ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಜನವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯ ಪಟ್ಟಿಯಲ್ಲಿ ಹೀರೋ, ಹೋಂಡಾ ಮತ್ತು ಟಿವಿಎಸ್ ನಂತರದ ಸ್ಥಾನವನ್ನು ಬಜಾಜ್ ಸಂಸ್ಥೆಯು ಪಡೆದುಕೊಂಡಿದೆ. ಕಳೆದ ಜನವರಿ ತಿಂಗಳಲ್ಲಿ ಬಜಾಜ್ ಆಟೋ ಕಂಪನಿಯ ಒಟ್ಟು 1,57,796 ದ್ವಿಚಕ್ರ ವಾಹನಗಳು ಮಾರಾಟವಾಗಿವೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಬಜಾಜ್ ಆಟೋ ಕಂಪನಿಯ ದ್ವಿಚಕ್ರ ಮಾರಾಟದಲ್ಲಿ ಕುಸಿತ ಕಾಣಲು ಮುಖ್ಯ ಕಾರಣವೆಂದರೆ ಪಲ್ಸರ್ 150 ಬೈಕ್ ಮಾರಾಟದಲ್ಲಿ ಶೇ.54ರಷ್ಟು ಕುಸಿತವಾಗಿದ್ದರೆ ಪ್ಲಾಟಿನಾ ಬೈಕ್ ಮಾರಾಟದಲ್ಲಿ ಶೇ.35ರಷ್ಟು ಕುಸಿತ ಕಂಡಿದೆ. ಬಜಾಜ್ ಕಂಪನಿಯು ಇತ್ತೀಚೆಗೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದರು. ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಮೊದಲ ತಿಂಗಳಲ್ಲಿ 21 ಯುನಿಟ್‍‍ಗಳನ್ನು ವಿತರಣೆ ಮಾಡಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಮೊದಲ ತಿಂಗಳು ಆಗಿರುವುದರಿಂದ ಕೇವಲ ಸೀಮಿತ ಸಾಮರ್ಥ್ಯದಲ್ಲಿ ವಿತರಣೆಯನ್ನು ಮಾಡಿದೆ. ಈ ತಿಂಗಳು ವಿತರಣೆಯಾದ ಅಂಕಿ ಅಂಶವು ಬಹಿರಂಗಗೊಂಡಿಲ್ಲ. ಬಜಾಜ್ ಚೇತಕ್ ಸ್ಕೂಟರ್ ಅನ್ನುಅರ್ಬೈನ್ ಮತ್ತು ಲೆಕ್ಟಿಕ್ ಪ್ರೀಮಿಯಂ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಅರ್ಬೈನ್ ಸ್ಕೂಟ್‍‍ರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1 ಲಕ್ಷಗಳಾದರೆ, ಚೇತಕ್ ಎಲೆಕ್ಟಿಕ್ ಪ್ರೀಮಿಯಂ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.15ಲಕ್ಷಗಳಾಗಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಚೇತಕ್ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಹೊಂದಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಸ್ಕೂಟರಿನ ಫೀಚರ್ಸ್

ಈ ಸ್ಕೂಟರ್‍‍ನಲ್ಲಿರುವ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಮತ್ತು ಅನುಕೂಲಕರ ಫೀಚರ್ಸ್‍‍ಗಳಿವೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್‍, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇದರೊಂದಿಗೆ ಮೊಬಿಲಿಟಿ ಸಾಫ್ಟ್ ವೇರ್, ಸುರಕ್ಷತಾ ಫೀಚರ್‍‍ಗಳನ್ನು ಹೊಂದಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಸ್ಕೂಟರಿನ ಕಾರ್ಯಕ್ಷಮತೆ

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಾಣುತ್ತದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ. ಬಜಾಜ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಮೇಲೆ 50 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ನೀಡಲಿದೆ.

ಬಿಡುಗಡೆಯಾದ ಮೊದಲ ತಿಂಗಳಲ್ಲಿ 21 ಚೇತಕ್ ಎಲೆಕ್ಟಿಕ್ ಸ್ಕೂಟರ್ ವಿತರಿಸಿದ ಬಜಾಜ್

ಜೊತೆಗೆ ಪ್ರತಿ 15 ಸಾವಿರ ಕಿ.ಮೀ ಗೆ ಕಡ್ಡಾಯವಾಗಿ ಸರ್ವೀಸ್ ಒದಗಿಸಲಿದ್ದು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಿದೆ. ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.

More from DriveSpark

Article Published On: Tuesday, February 25, 2020, 13:54 [IST]
English summary
Bajaj Sold 21 Units Of Chetak Electric In Its First Month. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+