ಜನಪ್ರಿಯ ಬಿಎಸ್-6 ಪಲ್ಸರ್ 150 ನಿಯೊನ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಬಜಾಜ್
ಬಜಾಜ್ ಆಟೋ ಕಂಪನಿಯ ಪಲ್ಸರ್ ಸರಣಿಯ ಬೈಕುಗಳಲ್ಲಿ ಪಲ್ಸರ್ 150 ನಿಯೊನ್ ಕೂಡ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಪಲ್ಸರ್ 150 ನಿಯೊನ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಈ ಬಿಎಸ್-6 ಮಾದರಿಯ ಬೆಲೆಯನ್ನು ಹೆಚ್ಚಿಸಿದೆ.

ಬಿಎಸ್-6 ಪಲ್ಸರ್ 150 ನಿಯೊನ್ ಬೈಕನ್ನು ರೂ.85,536 ಗಳಿಗೆ ಬಿಡುಗಡೆಗೊಳಿಸಿದ್ದರು. ಇದೀಗ ಈ ಬೈಕಿನೆ ಬೆಲೆಯನ್ನು ರೂ.4,467 ರಷ್ತು ಹೆಚ್ಚಿಸಲಾಗಿದೆ. ಪಲ್ಸರ್ 150 ನಿಯೊನ್ ಬೈಕಿನಲ್ಲಿ 149.5 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ವಾಲ್ವ್ ಏರ್-ಕೂಲ್ಡ್ ಹೊಂದಿರುವ ಈ ಎಂಜಿನ್ 8,000 ಆರ್‌ಪಿಎಂನಲ್ಲಿ 13.8 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 13.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಮಾದರಿಯು ಬಜಾಜ್ ಆಟೋದ ಪೇಟೆಂಟ್ ಪಡೆದ ಡಿಟಿಎಸ್-ಐ (ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನಿಷನ್) ತಂತ್ರಜ್ಞಾನವನ್ನು ಹೊಂದಿದ್ದು, ಇದು ಬೈಕ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಬಜಾಜ್ ಪಲ್ಸರ್ 150 ಬೈಕ್‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲಿ ಟ್ವಿನ್ ಶಾಕ್ ಅಬ್ಸಾರ್‍ಬರ್‍ಗಳನ್ನು ಒದಗಿಸಲಾಗಿದ್ದು, ಜೊತೆಗೆ ರೈಡರ್‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 240ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 130ಎಂಎಂ ಡ್ರಂ ಬ್ರೇಕ್‍ಗಳನ್ನು ನೀಡಲಾಗಿದೆ.

ಮೊದಲ ಬಾರಿಗೆ ಪಲ್ಸರ್ ಬೈಕ್ 2003ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಕಂಪನಿಯು ಹೊಸ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಪಲ್ಸರ್ ಬೈಕ್‌ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ತರಲಾಗುತ್ತಿದ್ದು, ಇದಕ್ಕಾಗಿ ಈ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಎಸ್-6 ಪಲ್ಸರ್ 150 ನಿಯೊನ್ ಬೈಕಿನ ಸ್ಟೈಲಿಂಗ್ ಬಗ್ಗೆ ನೋಡುವುದಾದರೆ ಕಲರ್ ಕೋ-ಆರ್ಡಿನೇಟೆಡ್ ಹೆಡ್‌ಲ್ಯಾಂಪ್, ಫ್ಯೂಯಲ್ ಲೋಗೊ, ಸೈಡ್ ಪ್ಯಾನಲ್ ಮೆಶ್ ಮತ್ತು ರೇರ್ ಗ್ರಾಬ್ ರೈಲು ಅನ್ನು ಹೊಂದಿದೆ.

ಇನ್ನು ಈ ಬೈಕಿನ ಹಿಂಭಾಗದ ಕೌಲ್‌ನಲ್ಲಿನ 3ಡಿ ರೂಪಾಂತರದ ಲೋಗೊ ಮತ್ತು ಅಲಾಯ್ ವ್ಹೀಲ್ ಗಳಲ್ಲಿನ ಬಣ್ಣದ ಡೆಕಾಲ್ ಬೈಕಿಗೆ ಆಕರ್ಷಕ ಲುಕ್ ಅನ್ನು ನೀಡಿದೆ ಎಂದು ಹೇಳಬಹುದು.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಬಜಾಜ್ ಆಟೋ ಕಳೆದ ಮೇ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಇದರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನದ ಮಾರಾಟ ಮತ್ತು ರಫ್ತು ಕೂಡ ಒಳಗೊಂಡಿದೆ.ಕಳೆದ ಮೇ ತಿಂಗಳಲ್ಲಿ ಬಜಾಜ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 39,286 ಯುನಿಟ್‍ಗಳನ್ನು ಮಾರಾಟ ಮಾಡಿದರೆ, 73,512 ಯುನಿಟ್‍ಗಳನ್ನು ರಫ್ತು ಮಾಡಲಾಗಿದೆ.

ಒಟ್ಟಾರೆ ಮಾರಾಟವನ್ನು ನೋಡುವುದಾರೆ ಬಜಾಜ್ ಕಂಪನಿಯು ಮಾರಾಟದಲ್ಲಿ ಶೇ.69 ರಷ್ಟು ಕುಸಿತವಾಗಿದೆ. ಕರೋನಾ ಭೀತಿಯಿಂದ ಮಾರಾಟದಲ್ಲಿ ದೊಡ್ಡ ಕುಸಿತ ಉಂಟಾಗಿದರೂ ನಿಧಾನವಾಗಿ ಚೇತರಿಕೆ ಕಾಣಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications