Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬಜಾಜ್ ಆಟೋ
ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ಎಕ್ಸೆಲ್ಸಿಯರ್-ಹೆಂಡರ್ಸನ್ ಎಂಬ ಟ್ರೇಡ್‌ಮಾರ್ಕ್ ಅನ್ನು ಯುರೋಪಿನಲ್ಲಿ ನೋಂದಾಯಿಸಿದೆ. ಈ ಟ್ರೇಡ್‌ಮಾರ್ಕ್‌ನಿಂದ ಬಜಾಜ್ ಕಂಪನಿಯು ಯುರೋಪ್‌ನಲ್ಲಿ ಎಕ್ಸೆಲ್ಸಿಯರ್-ಹೆಂಡರ್ಸನ್ ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಎಂಬುದು ಖಚಿತವಾಗಿದೆ.

ಮೂಲಗಳ ಪ್ರಕಾರ ಈ ಟ್ರೇಡ್‌ಮಾರ್ಕ್ ಅನ್ನು ಯುರೋಪಿಯನ್ ಯೂನಿಯನ್ ಇಂಟೆಲೆಕ್ಚುಯಲ್ ಪ್ರಾಪರ್ಟಿ ಕಚೇರಿಯು ಡಿಸೆಂಬರ್ 15ರಂದು ನೀಡಿದೆ. ಎಕ್ಸೆಲ್ಸಿಯರ್-ಹೆಂಡರ್ಸನ್ ಅಮೆರಿಕಾದ ಜನಪ್ರಿಯ ಬೈಕ್ ತಯಾರಕ ಕಂಪನಿ. ಕಂಪನಿಯು 1911ರಲ್ಲಿ ಬೈಕುಗಳ ಉತ್ಪಾದನೆಯನ್ನು ಆರಂಭಿಸಿತು. 1929ರಲ್ಲಿ ಉಂಟಾದ ಮಹಾ ಕುಸಿತದ ವೇಳೆಯಲ್ಲಿ ಕಂಪನಿಯು ಸ್ಥಗಿತಗೊಂಡಿತ್ತು.

1997ರಲ್ಲಿ ಎಕ್ಸೆಲ್ಸಿಯರ್-ಹೆಂಡರ್ಸನ್ ಮೋಟಾರ್‌ಸೈಕಲ್ ಕಂಪನಿ ಎಂಬ ಹೆಸರಿನಲ್ಲಿ ಕಂಪನಿಯನ್ನು ಪುನಾರಂಭಿಸಲಾಯಿತು. ಎರಡು ವರ್ಷಗಳ ನಂತರ 1999ರಲ್ಲಿ ಕಂಪನಿಯು ಅಧಃಪತನದತ್ತ ಸಾಗಿತು. ಕಂಪನಿಯು 1999ರಲ್ಲಿ ಅಮೆರಿಕಾ ನ್ಯಾಯಾಲಯದಲ್ಲಿ ದಿವಾಳಿತನದ ಪ್ರಕರಣವನ್ನು ದಾಖಲಿಸಿತು. ನಂತರ ಕಂಪನಿ ಸ್ಥಗಿತಗೊಂಡಿತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಂಪನಿಯಡಿಯಲ್ಲಿ ಬೈಕುಗಳನ್ನು ಉತ್ಪಾದಿಸುವುದಾಗಿ ಬಜಾಜ್ ಕಂಪನಿಯು ಘೋಷಿಸಿಲ್ಲ. ಆದರೆ ಟ್ರೇಡ್‌ಮಾರ್ಕ್ ಮೂಲಕ ಕಂಪನಿಯನ್ನು ಪುನರುಜ್ಜೀವನಗೊಳಿಸಲು ಬಜಾಜ್ ಕಂಪನಿಯು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ಎಕ್ಸೆಲ್ಸಿಯರ್-ಹೆಂಡರ್ಸನ್ ಅಡಿಯಲ್ಲಿ ಬಜಾಜ್ ಕಂಪನಿಯು ಆಧುನಿಕವಾದ ಕ್ಲಾಸಿಕ್ ಹಾಗೂ ಕ್ರೂಸರ್ ಬೈಕುಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಬಜಾಜ್ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಾಗೂ ಟ್ರಯಂಫ್ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಜಾಜ್ ಕೆಲವು ತಿಂಗಳ ಹಿಂದಷ್ಟೇ ನ್ಯೂರಾನ್ ಎಂಬ ಹೊಸ ಬೈಕಿಗೆ ಪೇಟೆಂಟ್ ಸಲ್ಲಿಸಿದೆ. ಮೂಲಗಳ ಪ್ರಕಾರ ಈ ಬೈಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಹಾಗೂ ಹೋಂಡಾ ಹೈ ನೆಸ್ ಬೈಕುಗಳಿಗೆ ಪೈಪೋಟಿ ನೀಡಲಿರುವ ಕಂಪನಿಯ ಕ್ರೂಸರ್ ಬೈಕ್ ಆಗಿರಲಿದೆ.

ರಾಯಲ್ ಎನ್‌ಫೀಲ್ಡ್ ಬೈಕುಗಳ ರೀತಿಯಲ್ಲಿ ಕ್ರೂಸರ್ ಬೈಕ್ ಸೆಗ್ ಮೆಂಟಿನಲ್ಲಿ ಬಜಾಜ್ ಕಂಪನಿಯ ಅವೆಂಜರ್ ಸರಣಿಯ ಬೈಕುಗಳು ಜನಪ್ರಿಯವಾಗಿವೆ. ಅವೆಂಜರ್ ಸರಣಿಯ ಬೈಕುಗಳು ಭಾರತದಲ್ಲಿ ಹಲವು ವರ್ಷಗಳಿಂದ ಜನಪ್ರಿಯವಾಗಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬಜಾಜ್ ಕಂಪನಿಯು ಕ್ರೂಸರ್ ಸರಣಿಯಲ್ಲಿ ಅವೆಂಜರ್ ಸ್ಟ್ರೀಟ್ 160 ಹಾಗೂ ಸ್ಟ್ರೀಟ್ 220 ಬೈಕುಗಳನ್ನು ಮಾರಾಟ ಮಾಡುತ್ತದೆ. ಬಜಾಜ್ ಅವೆಂಜರ್ ಸ್ಟ್ರೀಟ್ 160 ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.99,597ಗಳಾದರೆ, ಅವೆಂಜರ್ ಸ್ಟ್ರೀಟ್ 220 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.21 ಲಕ್ಷಗಳಾಗಿದೆ.

ಭಾರತದ ಬೈಕ್ ಕಂಪನಿಗಳು ಕಳೆದ ಕೆಲವು ವರ್ಷಗಳಲ್ಲಿ ಸುಮಾರು ಅರ್ಧ ಡಜನ್'ನಷ್ಟು ಯುರೋಪಿಯನ್ ಹಾಗೂ ಅಮೆರಿಕನ್ ಬೈಕ್ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟಿವಿಎಸ್ ಕಂಪನಿಯು ಯುಕೆ ನಾರ್ಟನ್ ಬೈಕ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದ್ದರೆ, ಮಹೀಂದ್ರಾ ಕಂಪನಿಯು ಜಾವಾ, ಬಿಎಸ್ಎ ಹಾಗೂ ಯೆಜ್ಡಿ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ.

ಬಜಾಜ್ ಆಟೋ ಕಂಪನಿಯು ತನ್ನ ಉತ್ಪಾದನಾ ಘಟಕದಲ್ಲಿ ಕೆಟಿಎಂ ಹಾಗೂ ಹಸ್ಕ್ ವರ್ನಾ ಬೈಕುಗಳನ್ನು ಉತ್ಪಾದಿಸುತ್ತದೆ. ಬಜಾಜ್ ಕಂಪನಿಯು ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ 1.88 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಕಂಪನಿಯು 7%ನಷ್ಟು ಅಧಿಕ ವಾಹನಗಳನ್ನು ಮಾರಾಟ ಮಾಡಿದೆ. ಬಜಾಜ್ ಆಟೋ ಕಂಪನಿಯು ಕಳೆದ ತಿಂಗಳು ಚಕಾನ್ ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ 3,84,993 ಯುನಿಟ್ ವಾಹನಗಳನ್ನು ಉತ್ಪಾದಿಸಿದೆ.

ಬಜಾಜ್ ಕಂಪನಿಯು 2021ರ ಜನವರಿ 1ರಿಂದ ಜಾರಿಗೆ ಬರುವಂತೆ ತನ್ನ ಪಲ್ಸರ್ ಸರಣಿಯ ಎಲ್ಲಾ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಪಲ್ಸರ್ ಸರಣಿಯ ಬೈಕ್‌ಗಳು ಬೆಲೆ ಹೆಚ್ಚಳದ ನಂತರ ರೂ.1,000-1,500ಗಳಷ್ಟು ದುಬಾರಿಯಾಗಿವೆ. ಉತ್ಪಾದನಾ ವೆಚ್ಚವು ಹೆಚ್ಚಾದ ಕಾರಣಕ್ಕೆ ಬೆಲೆ ಏರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.