ಲಾಕ್‌ಡೌನ್ ಎಫೆಕ್ಟ್- ಸದ್ಯಕ್ಕಿಲ್ಲ ಚೇತಕ್ ಇವಿ ಸ್ಕೂಟರ್ ಉತ್ಪಾದನೆ ಮತ್ತು ಮಾರಾಟ
ಕರೋನಾ ವೈರಸ್ ಹೊಡೆದೊಡಿಸಲು ಲಾಕ್‌ಡೌನ್ ಪ್ರಮುಖ ಅಸ್ತ್ರವಾಗಿದ್ದು, ಕೆಲವು ಕಠಿಣ ಕ್ರಮಗಳಿಂದಾಗಿ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಆಟೋ ಉದ್ಯಮವು ಭಾರೀ ಪ್ರಮಾಣದ ನಷ್ಟ ಎದುರಿಸುತ್ತಿದ್ದು, ಪರಿಸ್ಥಿತಿಯು ಸಹಜ ಸ್ಥಿತಿಯತ್ತ ಮರಳಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳಲಿದೆ.

ಮೇ 3ರ ನಂತರವು ಲಾಕ್‌ಡೌನ್ ಸಂಪೂರ್ಣವಾಗಿ ತೆರವುಗೊಳ್ಳುವುದು ಅನುಮಾನ ಎನ್ನಲಾಗುತ್ತಿದ್ದು, ಕನಿಷ್ಠ ಮುಂದಿನ 2 ತಿಂಗಳ ಕಾಲ ಸ್ಮಾರ್ಟ್ ಲಾಕ್‌ಡೌನ್ ಅನುಸರಿಸಲೇಬೇಕಾದ ಪರಿಸ್ಥಿತಿಯಿದೆ. 2ನೇ ಲಾಕ್‌ಡೌನ್ ಸಂಪೂರ್ಣವಾಗಿ ತೆಗೆದುಹಾಕಿದ್ದಲ್ಲಿ ಮತ್ತೆ ವೈರಸ್ ಹರಡುವಿಕೆ ಪ್ರಮಾಣವು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿದ್ದು, ಈ ಹಿನ್ನಲೆಯಲ್ಲಿ ಲಾಕ್‌ಡೌನ್ ತೆರೆದ ನಂತರ ಕೆಲವು ಕಠಿಣ ನಿಯಮವು ಮುಂದಿನ ಕೆಲದಿನಗಳ ಕಾಲ ಚಾಲ್ತಿಯಲ್ಲಿರಲಿವೆ.

ಸದ್ಯ 2ನೇ ಹಂತದ ಲಾಕ್‌ಡೌನ್ ಅನ್ನು ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರವು ಹಸಿರು ವಲಯದಲ್ಲಿನ ಕೈಗಾರಿಕೆಗಳಿಗೆ ಉತ್ಪಾದನಾ ಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಲಾಗಿದ್ದು, ಕೇವಲ ಶೇ. 30ರಷ್ಟು ಉದ್ಯೋಗಿಗಳಿಗೆ ಮಾತ್ರವೇ ಅವಕಾಶ ಮಾಡಿಕೊಟ್ಟಿದೆ.

ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದಕೊಳ್ಳುವುದರ ಜೊತೆಗೆ ಸುರಕ್ಷಾ ಸಾಧನಗಳನ್ನು ಕಡ್ಡಾಯವಾಗಿ ಬಳಕೆ ಮಾಡಬೇಕಿದ್ದು, ಇದರಿಂದ ಉತ್ಪಾದನೆ ಅವಕಾಶವಿದ್ದರೂ ನಿಯಮ ಪಾಲನೆ ಮಾಡಬೇಕಿರುವುದರಿಂದ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಲ್ಲಿರಲಿದೆ.

ಇದೇ ಕಾರಣಕ್ಕೆ ಚೇತಕ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಮತ್ತು ಮಾರಾಟವನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ನಿರ್ಧರಿಸಿರುವ ಬಜಾಜ್ ಆಟೋ ಕಂಪನಿಯು ಮುಂದಿನ ಸೆಪ್ಟೆಂಬರ್ ನಂತರವಷ್ಟೇ ಹೊಸ ಸ್ಕೂಟರ್ ಉತ್ಪಾದನೆಗೆ ಮರುಚಾಲನೆ ನೀಡಲಿದೆ.

ಅಲ್ಲಿನ ತನಕ ಬಹು ಬೇಡಿಕೆಯಲ್ಲಿರುವ ಸಾಮಾನ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ಹೆಚ್ಚಿನ ಗಮನಹರಿಸಲಿರುವ ಬಜಾಜ್ ಆಟೋ ಕಂಪನಿಯು ಕೇಂದ್ರ ಸರ್ಕಾರದ ಎಲ್ಲಾ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಬೇಕಿದೆ.

ಕೇವಲ ಬಜಾಜ್ ಮಾತ್ರ ಎಲ್ಲಾ ಕೈಗಾರಿಕಾ ಉತ್ಪಾದನಾ ಸಂಸ್ಥೆಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದು ಕಡ್ಡಾಯವಾಗಿರಲಿದ್ದು, ಇದು ಉತ್ಪಾದನಾ ಪ್ರಮಾಣದ ಪರಿಣಾಮ ಬೀರುವುದರಿಂದ ಬೇಡಿಕೆ ಪೂರೈಕೆಯಲ್ಲಿ ವ್ಯಥೆಯವಾಗಲಿದೆ.

ಬಜಾಜ್ ಆಟೋ ಕಂಪನಿಯು ಕೂಡಾ ಇದೀಗ ಎರಡು ಉತ್ಪಾದನಾ ಘಟಕಗಳಲ್ಲಿ ವಾಹನಗಳ ಉತ್ಪಾದನೆಯನ್ನು ಪುನಾರಂಭಿಸುತ್ತಿದ್ದು, ಮುಖ್ಯ ವಾಹನ ಉತ್ಪಾದನಾ ಘಟಕದಲ್ಲಿನ ಆಟೋ ಉತ್ಪಾದನೆಗೆ ಇನ್ನು ಅವಕಾಶ ಸಿಕ್ಕಿಲ್ಲ.

ಮಾಹಾರಾಷ್ಟ್ರದ ಔರಂಗಾಬಾದ್ ಮತ್ತು ಉತ್ತರಾಖಂಡ್‌ನಲ್ಲಿರುವ ರುದ್ರಪುರ್‌ನಲ್ಲಿರುವ ವಾಹನ ಉತ್ಪಾದನಾ ಘಟಕಗಳನ್ನು ತೆರಯಲು ಮಾತ್ರವೇ ಅವಕಾಶ ಸಿಕ್ಕಿದ್ದು, ಮತ್ತೊಂದು ಅತಿ ದೊಡ್ಡ ಬೈಕ್ ಉತ್ಪಾದನಾ ಘಟಕವಾಗಿರುವ ಪುಣೆ ಚಾಕನ್ ಘಟಕದಲ್ಲಿನ ಉತ್ಪಾದನೆಗೆ ಸದ್ಯಕ್ಕೆ ಅವಕಾಶ ದೊರೆಯುವುದು ಅನುಮಾನ.

ಪುಣೆಯಲ್ಲಿ ಮಹಾಮಾರಿ ಕರೋನಾ ವೈರಸ್ ಹೆಚ್ಚಿರುವುದರಿಂದ ಯಾವುದೇ ಕೈಗಾರಿಕೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳದಿರಲು ನಿರ್ಧರಿಸಲಾಗಿದ್ದು, ಮೇ 3ರ ನಂತರವಷ್ಟೇ ರೆಡ್ ಝೋನ್‌ನಲ್ಲಿರುವ ಕೈಗಾರಿಕೆಗಳಿಗೆ ಉತ್ಪಾದನಾಗೆ ವಿನಾಯ್ತಿ ನೀಡುವ ಬಗ್ಗೆ ನಿರ್ಧಾರವಾಗಲಿದೆ.

ಕೇಂದ್ರ ಸರ್ಕಾರ ನೀಡಿರುವ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ.


Click it and Unblock the Notifications