ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಭಾರತದಲ್ಲಿ ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಬಿಎಸ್-6 ಎಮಿಷನ್ ಜಾರಿಗೆ ತರಲಾಗಿದ್ದು, ಬಹುತೇಕ ಆಟೋ ಕಂಪನಿಗಳು ತಮ್ಮ ಹೊಸ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡಿವೆ. ಇದೀಗ ಬಜಾಜ್ ಆಟೋ ಕೂಡಾ ಡೊಮಿನಾರ್ 400 ಮಾದರಿಯ ಹೊಸ ಎಂಜಿನ್‌ ಆವೃತ್ತಿಯನ್ನು ಪರಿಚಯಿಸಿದ್ದು, ಪರ್ಫಾಮೆನ್ಸ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಹೊಸ ಡೊಮಿನಾರ್ ಆವೃತ್ತಿಯು ಬಿಎಸ್-4 ಮಾದರಿಗಿಂತಲೂ ಬೆಲೆಯಲ್ಲಿ ರೂ.1,749 ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ಆರಂಭಿಕವಾಗಿ ರೂ. 1.91 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಉನ್ನತೀಕರಿಸಲಾದ ಎಂಜಿನ್ ಹೊರತುಪಡಿಸಿ ಉಳಿದೆಲ್ಲಾ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಲ್ಲೇ ಮುಂದುವರಿಸಲಾಗಿದ್ದು, 350 ಸಿಸಿ ಎಂಜಿನ್ ವಿಭಾಗದ ಕ್ಲಾಸಿಕ್ ಬೈಕ್‌ಗಳಿಗೆ ಇದು ಮತ್ತಷ್ಟು ಪೈಪೋಟಿ ನೀಡಲಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಬಿಎಸ್-6 ವೈಶಿಷ್ಟ್ಯತೆಯ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಡೊಮಿನಾರ್ 400 ಬೈಕ್ ಮಾದರಿಯು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 39.4-ಬಿಎಚ್‌ಪಿ, 35-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಹೊಸ ಎಮಿಷನ್ ನಿಯಮದ ನಂತರವು ಡೊಮಿನಾರ್ 400 ಪರ್ಫಾಮೆನ್ಸ್‌‌ನಲ್ಲಿ ಯಾವುದೇ ರೀತಿಯ ಕಡಿತ ಮಾಡದ ಬಜಾಜ್ ಆಟೋ ಕಂಪನಿಯು ಉತ್ತಮ ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆ ಮತ್ತು ಕನಿಷ್ಠ ಪ್ರಮಾಣದ ಮಾಲಿನ್ಯ ಹೊರಸೂಸುವಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಆದರೆ ಹೊಸ ಎಂಜಿನ್ ಅಳವಡಿಕೆ ನಂತರ ಬೈಕ್ ತೂಕದಲ್ಲಿ ತುಸು ಹೆಚ್ಚಳವಾಗಿದ್ದು, ಬಿಎಸ್-4 ಮಾದರಿಗಿಂತಲೂ 3 ಕೆ.ಜಿ ಹೆಚ್ಚುವರಿ ತೂಕದೊಂದಿಗೆ ಒಟ್ಟು 187 ಕೆ.ಜಿ ತೂಕವನ್ನು ಪಡೆದುಕೊಂಡಿದೆ. ಈ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿರುವ ಬಜಾಜ್ ಆಟೋ ಕಂಪನಿಯು ಹೊಸ ಡೊಮಿನಾರ್ 400 ಬೈಕಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದ್ದು, ಸಿಪ್ಲರ್ ಕ್ಲಚ್ ಸೇರಿದಂತೆ ಹಲವು ಪ್ರೀಮಿಯಂ ಸೌಲಭ್ಯಗಳಿವೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಹೊಸ ಬೈಕಿನಲ್ಲಿ ಈ ಹಿಂದಿನಂತೆ ವೈನ್ ಬ್ಲ್ಯಾಕ್ ಮತ್ತು ಅರೋರಾ ಗ್ರೀನ್ ಬಣ್ಣಗಳ ಆಯ್ಕೆ ನೀಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಹಾಗೆಯೇ ಹೊಸ ಬೈಕಿನಲ್ಲಿ ಈ ಹಿಂದಿನಂತೆಯೇ ಸಸ್ಪೆಷನ್ ಮತ್ತು ಬ್ರೇಕಿಂಗ್ ಸೆಟ್‌ಅಪ್ ಜೋಡಿಸಲಾಗಿದ್ದು, ಮುಂಭಾಗದಲ್ಲಿ ಯುಎಸ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾರ್ಕ್ ಸಸ್ಪೆಷನ್ ಜೊತೆಗೆ 320-ಎಂಎಂ ಫ್ರಂಟ್ ಮತ್ತು 230-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಂಡ 2020ರ ಬಜಾಜ್ ಡೊಮಿನಾರ್ 400

ಇನ್ನು ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಂ, ಫುಲ್-ಎಲ್‌ಸಿಡಿ ಸ್ಪ್ಲಿಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೋಡಿಸಲಾಗಿದ್ದು, ಪ್ರತಿಸ್ಪರ್ಧಿ ಬೈಕ್ ಮಾದರಿಗಳಾದ ಬಿಎಸ್-6 ವೈಶಿಷ್ಟ್ಯತೆಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಜಾವಾ ಕ್ಲಾಸಿಕ್ ಬೈಕ್‌ಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Most Read Articles

Kannada
English summary
2020 Bajaj Dominar 400 BS6 Launched In India. Read in Kannada.
Story first published: Monday, April 6, 2020, 20:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X