ಜೂನ್ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಬಜಾಜ್ ಆಟೋ
ಬಜಾಜ್ ಆಟೋ ಕಂಪನಿಯು ತನ್ನ 2020ರ ಜೂನ್ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಜೂನ್ ತಿಂಗಳ ಮಾರಾಟದಲ್ಲಿ 31%ನಷ್ಟು ಕುಸಿತ ಕಂಡುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2019ರ ಜೂನ್ ತಿಂಗಳಿನಲ್ಲಿ 4,04,624 ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ ಈ ವರ್ಷದ ಜೂನ್‌ನಲ್ಲಿ 2,78,097 ವಾಹನಗಳು ಮಾರಾಟವಾಗಿವೆ. 2019ರ ಜೂನ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ಜೂನ್ ತಿಂಗಳಿನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವು 34%ನಷ್ಟು ಕುಸಿದಿದೆ ಎಂದು ಕಂಪನಿ ತಿಳಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ 2020ರ ಜೂನ್ ತಿಂಗಳಿನಲ್ಲಿ 1,51,189 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,29,225 ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕಂಪನಿಯ ದ್ವಿಚಕ್ರ ವಾಹನ ಮಾರಾಟವು ಈ ವರ್ಷದ ಜೂನ್ ತಿಂಗಳಿನಲ್ಲಿ 27%ನಷ್ಟು ಕುಸಿದು ಒಟ್ಟಾರೆಯಾಗಿ 2,55,122 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಇನ್ನು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ1,46,695 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು.

2019ರ ಜೂನ್ ತಿಂಗಳಿನಲ್ಲಿ 1,99,340 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಕಮರ್ಷಿಯಲ್ ವೆಹಿಕಲ್ ಸೆಗ್ ಮೆಂಟಿನಲ್ಲಿ ಜೂನ್ ತಿಂಗಳಿನ ಒಟ್ಟು ಮಾರಾಟವು 57,975 ಯುನಿಟ್ ಗಳಾಗಿದ್ದು, 2019ರ ಜೂನ್ ತಿಂಗಳಿನಲ್ಲಿ 53,333 ಯುನಿಟ್‌ಗಳು ಮಾರಾಟವಾಗಿದ್ದವು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಮೂಲಕ ಕಳೆದ ವರ್ಷದ ಜೂನ್ ತಿಂಗಳಿಗಿಂತ ಈ ವರ್ಷದ ಜೂನ್ ತಿಂಗಳ ಮಾರಾಟವು 57%ನಷ್ಟು ಕಡಿಮೆಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಕಮರ್ಷಿಯಲ್ ವಾಹನಗಳ ಮಾರಾಟವು 85%ನಷ್ಟು ಕಡಿಮೆಯಾಗಿದೆ.

ಈ ವರ್ಷದ ಜೂನ್ ತಿಂಗಳಿನಲ್ಲಿ 4,494 ಯುನಿಟ್ ಮಾರಾಟವಾಗಿದ್ದರೆ, 2019ರ ಜೂನ್ ತಿಂಗಳಿನಲ್ಲಿ 29,885 ಯುನಿಟ್ ಗಳು ಮಾರಾಟವಾಗಿದ್ದವು. 2019ರ ಜೂನ್ ತಿಂಗಳಿನಲ್ಲಿ ವಾಹನ ರಫ್ತು ಪ್ರಮಾಣವು 28%ನಷ್ಟು ಕುಸಿದು 1,26,908 ವಾಹನಗಳನ್ನು ರಫ್ತು ಮಾಡಲಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

2019ರ ಜೂನ್ ತಿಂಗಳಿನಲ್ಲಿ 1,75,399 ವಾಹನಗಳನ್ನು ರಫ್ತು ಮಾಡಲಾಗಿತ್ತು. ಬಜಾಜ್ ಕಂಪನಿಯ ವರದಿಗಳ ಪ್ರಕಾರ, 2020-21ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್-ಜೂನ್ ಅವಧಿಯಲ್ಲಿ 4,43,103 ಯುನಿಟ್ ವಾಹನಗಳು ಮಾರಾಟವಾಗಿವೆ.

2019-20ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 12,47,174 ವಾಹನಗಳು ಮಾರಾಟವಾಗಿದ್ದವು. ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆಯನ್ನು ಪುನರಾರಂಭಿಸಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಇದರ ಜೊತೆಗೆ ಬಜಾಜ್ ಆಟೋ ಕಂಪನಿಯು ತನ್ನ ಸಪ್ಲೈ ಚೈನ್ ಅನ್ನು ಅಪ್ ಡೇಟ್ ಮಾಡುತ್ತಿದೆ. ತನ್ನ ಡೀಲರ್ ಗಳಿಗೆ ವಾಹನಗಳನ್ನು ಒದಗಿಸುತ್ತಿದೆ.


Click it and Unblock the Notifications