ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಬಜಾಜ್ ಆಟೋ ತನ್ನ ಪ್ಲಾಟಿನಾ 100 ಸರಣಿಯ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಪ್ಲಾಟಿನಾ ಸರಣಿಯ ಬೈಕುಗಳ ಬೆಲೆಯನ್ನು ರೂ.1,203ಗಳಿಂದ ರೂ.2,432 ಗಳವರೆಗೆ ಏರಿಕೆ ಮಾಡಲಾಗಿದೆ.

ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಪ್ಲಾಟಿನಾ 100 ಸಿಸಿ ಬೈಕ್‌ಗಳಲ್ಲಿ ಪ್ಲಾಟಿನಾ ಕೆಎಸ್ ಅಲಾಯ್, ಪ್ಲಾಟಿನಾ ಇಎಸ್ ಅಲಾಯ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಇಎಸ್ ಅಲಾಯ್ ಡಿಸ್ಕ್ ಬೈಕ್ ಗಳು ಸೇರಿವೆ. ಪ್ಲಾಟಿನಾ ಕೆಎಸ್ ಅಲಾಯ್ ಬೈಕಿನ ರೂ.1,203 ಗಳಷ್ಟು ಹೆಚ್ಚಿಸಲಾಗಿದ್ದು, ಈಗ ಆ ಬೈಕಿನ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.50,848ಗಳಾಗಿದೆ. ಮಿಡಲ್ ರೇಂಜ್ ಪ್ಲಾಟಿನಾ ಇಎಸ್ ಅಲಾಯ್ ಬೈಕಿನ ಬೆಲೆಯನ್ನು ರೂ.2,432 ಏರಿಕೆ ಮಾಡಲಾಗಿದ್ದು, ಬೈಕಿನ ಬೆಲೆ ಈಗ ಎಕ್ಸ್ ಶೋರೂಂ ದರದಂತೆ ರೂ.58,362ಗಳಾಗಿದೆ.

ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಇನ್ನು ಟಾಪ್ ಮಾದರಿಯಾದ ಪ್ಲಾಟಿನಾ ಇಎಸ್ ಅಲಾಯ್ ಡಿಸ್ಕ್ ಬೈಕಿನ ಬೆಲೆಯನ್ನು ರೂ.1,325ಗಳಷ್ಟು ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.61,082ಗಳಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಪ್ಲಾಟಿನಾ ಸರಣಿಯ ಬೈಕ್‌ಗಳ ಬೆಲೆ ಏರಿಕೆಯ ಹೊರತು ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ಬಜಾಜ್ ಪ್ಲಾಟಿನಾ 100 ಸಿಸಿ ಪ್ಯಾಸೆಂಜರ್ ಬೈಕ್ ಎಲ್ಇಡಿ ಡಿಆರ್ ಎಲ್ ಹೊಂದಿರುವ ಹ್ಯಾಲೊಜೆನ್ ಲೈಟ್ ಹೊಂದಿದೆ. ಈ ಬೈಕಿನಲ್ಲಿ ಅಲಾಯ್ ವ್ಹೀಲ್, ಎಲೆಕ್ಟ್ರಿಕ್ ಸ್ಟಾರ್ಟ್ ಹಾಗೂ ಇತರ ಹಲವು ಫೀಚರ್ ಗಳೊಂದಿಗೆ ಸಿಂಗಲ್ ಪೀಸ್ ಸೀಟ್ ಅಳವಡಿಸಲಾಗಿದೆ.

ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಈ ಬೈಕುಗಳ ಎಂಜಿನ್‌ನಲ್ಲಿಯೂ ಯಾವುದೇ ಬದಲಾವಣೆಗಳಾಗಿಲ್ಲ. ಪ್ಲಾಟಿನಾ 100 ಸಿಸಿ ಸರಣಿಯ ಬೈಕುಗಳಲ್ಲಿ 102 ಸಿಸಿಯ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.8 ಬಿಹೆಚ್‌ಪಿ ಪವರ್ ಹಾಗೂ 8.34 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಗಳಲ್ಲಿ 4 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಬಜಾಜ್ ಕಂಪನಿಯ ಪ್ಲಾಟಿನಾ ಬೈಕ್ 100 ಸಿಸಿ ಸೆಗ್ ಮೆಂಟಿನಲ್ಲಿಯೇ ಹೆಚ್ಕಿನ ಮೈಲೇಜ್ ನೀಡುವ ಬೈಕ್ ಆಗಿದೆ. ಪ್ಲಾಟಿನಾ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 96 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 90 ಕಿ.ಮೀಗಳಾಗಿದೆ.

ಪ್ಲಾಟಿನಾ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ

ಬಜಾಜ್ ಪ್ಲಾಟಿನಾ, ಡಿಸ್ಕ್ ಬ್ರೇಕ್ ಹೊಂದಿರುವ 100 ಸಿಸಿ ಸೆಗ್ ಮೆಂಟಿನ ಏಕೈಕ ಬೈಕ್ ಆಗಿದೆ. ಬಜಾಜ್ ಪ್ಲಾಟಿನಾ 100 ಸಿಸಿ ಸೆಗ್ ಮೆಂಟಿನಲ್ಲಿ ಟಿವಿಎಸ್ ರಾಡಾನ್, ಹೋಂಡಾ ನಿಯಾನ್ ಹಾಗೂ ಹೀರೋ ಸ್ಪ್ಲೆಂಡರ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Bajaj increases price of Platina 100cc BS6 range bikes. Read in Kannada.
Story first published: Monday, July 13, 2020, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X