ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ಬೆನೆಲ್ಲಿ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಬೈಕ್ ಮಾರಾಟವನ್ನು ಹೆಚ್ಚುವ ಮಾಡುವ ನೀರಿಕ್ಷೆಯೊಂದಿಗೆ ಮಾರಾಟ ಮಳಿಗೆಗಳನ್ನು ವಿಸ್ತರಣಾ ಯೋಜನೆಗೆ ಚಾಲನೆ ನೀಡಿದ್ದು, ದೇಶದ ಪ್ರಮುಖ ನಗರಗಳಿಗೆ ಹಂತ-ಹಂತವಾಗಿ ಹೊಸ ಮಳಿಗೆಗಳನ್ನು ವಿಸ್ತರಿಸುತ್ತಿದೆ.

ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ದೇಶಾದ್ಯಂತ ಕೆಲವೇ ಕೆಲವು ನಗರಗಳಲ್ಲಿ ಮಾತ್ರವೇ ಮಾರಾಟ ಮಳಿಗೆ ಹೊಂದಿರುವ ಬೆನೆಲ್ಲಿ ಕಂಪನಿಯು ಇದೀಗ 34ನೇ ಮಾರಾಟ ಮಳಿಗೆಯನ್ನು ಗುಜರಾತ್‌ನ ವಾಪಿಯಲ್ಲಿ ಆರಂಭಗೊಳಿಸಿದ್ದು, ಒಂದೇ ಸೂರಿನಡಿ ಮಾರಾಟ ಮಳಿಗೆ ಮತ್ತು ಸರ್ವಿಸ್ ಸೆಂಟರ್ ತೆರೆಯಲಾಗಿದೆ. ಹೊಸ ಶೋರೂಂನಲ್ಲಿ ಟಿಆರ್‌ಕೆ 502, ಟಿಆರ್‌ಕೆ 505 ಎಕ್ಸ್, ಲಿಯೊನ್ಸಿನೊ 500, 302 ಎಸ್, 302 ಆರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಇಂಪೀರಿಯರ್ 400 ಬಿಎಸ್-6 ಮಾದರಿಯು ಸಹ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಮಾಹಾವೀರ್ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಬೆನೆಲ್ಲಿ ಇಂಡಿಯಾ ಕಂಪನಿಯು ಮಧ್ಯಮ ಕ್ರಮಾಂಕದ ಸ್ಟ್ರೀಟ್ ಬೈಕ್ ಮಾದರಿಗಳೊಂದಿಗೆ ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂಪೀರಿಯಲ್ 400 ನಂತರ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಹೊಸ ಬಿಎಸ್-6 ಎಮಿಷನ್‌ ಪ್ರಕಾರ ತನ್ನ ಪ್ರಮುಖ ಬೈಕ್ ಮಾದರಿಗಳನ್ನು ಉನ್ನತೀಕರಿಸಿರುವ ಬೆನೆಲ್ಲಿ ಕಂಪನಿಯು ಇಂಪೀರಿಯರ್ 400 ಬೈಕ್ ಮಾದರಿಯ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ಹೊಸ ಬೆನೆಲ್ಲಿ ಇಂಪೀರಿಯೇಲ್ 400 ಆರಂಭಿಕ ಬೆಲೆಯು ಭಾರತದಲ್ಲಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.99 ಲಕ್ಷಗಳಾಗಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಹೊಸ ಬೈಕ್ ಮಾದರಿಯು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮಾದರಿಯು 374-ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ, 29-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ಕ್ಲಾಸಿಕ್ ಲುಕ್ ನೀಡುವುದಕ್ಕಾಗಿ ವಿಶೇಷ ವಿನ್ಯಾಸವುಳ್ಳ ಹೆಡ್‌ಲ್ಯಾಂಪ್, ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅಳವಡಿಸಲಾಗಿದ್ದು, ಸುರಕ್ಷತೆಗಾಗಿ ಎಬಿಎಸ್, ಡ್ಯುಯಲ್ ಚಾನೆಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಭಾರತದಲ್ಲಿ 34ನೇ ಬೈಕ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಬೆನೆಲ್ಲಿ

ಈ ಮೂಲಕ ಇಂಪೀರಿಯೆಲ್ 400 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜಾವಾ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗಳಿಗೆ ನೇರ ಪೈಪೋಟಿಯನ್ನು ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬೈಕ್ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿವೆ.

More from DriveSpark

Article Published On: Friday, October 30, 2020, 8:45 [IST]
English summary
Benelli Launches Exclusive Dealership in Vapi. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+