ಬಿಡುಗಡೆಗೊಂಡ ಬಜಾಜ್ ಡೊಮಿನಾರ್ 250 ಬೈಕ್
ಬಜಾಜ್ ಡೊಮಿನಾರ್ 250 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.60 ಲಕ್ಷಗಳಾಗಿದೆ. ಡೊಮಿನಾರ್ 250 ಬಜಾಜ್ ಕಂಪನಿಯ ಡೊಮಿನಾರ್ ಸರಣಿಯ ಭಾಗವಾಗಿದೆ.

ಬಜಾಜ್ ಡೊಮಿನಾರ್ 250 ಬೈಕಿನ ಬುಕ್ಕಿಂಗ್‍ಗಳನ್ನು ಆರಂಭಿಸಲಾಗಿದೆ. ಈ ಬೈಕಿನ ವಿತರಣೆಯನ್ನು ಅತಿ ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಡೊಮಿನಾರ್ 250 ಬೈಕ್‍ಗಳನ್ನು ಬಿಡುಗಡೆಗೂ ಮುಂಚೆಯೇ ಡೀಲರ್‍ಗಳ ಬಳಿಗೆ ತಲುಪಿಸಲಾಗಿತ್ತು.

ಬಜಾಜ್ ಡೊಮಿನಾರ್ 250 ಬೈಕಿನಲ್ಲಿರುವ ವಿನ್ಯಾಸ ಹಾಗೂ ಫೀಚರ್‍ಗಳ ಬಗ್ಗೆ ಹೇಳುವುದಾದರೆ, ಡೊಮಿನಾರ್ 400 ಬೈಕಿನ ವಿನ್ಯಾಸವನ್ನು ಹೊಂದಿದ್ದರೂ ಬೆಲೆಯನ್ನು ಕಡಿಮೆಗೊಳಿಸುವ ಕಾರಣಕ್ಕೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಬಜಾಜ್ ಕಂಪನಿಯು ಈ ಬೈಕಿನಲ್ಲಿ ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್‍ಗಳ ಜೊತೆಗೆ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಿದೆ. ಈ ಬೈಕಿನಲ್ಲಿರುವ ಗ್ರಾಫಿಕ್ಸ್ ಗಳನ್ನು ಅಳವಡಿಸಲಾಗಿದೆ. ಈ ಬೈಕ್ ಅನ್ನು ಕೆನಾನ್ ರೆಡ್ ಹಾಗೂ ವೈನ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಈ ಬಣ್ಣಗಳಿಂದಾಗಿ ಬೈಕ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಈ ಬೈಕಿನಲ್ಲಿ ಹೊಸ ವಿನ್ಯಾಸದ ಡಿಸ್‍ಪ್ಲೇ ನೀಡಲಾಗಿದ್ದು, ಅದು ಟೈಂ, ಗೇರ್ ಪೊಸಿಷನ್ ಹಾಗೂ ಟ್ರಿಪ್‍ಗಳ ಬಗೆಗಿನ ಮಾಹಿತಿಯನ್ನು ನೀಡುತ್ತದೆ. ಈ ಬೈಕಿನಲ್ಲಿರುವ ಬಹುತೇಕ ಫೀಚರ್‍ಗಳನ್ನು ಡೊಮಿನಾರ್ 400 ಬೈಕಿನಿಂದ ಪಡೆಯಲಾಗಿದೆ.

ಬಜಾಜ್ ಡೊಮಿನಾರ್ 250 ಬೈಕಿನಲ್ಲಿ 248.8 ಸಿಸಿಯ ಲಿಕ್ವಿಡ್ ಕೂಲ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 27 ಬಿಹೆಚ್‍ಪಿ ಪವರ್ ಹಾಗೂ 23.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

ಡೊಮಿನಾರ್ 250 ಬೈಕ್ ಕೇವಲ 10.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸೆಲರೇಟ್ ಮಾಡುತ್ತದೆ ಎಂದು ಬಜಾಜ್ ಕಂಪನಿಯು ಹೇಳಿದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 132 ಕಿ.ಮೀಗಳಾಗಿದೆ. ಡೊಮಿನಾರ್ 250 ಬೈಕ್ 13 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿದೆ.

ಬ್ರೇಕಿಂಗ್‍ಗಾಗಿ ಹೊಸ ಡೊಮಿನಾರ್ 250 ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ನೀಡಲಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.


Click it and Unblock the Notifications








