ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಬಜಾಜ್ ಆಟೋ ಕಂಪನಿಯು ತನ್ನ ಡೋಮಿನಾರ್ 400 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸಲು ಸಜ್ಜಾಗಿದೆ. ಇದೀಗ ಈ ಸ್ಪೋರ್ಟ್ ಟೂರರ್ ಬೈಕಿನ ಮಾಹಿತಿಗಳು ಆನ್‍ಲೈನ್‍‍‍ನಲ್ಲಿ ಬಹಿರಂಗವಾಗಿದೆ.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಡೋಮಿನಾರ್ 400 ಬೈಕಿನ ಬಗ್ಗೆ ಬಹಿರಂಗವಾದ ಮಾಹಿತಿ ಪ್ರಕಾರ, ಈ ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 8800 ಆರ್‍‍ಪಿಎಂನಲ್ಲಿ 39.4 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಬಿಎಸ್-6 ಡೋಮಿನಾರ್ 400 ಬೈಕಿನ ಬೆಲೆಯನ್ನು ತುಸು ಹೆಚ್ಚಿಸಬಹುದು. ಬಿಎಎಸ್-6 ಡೋಮಿನಾರ್ 400 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,90,002 ಲಕ್ಷಗಳಾಗಿರಬಹುದು. ಇನ್ನೂ ಡೋಮಿನಾರ್ 400 ಬೈಕಿನ ಅನ್‍-ರೋಡ್ ಬೆಲೆಯು ಸುಮಾರು ರೂ.2.35 ಲಕ್ಷಗಳಾಗಿರಲಿದೆ.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಬಜಾಜ್ ಆಟೋ ಕಂಪನಿಯು 2019ರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹಿಂದಿನ ಮಾದರಿ ಡೋಮಿನಾರ್ 400 ಬೈಕಿನ ಬೆಲೆಯನ್ನು ಸುಮಾರು ರೂ,10,000ಗಳವರೆಗೆ ಹೆಚ್ಚಿಸಿದರು.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ನಂತರದ ದಿನಗಳಲ್ಲಿ ಇದೇ ಬೈಕಿನ ಬೆಲೆಯನ್ನು ಮತ್ತೆ ರೂ.6,000 ಗಳವರೆಗೆ ಹೆಚ್ಚಿಸಲಾಗಿತ್ತು. ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡ್ಯುಯಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅಳವಡಿಸಲಾಗುತ್ತದೆ.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಹೊಸ ಬಜಾಜ್ ಡೋಮಿನಾರ್ 400 ಬೈಕ್ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ. ರೆಡ್ ಮತ್ತು ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಬೈಕ್ ಅನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದಿಲ್ಲ.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಬಜಾಜ್ ಡೋಮಿನಾರ್ ಬೈಕಿನ ಮಾರಾಟದಲ್ಲಿ ಇಳಿಕೆಯಾಗಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಈ ಡೋಮಿನಾರ್ ಬೈಕಿನ 180 ಯುನಿ‍ಟ್‍‍ಗಳು ಮಾತ್ರ ಮಾರಾಟವಾಗಿವೆ. ಬಜಾಜ್ ಕಂಪನಿಯ ಸರಣಿಯಲ್ಲಿ ಅತಿ ಕಡೆಮೆ ಮಾರಾಟವಾಗುವ ಬೈಕ್‍‍ಗಳಲ್ಲಿ ಒಂದಾಗಿದೆ.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಬಜಾಜ್ ಡೊಮಿನಾರ್ 250 ಬೈಕಿನಲ್ಲಿ 248.8 ಸಿಸಿಯ ಲಿಕ್ವಿಡ್ ಕೂಲ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 27 ಬಿ‍‍ಹೆಚ್‍ಪಿ ಪವರ್ ಹಾಗೂ 23.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಬಹಿರಂಗವಾಯ್ತು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನ ಮಾಹಿತಿ

ಬಜಾಜ್ ಡೋಮಿನಾರ್ ಬಿಎಸ್-6 ಆವೃತ್ತಿಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಬಿಎಸ್-6 ಡೋಮಿನಾರ್ 400 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಜಾವಾ, ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Thursday, March 12, 2020, 11:29 [IST]
English summary
BS6 Bajaj Dominar 400 Specifications Leaked. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+