ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಬಜಾಜ್ ಆಟೋ ಹಾಗೂ ಟ್ರಯಂಫ್ ಮೋಟಾರ್‍‍ಸೈಕಲ್ಸ್ ಕಂಪನಿಗಳು ಅಧಿಕೃತವಾಗಿ ದೀರ್ಘ ಕಾಲದ ಒಪ್ಪಂದಕ್ಕೆ ಸಹಿ ಹಾಕಿವೆ. ಬಜಾಜ್ ಕಂಪನಿಯ ಕೇಂದ್ರ ಕಚೇರಿಯಿರುವ ಪುಣೆನಲ್ಲಿ ನಡೆದ ಸಮಾರಂಭವೊಂದರಲ್ಲಿ ಎರಡು ಕಂಪನಿಗಳು ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಿವೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಈ ಹೊಸ ಸಹಭಾಗಿತ್ವದನ್ವಯ ಬಜಾಜ್ ಹಾಗೂ ಟ್ರಯಂಫ್ ಕಂಪನಿಗಳು ಮಧ್ಯಮ ಗಾತ್ರದ ಬೈಕ್‍‍ಗಳ ಸೆಗ್‍‍ಮೆಂಟಿ‍‍ನಲ್ಲಿ ಹೊಸ ಬೈಕ್‍‍ಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ಮಾರಾಟ ಮಾಡಲಿವೆ. ಈ ಒಪ್ಪಂದದಿಂದಾಗಿ ಟ್ರಯಂಫ್ ಮೋಟಾರ್‍‍ಸೈಕಲ್ಸ್ ತನ್ನ ಜಾಗತಿಕ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಲಿದೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಇದರ ಜೊತೆಗೆ ಭಾರತವೂ ಸೇರಿದಂತೆ ಏಷ್ಯಾದ ವಿವಿಧ ಮಾರುಕಟ್ಟೆಗಳಲ್ಲಿ ಬೇರೆ ಬೇರೆ ಸೆಗ್‍‍ಮೆಂಟ್‍‍ಗಳಲ್ಲಿ ಬೈಕ್‍‍ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಿದೆ. ಈ ಹೊಸ ಒಪ್ಪಂದವನ್ನು ಮಧ್ಯಮ ಗಾತ್ರದ ಬೈಕ್‍‍ಗಳ ಸೆಗ್‍‍ಮೆಂಟಿನಲ್ಲಿ ಬಳಸಿಕೊಳ್ಳುವುದಾಗಿ ಟ್ರಯಂಫ್ ಕಂಪನಿಯು ಹೇಳಿದೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಈ ಸಹಭಾಗಿತ್ವದಿಂದಾಗಿ ಬಜಾಜ್ ಕಂಪನಿಯು ವಿಶ್ವ ಮಾರುಕಟ್ಟೆಯಲ್ಲಿ ಇಂಗ್ಲೆಂಡ್ ಮೂಲದ ಟ್ರಯಂಫ್ ಕಂಪನಿಯ ಪ್ರಮುಖ ಪಾಲುದಾರನಾಗಲಿದೆ. ಇದರ ಜೊತೆಗೆ ಬಜಾಜ್ ಕಂಪನಿಯು ಟ್ರಯಂಫ್ ಕಂಪನಿಯ ದೇಶಿಯ ಮಾರುಕಟ್ಟೆಯಲ್ಲಿನ ವಿತರಣೆಯನ್ನು ನೋಡಿಕೊಳ್ಳಲಿದೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಬಜಾಜ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ತನ್ನ ಅನುಭವವನ್ನು ಟ್ರಯಂಫ್ ಕಂಪನಿಯ ಜೊತೆಗೆ ಹಂಚಿಕೊಳ್ಳಲಿದೆ. ಇದರ ಜೊತೆಗೆ ಬಜಾಜ್ ತಾನು ಜಾಗತಿಕ ಮಾರುಕಟ್ಟೆಯಲ್ಲಿರುವ ದೇಶಗಳಲ್ಲಿ ಟ್ರಯಂಫ್ ಕಂಪನಿಯನ್ನು ಪ್ರತಿನಿಧಿಸಲಿದೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಬಜಾಜ್ ಹಾಗೂ ಟ್ರಯಂಫ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿನ ಮಧ್ಯಮ ಗಾತ್ರದ ಸೆಗ್‍‍ಮೆಂಟಿನಲ್ಲಿ ಹೊಸ ಬೈಕ್‍‍ಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲಿವೆ. ಈ ಸಹಭಾಗಿತ್ವವು ಟ್ರಯಂಫ್ ಕಂಪನಿಯ ಜಾಗತಿಕ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲಿದೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಬಜಾಜ್ ಟ್ರಯಂಫ್ ಸಹಭಾಗಿತ್ವದಲ್ಲಿ ಎರಡೂ ಕಂಪನಿಗಳು ತಮ್ಮ ಡಿಸೈನ್, ಟೆಕ್ನಾಲಜಿ, ತಯಾರಿಕಾ ವೆಚ್ಚ ಹಾಗೂ ಮಾರುಕಟ್ಟೆಯಲ್ಲಿ ಹೊಸ ಹಾಗೂ ಹಳೆಯ ಬೈಕ್‍‍ಗಳನ್ನು ಡೆಲಿವರಿ ಮಾಡುವ ಬಗೆ ಒಬ್ಬರಿಗೊಬ್ಬರು ನೆರವಾಗಲಿವೆ. ಈ ಒಪ್ಪಂದದಿಂದಾಗಿ 200 ಸಿಸಿಯಿಂದ 750 ಸಿಸಿವರೆಗಿನ ಮಧ್ಯಮ ಗಾತ್ರದ ಸೆಗ್‍‍ಮೆಂಟಿನಲ್ಲಿ ಹೊಸ ಎಂಜಿನ್ ಹಾಗೂ ಹೊಸ ಪ್ಲಾಟ್‍‍ಫಾರಂಗಳು ಬರಲಿವೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಇದರಿಂದಾಗಿ ಹಲವು ಹೊಸ ಬೈಕ್‍‍ಗಳು ಈ ಸೆಗ್‍‍ಮೆಂಟಿನಲ್ಲಿ ಬಿಡುಗಡೆಯಾಗಲಿವೆ. ಎರಡೂ ಕಂಪನಿಗಳ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಯಾಗಲಿರುವ 200ಸಿಸಿ ಸಾಮರ್ಥ್ಯದ ಬೈಕ್‍‍ಗಳ ಬೆಲೆಯು ರೂ.2 ಲಕ್ಷದೊಳಗಿರಲಿದೆ. ಇದರಿಂದಾಗಿ ಟ್ರಯಂಫ್ ಕಂಪನಿಯು ಈಗ ಬಜಾಜ್ ಕಂಪನಿಯು ಪ್ರಾಬಲ್ಯ ಹೊಂದಿರುವ 200 ಸಿಸಿ ಸೆಗ್‍‍ಮೆಂಟಿನಲ್ಲಿ ಕಾಲಿಡಲಿದೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಈ ಒಪ್ಪಂದದ ಬಗ್ಗೆ ಮಾತನಾಡಿದ ಟ್ರಯಂಫ್ ಮೋಟರ್ ಸೈಕಲ್ಸ್‌ನ ಸಿಇಒ ನಿಕ್ ಬ್ಲೂರ್‍‍ರವರು, ಟ್ರಯಂಫ್‌ ಕಂಪನಿಗೆ ಇದು ಪ್ರಮುಖ ಪಾಲುದಾರಿಕೆಯಾಗಿದ್ದು, ಈಗ ಔ‍‍ಪಚಾರಿಕವಾಗಿ ಆರಂಭವಾಗಿದೆ ಎಂದು ಹೇಳಿದರು. ನಮ್ಮ ಕಂಪನಿಯ ಬೈಕ್‍‍ಗಳನ್ನು ಹೊಸ ಸ್ಥಳಗಳಲ್ಲಿ ಬಿಡುಗಡೆಗೊಳಿಸುವುದರ ಜೊತೆಗೆ, ಈ ಪಾಲುದಾರಿಕೆಯಲ್ಲಿ ಬಿಡುಗಡೆಯಾಗುವ ಬೈಕ್‍‍ಗಳು ಯುವ ಜನತೆಯ ಜೊತೆಗೆ ಎಲ್ಲಾ ವರ್ಗದ ಗ್ರಾಹಕರನ್ನು ನಮ್ಮತ್ತ ಸೆಳೆಯಲಿವೆ.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ವೇಗವಾಗಿ ಬೆಳೆಯುತ್ತಿರುವ ಆಗ್ನೇಯ ಏಷ್ಯಾದ ಮಾರುಕಟ್ಟೆ ಹಾಗೂ ಯುರೋಪಿನಂತಹ ಪ್ರಬುದ್ಧ ಮಾರುಕಟ್ಟೆಗಳಲ್ಲಿ ನಮ್ಮ ಬೆಳವಣಿಗೆಯನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು. ಬಜಾಜ್ ಆಟೋ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಬಜಾಜ್‍‍ರವರು ಮಾತನಾಡಿ, ಟ್ರಯಂಫ್ ಕಂಪನಿಯು ಪ್ರಪಂಚದಾದ್ಯಂತ ದೊಡ್ಡ ಹೆಸರನ್ನು ಹೊಂದಿದೆ. ನಮ್ಮ ಹೊಸ ಬೈಕುಗಳಿಗೆ ಭಾರತ ಹಾಗೂ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ನಾವು ಟ್ರಯಂಫ್ ಮೋಟಾರ್ಸೈಕಲ್‍‍ನಂತಹ ಜನಪ್ರಿಯ ಕಂಪನಿಯ ಜೊತೆಗೆ ಕೆಲಸ ಮಾಡಲು ಎದುರು ನೋಡುತ್ತೇವೆ. ಈ ಸಹಭಾಗಿತ್ವದಲ್ಲಿ ಎರಡು ಕಂಪನಿಗಳೂ ನಮ್ಮ ಸಾಮರ್ಥ್ಯ ಹಾಗೂ ಪರಿಣತಿಯನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಜಂಟಿಯಾಗಿ 200ಸಿಸಿ ಬೈಕ್ ಅಭಿವೃದ್ಧಿಪಡಿಸಲಿವೆ ಬಜಾಜ್ - ಟ್ರಯಂಫ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಒಪ್ಪಂದಕ್ಕೆ ಸಹಿ ಹಾಕಿರುವ ಬಜಾಜ್ ಹಾಗೂ ಟ್ರಯಂಫ್ ಕಂಪನಿಗಳಿಗೆ ಅಭಿನಂದನೆಗಳು. ಈ ಒಪ್ಪಂದವು ಭಾರತದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದೆ. ಈ ಸಹಭಾಗಿತ್ವದ ಹೊಸ ಬೈಕ್ ಅತಿ ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Bajaj, Triumph Officially Begin Developing 200cc Motorcycle. Read in Kannada.
Story first published: Saturday, January 25, 2020, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X