ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬೆನೆಲ್ಲಿ 302ಎಸ್ ಬೈಕ್
ಇಟಲಿ ಮೂಲದ ಬೈಕ್ ಉತ್ಪಾದನಾ ಕಂಪನಿಯಾದ ಬೆನಲ್ಲಿ ಭಾರತದಲ್ಲಿ ತನ್ನ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಬೆನಲ್ಲಿ ಟಿಎನ್‍ಟಿ 300 ಬದಲಿಗೆ ಬೆನಲ್ಲಿ 302ಎಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ಬೆನಲ್ಲಿ ಕಂಪನಿಯು 302ಎಸ್ ಬೈಕ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸಂವಾದ ಒಂದರಲ್ಲಿ ಕಂಪನಿಯ ಅಧಿಕೃತ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಬೆನೆಲ್ಲಿ 302ಎಸ್ ಕಂಪನಿಯ ಟಿಎನ್‍ಟಿ 300 ಮಾದರಿಯಲ್ಲಿ ಕಾಸ್ಮೆಟಿಕ್ ನವೀಕರಣಗಳನ್ನು ನಡೆಸಿದೆ.

302ಎಸ್ ಬೈಕ್ ಹೊಸ ಪೂರ್ಣ ಎಲ್‍ಇಡಿ ಹೆಡ್‍ಲ್ಯಾಂಪ್‍ನೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಬೆನಲ್ಲಿಯ ಟಿಎನ್‍ಟಿ 300 ಮಾದರಿಯು ಹ್ಯಾಲೊಜೆನ್ ಹೆಡ್‍ಲ್ಯಾಂಪ್‍ನೊಂದಿಗೆ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಟಿಎನ್‍ಟಿ 300 ಮಾದರಿಗೆ ಹೋಲಿಸಿದರೆ 302ಎಸ್ ದೊಡ್ಡ ರೇಡಿಯೇಟರ್ ಅನ್ನು ಹೊಂದಿರಲಿದೆ. ಹೊಸ 302ಎಸ್ ಬೈಕ್ ಫ್ಯೂಯಲ್ ಟ್ಯಾಂಕ್, ಎಂಜಿನ್ ಕೌಲ್, ಸ್ಪ್ಲಿಟ್ ಸೀಟುಗಳು ಮತ್ತು ಹಿಂಭಾಗದಲ್ಲಿ ಪ್ಯಾನೆಲ್‍ಗಳನ್ನು ಹೊಂದಿದೆ.

ಬೆನಲ್ಲಿ 302ಎಸ್ ಮುಂಭಾಗದಲ್ಲಿ ಹೊಂದಾಣಿಕ ಮಡಲಾದ 41ಎಂಎಂ ಟಿಲಿಸ್ಕೋಪಿಕ್ ಫೋರ್ಕ್‍ಗಳನ್ನು ಹೊಂದಿರುತ್ತದೆ. ಇನ್ನೂ ಹಿಂಭಾಗದಲ್ಲಿ ಪ್ರಿ ಲೋಡ್ ಮತ್ತು ರಿಬೌಂಡ್ ಹೊಂದಾಣಿಕಯ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

ಹೊಸ ಬೆನೆಲ್ಲಿ 302ಎಸ್ ಬೈಕಿನ ಮುಂಭಾಗದಲ್ಲಿ ನಾಲ್ಕು ಪಿಸ್ಟನ್ ಕ್ಯಾಲಿಪರ್‍ಗಳನ್ನು ಒಳಗೊಂಡಿರುವ 260 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್‍ಗಳು ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‍ಗಳನ್ನು ಒಳಗೊಂಡಿರುವ ಸಿಂಗಲ್ 240 ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದೆ.

ಬೆನೆಲ್ಲಿ 302ಎಸ್ ಬೈಕ್ 300 ಸಿಸಿ ಬಿಎಸ್-6 ಪ್ರೇರಿತ ಪ್ಯಾರೆಲಲ್ ಟ್ವಿನ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ನಾಲ್ಕು ಡಿಒಹೆಚ್‍ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 37.5 ಬಿಹೆಚ್‍ಪಿ ಪವರ್ ಮತ್ತು 25.62 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್‍ನೊಂದಿಗೆ ಆರು ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಲಿಪರ್ ಅಸಿಸ್ಟ್ ಕ್ಲಚ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಬೆನೆಲ್ಲಿ 302ಎಸ್ ಬೈಕಿಗೆ ಭಾರತ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.3.25 ಲಕ್ಷಗಳಾಗಿದೆ.

ಬೆನೆಲ್ಲಿ 300 ಬೈಕ್ ಅನ್ನು ಕಾಸ್ಮೆಟಿಕ್ ನವೀಕರಣ ಮತ್ತು ಇತರ ನವೀಕರಣಗಳನ್ನು ನಡೆಸಿ ಭಾರತದಲ್ಲಿ ಬೆನೆಲ್ಲಿ 300ಎಸ್ ಬೈಕ್ ಆಗಿ ಬಿಡುಗಡೆಗೊಳಿಸಲಿದೆ. ಬೆನೆಲ್ಲಿ 302ಎಸ್ ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಬೆನೆಲ್ಲಿ 302ಎಸ್ ಬೈಕಿನಲ್ಲಿ ಪವರ್‍ಫುಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.


Click it and Unblock the Notifications








