ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ಬಜಾಜ್ ಆಟೋ ಕಂಪನಿಯು ತನ್ನ ಸ್ಪೋರ್ಟ್ ಟೂರರ್ ಬೈಕ್ ಆದ ಡೋಮಿನಾರ್ 400 ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದೆ. ಬಿಎಸ್-6 ಡೋಮಿನಾರ್ 400, ಬೈಕ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಎಸ್-6 ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ.

ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ಬಿಎಸ್-6 ಬಜಾಜ್ ಡೋಮಿನಾರ್ 400 ಮಾದರಿಗಳು ಬಿಡುಗಡೆಯಾಗುವ ಮೊದಲು ಭಾರತದ ಕೆಲವು ಡೀಲರ್‍‍‍ಗಳ ಬಳಿ ತಲುಪಿದೆ. ಈ ಬೈಕ್ ಡೀಲರ್‍‍ಗಳನ್ನು ತಲುಪಿರುವುದನ್ನು ರಾಶ್ ಗೇರ್ ಬಹಿರಂಗಪಡಿಸಿದೆ. ರಾಶ್ ಗೇರ್ ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ವಾಕ್‍‍ರೌಂಡ್ ವೀಡಿಯೋವನ್ನು ಕೂಡ ಅಪ್ಲೋಡ್ ಮಾಡಿದ್ದಾರೆ. ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ತನ್ನ ಪಲ್ಸರ್ 150 ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಬಜಾಜ್ ಕಂಪನಿಯು ತನ್ನ ಡೋಮಿನಾರ್ 400 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ಬಿಎಸ್-6 ಡೋಮಿನಾರ್ ಬೈಕಿನ ಬೆಲೆಯನ್ನು ತುಸು ಹೆಚ್ಚಿಸಲಾಗಿದೆ. ಬಿಎಎಸ್-6 ಡೋಮಿನಾರ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,90,002 ಲಕ್ಷಗಳಾಗಿದೆ. ಇನ್ನೂ ಡೋಮಿನಾರ್ 400 ಬೈಕಿನ ಅನ್‍-ರೋಡ್ ಬೆಲೆಯು ಸುಮಾರು ರೂ.2.35 ಲಕ್ಷಗಳಾಗಿದೆ.

ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ಇನ್ನು ಹಿಂದಿನ ಮಾದರಿ ಬಿಎಸ್-4 ಡೋಮಿನಾರ್‍ ಬೆಲೆಯನ್ನು ಹೋಲಿಸಿದರೆ ಕೇವಲ ರೂ.1,749 ಹೆಚ್ಚಿಸಿದೆ. ಬಜಾಜ್ ಆಟೋ ಕಂಪನಿಯು 2019ರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಿಂದಿನ ಮಾದರಿ ಡೋಮಿನಾರ್ 400 ಬೈಕಿನ ಬೆಲೆಯನ್ನು ಸುಮಾರು ರೂ,10,000ಗಳವರೆಗೆ ಹೆಚ್ಚಿಸಿದರು.

ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ನಂತರದ ದಿನಗಳಲ್ಲಿ ಇದೇ ಬೈಕಿನ ಬೆಲೆಯನ್ನು ಮತ್ತೆ ರೂ.6,000 ಗಳವರೆಗೆ ಹೆಚ್ಚಿಸಲಾಗಿತ್ತು. ಬಿಎಸ್-6 ಡೋಮಿನಾರ್ 400 ಬೈಕ್ ಬಿಎಸ್-6 ಎಪ್‍‍ಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್‍‍ನೊದಿಗೆ ಇಸಿಯು ಮತ್ತು ಕಟಲ್ಯಾಟಿಕ್ ಕರ್ನ್‍‍ವಾಟರ್ ಅನ್ನು ಜೋಡಿಸಲಾಗಿದೆ. ಈ ಎಂಜಿನ್‍ನ ಕಾರ್ಯಕ್ಷಮತೆಯ ಬಗ್ಗೆ ಕುರಿತು ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಿಲ್ಲ.

ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ಡೋಮಿನಾರ್ 400, ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 8650 ಆರ್‍‍ಪಿಎಂನಲ್ಲಿ 40 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ಹೊಸ ಬಜಾಜ್ ಡೋಮಿನಾರ್ 400 ಬೈಕ್ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ. ರೆಡ್ ಮತ್ತು ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಬೈಕ್ ಅನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದಿಲ್ಲ.

ಬಜಾಜ್ ಡೋಮಿನಾರ್ ಬೈಕಿನ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಈ ಡೋಮಿನಾರ್ ಮಾದರಿಯ 180 ಯುನಿ‍ಟ್‍‍ಗಳು ಮಾತ್ರ ಮಾರಾಟವಾಗಿವೆ. ಬಜಾಜ್ ಕಂಪನಿಯ ಸರಣಿಯಲ್ಲಿ ಅತಿ ಕಡೆಮೆ ಮಾರಾಟವಾಗುವ ಬೈಕ್‍‍ಗಳಲ್ಲಿ ಒಂದಾಗಿದೆ.

ಡೀಲರ್‍ ಬಳಿ ತಲುಪಿದ ಬಿಎಸ್-6 ಬಜಾಜ್ ಡೋಮಿನಾರ್ 400

ಬಜಾಜ್ ಡೋಮಿನಾರ್ ಬಿಎಸ್-6 ಆವೃತ್ತಿಯಲ್ಲಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಬಿಎಸ್-6 ಡೋಮಿನಾರ್ 400 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಜಾವಾ, ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Monday, February 24, 2020, 11:02 [IST]
English summary
BS6 Bajaj Dominar 400 arrives at dealer. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+