ಸೀಟ್ ಸ್ಟೋರೇಜ್‍ಗಳು ಸೇರಿವೆ.

ಎಪ್ರಿಲಿಯಾ ಕಂಪನಿಯು ಈ ಮ್ಯಾಕ್ಸಿ ಸ್ಕೂಟರ್ ಉತ್ಪಾದಿಸುವ ಪವರ್ ಅಂಕಿ ಅಂಶಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಅನಾವರಣಗೊಳಿಸುವ ಸಮಯದಲ್ಲಿ ಎಪ್ರಿಲಿಯಾ ಕಂಪನಿಯು ಈ ಸ್ಕೂಟರಿನ ಬುಕ್ಕಿಂಗ್ ಈ ವರ್ಷದ ಆಗಸ್ಟ್ ನಲ್ಲಿ ಆರಂಭಿಸುವುದಾಗಿ ತಿಳಿಸಿದೆ. ಈ ಸ್ಕೂಟರ್ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಎಪ್ರಿಲಿಯಾ ಎಸ್‍ಎಕ್ಸ್ ಆರ್ 160 ಮ್ಯಾಕ್ಸಿ ಸ್ಕೂಟರ್ ಈ ವರ್ಷದ ಕೊನೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿಯೇ ಈ ಸ್ಕೂಟರ್ ಅನ್ನು ಉತ್ಪಾದಿಸುವ ಕಾರಣಕ್ಕೆ ಈ ಸ್ಕೂಟರಿನ ಬೆಲೆ ಕಡಿಮೆಯಿರುವ ಸಾಧ್ಯತೆಗಳಿವೆ. ಈ ಸ್ಕೂಟರ್ ಬಿಡುಗಡೆಯಾದ ನಂತರ ಸುಜುಕಿ ಬರ್ಗ್‍ಮನ್ ಸ್ಟ್ರೀಟ್ ಹಾಗೂ ಹೋಂಡಾ ಗ್ರೇಜಿಯಾ ಸ್ಕೂಟರ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








