ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

2019ರ ಅಕ್ಟೊಬರ್‌ನಲ್ಲಿ ಬಿಡುಗಡೆಯಾಗಿದ್ದ ಬೆನೆಲ್ಲಿ ಹೊಚ್ಚ ಹೊಸ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಇದೀಗ ಹೆಚ್ಚಳವಾಗಿದ್ದು, ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.79 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಹೊಸ ಬೈಕ್ ಬಿಡುಗಡೆಯಾಗಿದ್ದ ಸಂದರ್ಭದಲ್ಲಿ ಇಂಪೀರಿಯಲ್ 400 ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ರೂ.1.69 ಲಕ್ಷಕ್ಕೆ ಬಿಡುಗಡೆಗೊಳಿಸಿದ್ದ ಬೆನೆಲ್ಲಿ ಸಂಸ್ಥೆಯು ಕೇವಲ 5 ತಿಂಗಳ ಅವಧಿಯಲ್ಲಿ ರೂ.10 ಸಾವಿರ ಬೆಲೆ ಏರಿಕೆ ಮಾಡಿದ್ದು, ಬಿಎಸ್-4 ಎಂಜಿನ್ ಆಯ್ಕೆ ಹೊಂದಿರುವ ಹೊಸ ಬೈಕ್ ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ. ಹೊಸ ಎಂಜಿನ್ ಬಿಡುಗಡೆಯ ನಂತರ ಮತ್ತೆ ಬೆಲೆ ಹೆಚ್ಚಳವಾಗಲಿದ್ದು, ಹೊಸ ಮಾದರಿಯ ಕ್ಲಾಸಿಕ್ ಬೈಕ್ ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರಿಗೆ ಇದು ಮತ್ತಷ್ಟು ಹೊರೆಯಾಗಲಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಸದ್ಯ ದೇಶಾದ್ಯಂತ ಕೆಲವೇ ಆಯ್ದ ನಗರಗಳಲ್ಲಿ ಮಾತ್ರವೇ ಮಾರಾಟ ಜಾಲ ಹೊಂದಿರುವ ಬೆನೆಲ್ಲಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದ್ದು, ಹೊಸ ಬೈಕ್ ಉತ್ಪಾದನೆ ಮತ್ತು ಮಾರಾಟ ಜಾಲ ವಿಸ್ತರಣೆಗಾಗಿ ಬೃಹತ್ ಬಂಡವಾಳ ಹೂಡಿಕೆ ಮಾಡಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳೊಂದಿಗೆ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ಲಾಸಿಕ್ ಮಾದರಿಯ ಬೈಕ್‌ಗಳಲ್ಲೇ ವಿಶೇಷ ಡಿಸೈನ್ ಹೊಂದಿರುವ ಹೊಸ ಬೈಕ್ 1950ರ ಅವಧಿಯಲ್ಲಿ ಜನಪ್ರಿಯತೆ ಹೊಂದಿದ್ದ ಬೆನೆಲ್ಲಿ ಮೊಟೊ ಬಿ ಪ್ರೇರಣೆಯೊಂದಿಗೆ ನಿರ್ಮಾಣ ಮಾಡಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಕ್ರೋಮ್ ಸೌಲಭ್ಯ ಹೊಂದಿರುವ ರೌಂಡ್ ಹೆಡ್‌ಲ್ಯಾಂಪ್, ಟೈಲ್ ಲೈಟ್ಸ್, ಟರ್ನ್ ಇಂಡಿಕೇಟರ್ ಮತ್ತು ಲಿವರ್ಸ್ ಜೊತೆಗೆ ಸ್ಪೋಕ್ ವೀಲ್ಹ್, ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಪ್ಲಿಟ್ ಸೀಟ್, ರೆಟ್ರೋ ಸ್ಟೈಲ್ ಫ್ಯೂಲ್ ಟ್ಯಾಂಕ್ ಫೀಚರ್ಸ್ ಪಡೆದುಕೊಂಡಿದೆ. ಹೊಸ ಬೈಕ್ ಸದ್ಯ ಬಿಎಸ್-4 ಪ್ರೇರಣೆಯ 374 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಪಡೆದುಕೊಂಡಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 20.7-ಬಿಎಚ್‌ಪಿ ಮತ್ತು 29-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಹೊಸ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೊಫಿಕ್ ಫೋಕ್ಸ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಶಾಕ್ ಅಬ್ಸಾರ್ವರ್ ನೀಡಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಹಾಗೆಯೇ ಹೊಸ ಬೈಕಿನಲ್ಲಿ ರೈಡರ್ ಸುರಕ್ಷೆತೆಗಾಗಿ ಮುಂಭಾಗದ ಚಕ್ರದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಜೋಡಿಸಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಇಂಪೀರಿಯಲ್ 400 ಬೈಕ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೆಡ್, ಸಿಲ್ವರ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬಣ್ಣದ ಆಯ್ಕೆ ನೀಡಲಿದೆ ಎನ್ನಲಾಗಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಸರ್ವೀಸ್ ಮತ್ತು ವಾರಂಟಿ

ಬೈಕ್ ಮಾರಾಟದ ನಂತರದ ಸೇವೆಗಳ ಕುರಿತಾಗಿ ಗ್ರಾಹಕರ ಅಸಮಾಧಾನವನ್ನು ಅರಿತಿರುವ ಬೆನೆಲ್ಲಿ ಸಂಸ್ಥೆಯು ಈ ಬಾರಿ ಇಂಪೀರಿಯರ್ 400 ಬಿಡುಗಡೆಯೊಂದಿಗೆ ಹಲವಾರು ಜನಪ್ರಿಯ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದು, ಬೆಸ್ಟ್ ಇನ್ ಕ್ಲಾಸ್ ಸರ್ವೀಸ್ ಮಾದರಿಯಾದ 3 ವರ್ಷ ಅಥವಾ ಅನ್‌ಲಿಮಿಟೆಡ್ ಕಿ.ಮೀ ವಾರಂಟಿ ಆಫರ್ ನೀಡಿದೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬೆಲೆಯಲ್ಲಿ ಹೆಚ್ಚಳ..

ಈ ಮೂಲಕ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿರುವ ಇಂಪೀರಿಯಲ್ 400 ಬೈಕ್ ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಬೈಕ್ ಉತ್ತಮ ಬೇಡಿಕೆ ಕಂಡುಕೊಳ್ಳುವಲ್ಲಿ ಯಶಸ್ವಿಯಾದರೆ ಬೆನೆಲ್ಲಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಮತ್ತಷ್ಟು ಹೊಸ ಮಾದರಿಯ ಕ್ಲಾಸಿಕ್ ಬೈಕ್ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

More from DriveSpark

Article Published On: Tuesday, February 4, 2020, 19:20 [IST]
English summary
Benelli has increased Imperiale 400 Price. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+