ಸಿಬ್ಬಂದಿ ವೇತನ ಕಡಿತಕ್ಕೆ ಮುಂದಾದ ಬಜಾಜ್ ಆಟೋ
ಕಳೆದ ತಿಂಗಳು, ಬಜಾಜ್ ಆಟೋ ಕಂಪನಿಯ ಔರಂಗಾಬಾದ್ ಉತ್ಪಾದನಾ ಘಟಕದ ಇಬ್ಬರು ಉದ್ಯೋಗಿಗಳು ಕರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದರು. ಇದರ ಜೊತೆಗೆ ಇದೇ ಉತ್ಪಾದನಾ ಘಟಕದಲ್ಲಿದ್ದ ಇತರ 140 ಜನ ಕಾರ್ಮಿಕರು ಸೋಂಕಿಗೆ ಒಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಬಜಾಜ್ ಆಟೋ ಔರಂಗಾಬಾದ್‌ನ ವಾಲುಜ್ ಉತ್ಪಾದನಾ ಘಟಕದಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಸ್ಥಗಿತಗೊಳಿಸುವ ಸಂದರ್ಭದಲ್ಲಿ ಕಂಪನಿಯು ತನ್ನ ಔರಂಗಾಬಾದ್ ಉತ್ಪಾದನಾ ಘಟಕದ ನೌಕರರ ವೇತನವನ್ನು 50%ನಷ್ಟು ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸುವಂತೆ ನೌಕರರ ಸಂಘವು ಕಂಪನಿಯನ್ನು ಒತ್ತಾಯಿಸಿತ್ತು.

ಇದರ ಜೊತೆಗೆ ಔರಂಗಾಬಾದ್ ನಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಕಾರಣಕ್ಕೆ ಅಲ್ಲಿನ ಸ್ಥಳೀಯ ಆಡಳಿತವು ಜುಲೈ 10ರಿಂದ ಜುಲೈ 18ರವರೆಗೆ ಔರಂಗಾಬಾದ್ ನಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಲಾಕ್‌ಡೌನ್ ಸಂಬಂಧ ಸ್ಥಳೀಯ ಆಡಳಿತದಿಂದ ಕಂಪನಿಗೆ ಇನ್ನೂ ಯಾವುದೇ ಅಧಿಸೂಚನೆ ಬಂದಿಲ್ಲ ಎಂದು ಬಜಾಜ್ ಕಂಪನಿ ಹೇಳಿದೆ. ಜುಲೈ 8 ಹಾಗೂ 9ರಂದು ಕೆಲಸಕ್ಕೆ ಬಂದಿರುವ ಹಾಗೂ ಲಾಕ್‌ಡೌನ್ ಮುಗಿದ ಮೊದಲ ದಿನದಿಂದ ಕೆಲಸಕ್ಕೆ ಬರುವ ನೌಕರರು ಮಾತ್ರ 50%ನಷ್ಟು ವೇತನ ಪಡೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ವರದಿಗಳ ಪ್ರಕಾರ, ಬಜಾಜ್ ಆಟೋದ ವಿಭಾಗೀಯ ವ್ಯವಸ್ಥಾಪಕರಾದ ಅನಿಲ್ ಮೊಹೈಟ್ ರವರು ಈಗಾಗಲೇ ಅರ್ಧದಷ್ಟು ವೇತನವನ್ನು ಕಡಿತಗೊಳಿಸುವನಿರ್ಧಾರದ ಬಗ್ಗೆ ಔರಂಗಾಬಾದ್ ಘಟಕದಲ್ಲಿರುವ ಕಾರ್ಮಿಕರಿಗೆ ನೋಟಿಸ್ ನೀಡಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸ್ಥಳೀಯ ಆಡಳಿತವು ಲಾಕ್ ಡೌನ್ ಘೋಷಿಸಿದರೆ ಹಾಗೂ ಘಟಕವನ್ನು ಮುಚ್ಚಬೇಕಾದರೆ, ನೌಕರರಿಗೆ 50%ನಷ್ಟು ಮಾತ್ರ ವೇತನ ನೀಡಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಉತ್ಪಾದನಾ ಘಟಕದಲ್ಲಿ ಈವರೆಗೆ 403 ಉದ್ಯೋಗಿಗಳಿಗೆ ಕರೋನಾ ವೈರಸ್ ಸೋಂಕು ತಗುಲಿದ್ದು, 7 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಎಂದು ಬಜಾಜ್ ಆಟೋದ ಕಾರ್ಮಿಕ ಸಂಘ ತಿಳಿಸಿದೆ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಕರೋನಾ ಸಂತ್ರಸ್ತರ ಚಿಕಿತ್ಸೆ ಹಾಗೂ ಆರೈಕೆ ವೆಚ್ಚವನ್ನು ಭರಿಸುವಂತೆ ನೌಕರರ ಸಂಘವು ಕಂಪನಿಯ ಮ್ಯಾನೇಜ್ ಮೆಂಟಿಗೆ ಪತ್ರ ಬರೆದಿದೆ. ಇದರ ಜೊತೆಗೆ ಉತ್ಪಾದನಾ ಘಟಕದ ಬಳಿ ಕೋವಿಡ್ -19 ಕೇಂದ್ರವನ್ನು ತೆರೆಯುವಂತೆ ಬೇಡಿಕೆಯಿಟ್ಟಿದೆ.


Click it and Unblock the Notifications








