ಆರ್‌ಇ ಕ್ಲಾಸಿಕ್ ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಬಜಾಜ್ ಹೊಸ ಕ್ರೂಸರ್ ಬೈಕ್
ದೇಶದ ಅತಿ ದೊಡ್ಡ ಬೈಕ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಕಂಪನಿಯು ಹೊಸ ಮಾದರಿಯ ಕ್ರೂಸರ್ ಬೈಕ್ ಒಂದನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಬೈಕ್ ಬಿಡುಗಾಗಿ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಪೇಟೆಂಟ್ ದಾಖಲಿಸಿರುವ ಮಾಹಿತಿ ಬಹಿರಂಗವಾಗಿದೆ.

ಬಜಾಜ್ ಆಟೋ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಗ್ರಾಹಕರ ಬೇಡಿಕೆ ಅನುಸಾರವಾಗಿ ವಿವಿಧ ದ್ವಿಚಕ್ರ ವಾಹನ ಮಾದರಿಗಳ ಮಾರಾಟವನ್ನು ಹೊಂದಿದ್ದು, ಇದೀಗ ಹೊಸದಾಗಿ 350 ಸಿಸಿ ಸೆಗ್ಮೆಂಟ್‌ನಲ್ಲಿ ಕ್ರೂಸರ್ ಬೈಕ್ ಮಾದರಿಯೊಂದನ್ನು ಅಭಿವೃದ್ದಿಗೊಳಿಸುತ್ತಿದೆ. ಕ್ರೂಸರ್ ಬೈಕ್ ಮಾದರಿಯ ಮಾರಾಟದಲ್ಲೂ ಮುಂಚೂಣಿ ಹೊಂದಿರುವ ಬಜಾಜ್ ಕಂಪನಿಯು ಈಗಾಗಲೇ ಅವೆಂಜರ್ ಮಾರಾಟದೊಂದಿಗೆ ಪ್ರೀಮಿಯಂ ಬೈಕ್ ಖರೀದಿದಾರರನ್ನು ಸೆಳೆಯಲು ಹೊಸ ಕ್ರೂಸರ್ ಬೈಕ್ ಬಿಡುಗಡೆಯತ್ತ ಗಮನಹರಿಸಿದೆ.

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಿರುವ ಹೊಸ ಬೈಕ್ ಪೇಟೆಂಟ್‌ನಲ್ಲಿ ಹೊಸ ಬೈಕ್ ಮಾದರಿಯು ನ್ಯೂರಾನ್ ಹೆಸರು ಪಡೆದುಕೊಳ್ಳಲಿದ್ದು, ಹೊಸ ಬೈಕ್ ಪೇಟೆಂಟ್ ಮಾಹಿತಿಯನ್ನು ಕಳೆದ ತಿಂಗಳು 29ರಂದು ದಾಖಲಿಸಲಾಗಿದೆ.

ಹೊಸ ಕ್ರೂಸರ್ ಬೈಕ್ ಮಾದರಿಯು ಬಜಾಜ್ ನಿರ್ಮಾಣದ ಹೈ ಎಂಡ್ ಬೈಕ್ ಮಾದರಿಯಾದ ಡೊಮಿನಾರ್ 400 ಬೈಕ್ ಮಾದರಿಯ ಎಂಜಿನ್ ಹಂಚಿಕೊಳ್ಳಲಿದ್ದು, ಹೊಸ ಬೈಕ್ ಬಗೆಗೆ ಖಚಿತ ಮಾಹಿತಿ ಇಲ್ಲವಾದರೂ ಅವೆಂಜರ್ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಲಾಂಗ್ ರೈಡ್‌ಗೆ ಅನುಕೂಲಕವಾದ ಹಲವು ಫೀಚರ್ಸ್ ಪಡೆದುಕೊಳ್ಳಲಿದೆ.

ಹೊಸ ಬೈಕ್ ಮಾದರಿಯು ಡೊಮಿನಾರ್ 400 ಜೊತೆಗೆ ಎಂಜಿನ್ ಹಂಚಿಕೊಂಡಲ್ಲಿ ಹೊಸ ಬೈಕ್ ಮಾದರಿಯು ನೇರವಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಜಾವಾ ಬೈಕ್ ಮಾದರಿಗಳಿಗೆ ಪೈಪೋಟಿ ನೀಡಲಿದ್ದು, ಕನೆಕ್ಟೆಡ್ ಫೀಚರ್ಸ್‌ಗಳು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬೈಕ್ ಉತ್ಪಾದನಾ ಕಂಪನಿಗಳ ವಿವಿಧ ಕನೆಕ್ಟೆಡ್ ಫೀಚರ್ಸ್‌ವುಳ್ಳ ಬೈಕ್ ಮಾದರಿಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಬೈಕ್ ಮಾದರಿಗಳು ಮಧ್ಯಮ ಗಾತ್ರ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿವೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇವುಗಳಲ್ಲಿ ಇದೀಗ ಬಜಾಜ್ ಆಟೋ ನಿರ್ಮಾಣದ ನ್ಯೂರಾನ್ ಕ್ರೂಸರ್ ಬೈಕ್ ಮಾದರಿಯು ಕೂಡಾ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುವ ತವಕದಲ್ಲಿದ್ದು, ಕನೆಕ್ಟೆಡ್ ಫೀಚರ್ಸ್‌ಗಳಾದ ಬ್ಲೂಟೂಥ್ ಮತ್ತು ಸ್ಮಾರ್ಟ್‌ಫೋನ್ ಆಕ್ಸೆಸ್‌ನೊಂದಿಗೆ ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಳಕೆ ಮಾಡಲು ಸಹಕಾರಿಯಾಗಲಿವೆ.

ಈ ಮೂಲಕ ಬೈಕ್ ರೈಡಿಂಗ್ ವೇಳೆ ವಿವಿಧ ಮಾಹಿತಿಗಳನ್ನು ಅತಿ ಸುಲಭವಾಗಿ ಪಡೆದುಕೊಳ್ಳುವ ಮೂಲಕ ರೈಡಿಂಗ್ ಅನ್ನು ಮತ್ತಷ್ಟು ಸುರಕ್ಷಿತವಾಗಿಡಲು ಸಹಕಾರಿಯಾಗಲಿದ್ದು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಮತ್ತು ಎಸ್ಎಂಎಸ್ ಅಲರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಇದರೊಂದಿಗೆ ಆಕರ್ಷಕ ಬೆಲೆಯಲ್ಲಿ ಹೊಸ ಕ್ರೂಸರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿರುವ ಬಜಾಜ್ ಆಟೋ ಕಂಪನಿಯು ಪ್ರತಿಸ್ಪರ್ಧಿ ಬೈಕ್ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡುವ ತವಕದಲ್ಲಿದ್ದು, ಹೊಸ ಬೈಕ್ ಮಾದರಿಯು ಇದೇ ವರ್ಷಾಂತ್ಯಕ್ಕೆ ಇಲ್ಲವೇ 2021ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
Source: Auto Fabrica


Click it and Unblock the Notifications