ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟೊರಾಡ್

ಜರ್ಮನಿ ಮೂಲದ ಖ್ಯಾತ ಬೈಕ್ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟರ್‌ರಾಡ್ ಎಫ್ 900 ಆರ್ ಹಾಗೂ ಎಫ್ 900 ಎಕ್ಸ್‌ಆರ್ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ 900 ಆರ್ ನೇಕೆಡ್ ರೋಡ್‌ಸ್ಟರ್ ಬೈಕಿನ ಬೆಲೆ ರೂ.9.90 ಲಕ್ಷಗಳಾದರೆ, 900 ಎಕ್ಸ್ಆರ್ ಅಡ್ವೆಂಚರ್ ಸ್ಪೋರ್ಟ್ ಟೂರರ್ ಬೈಕಿನ ಬೆಲೆ ರೂ.10.50 ಲಕ್ಷಗಳಾಗಿದೆ.

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಎಫ್ 900 ಎಕ್ಸ್‌ಆರ್ ಬೈಕ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಪ್ರೊ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪ್ರೊ ಮಾಡೆಲ್‌ಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.11.5 ಲಕ್ಷಗಳಾಗಿದೆ. ಈ ಎರಡೂ ಬೈಕ್‌ಗಳು ಎಸ್ 1000 ಆರ್ ಹಾಗೂ ಎಸ್ 1000 ಎಕ್ಸ್‌ಆರ್ ಬೈಕ್‌ಗಳ ಕೆಳಗಿನ ಸ್ಥಾನದಲ್ಲಿರಲಿವೆ.

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಎಫ್ 900 ಆರ್ ಬೈಕ್ ಕೆಟಿಎಂ 790 ಡ್ಯೂಕ್ ಹಾಗೂ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಬೈಕ್‌ಗಳಿಗೆ ಪೈಪೋಟಿ ನೀಡಲಿದ್ದರೆ, ಎಫ್ 900 ಎಕ್ಸ್ಆರ್ ಡುಕಾಟಿ ಮಲ್ಟಿಸ್ಟ್ರಾಡಾ 950 ಹಾಗೂ ಟ್ರಯಂಫ್ ಟೈಗರ್ 900 ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಬಿಎಂಡಬ್ಲ್ಯು ಮೋಟರ್‌ರಾಡ್ ಭಾರತದಲ್ಲಿರುವ ತನ್ನ ಎಲ್ಲಾ ಶೋರೂಂಗಳಲ್ಲಿ ಈ ಎರಡೂ ಬೈಕ್‌ಗಳಿಗೆ ಬುಕ್ಕಿಂಗ್‌ಗಳನ್ನು ಆರಂಭಿಸಿದೆ. ಈ ಬೈಕ್‌ಗಳನ್ನು ಸಿಬಿಯು (ಕಂಪ್ಲೀಟ್ ಬಿಲ್ಟ್ ಯುನಿಟ್) ಮೂಲಕ ಆಮದು ಮಾಡಿಕೊಳ್ಳಲಾಗುವುದು.

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಎರಡೂ ಬೈಕ್‌ಗಳಲ್ಲಿ 895 ಸಿಸಿ ಪ್ಯಾರಾಲೆಲ್-ಟ್ವಿನ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 105 ಬಿಹೆಚ್‌ಪಿ ಪವರ್ ಹಾಗೂ 92 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ ಆರು-ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ನೇಕೆಡ್ ರೋಡ್‌ಸ್ಟರ್ ಬೈಕ್ 0 - 100 ಕಿ.ಮೀ ವೇಗವನ್ನು 3.7 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡಿದರೆ, ಎಫ್ 900 ಎಕ್ಸ್‌ಆರ್ ಬೈಕ್ 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎರಡೂ ಬೈಕ್‌ಗಲ್ಲಿರುವ ಮುಖ್ಯ ವ್ಯತ್ಯಾಸವೆಂದರೆ ಫ್ಯೂಯಲ್ ಟ್ಯಾಂಕ್. ಎಕ್ಸ್‌ಆರ್ ಬೈಕ್ 15 ಲೀಟರಿನ ಟ್ಯಾಂಕ್‌ ಹೊಂದಿದ್ದರೆ, ಆರ್ ನೇಕೆಡ್ ರೋಡ್‌ಸ್ಟರ್ ಬೈಕ್ 13 ಲೀಟರಿನ ಫ್ಯೂಯಲ್ ಟ್ಯಾಂಕ್‌ ಹೊಂದಿದೆ.

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಅಡ್ವೆಂಚರ್ ಸ್ಪೋರ್ಟ್ ಟೂರರ್ ಬಿಎಂಡಬ್ಲ್ಯು ಎಫ್ 900 ಎಕ್ಸ್‌ಆರ್ ಬೈಕಿನ ಮುಂಭಾಗದಲ್ಲಿ 170 ಎಂಎಂ ಹಾಗೂ ಹಿಂಭಾಗದಲ್ಲಿ 172 ಎಂಎಂ ಸಸ್ಪೆಂಷನ್ ಅಳವಡಿಸಲಾಗಿದ್ದರೆ, ಬಿಎಂಡಬ್ಲ್ಯು ಎಫ್ 900 ಆರ್ ಬೈಕಿನ ಮುಂಭಾಗದಲ್ಲಿ 135 ಎಂಎಂ ಹಾಗೂ ಹಿಂಭಾಗದಲ್ಲಿ 142 ಎಂಎಂ ಸಸ್ಪೆಂಷನ್‌ಗಳನ್ನು ಅಳವಡಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈ ಎರಡೂ ಬೈಕ್‌ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಟ್ರಾಕ್ಷನ್ ಕಂಟ್ರೋಲ್, ರೇನ್ ಹಾಗೂ ರೋಡ್ ಎಂಬ ಎರಡು ರೈಡಿಂಗ್ ಮೋಡ್, ಎಲ್‌ಇಡಿ ಹೆಡ್‌ಲೈಟ್‌, ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, ಕ್ರೂಸ್ ಕಂಟ್ರೋಲ್, ಕಾರ್ನರಿಂಗ್ ಲೈಟ್, ಡೈನಾಮಿಕ್ ಇಎಸ್‌ಎ, ಕೀಲೆಸ್ ಇಗ್ನಿಷನ್ ಹೊಂದಿರುವ 6.5 ಇಂಚಿನ ಟಿಎಫ್‌ಟಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ.

ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು ಮೋಟರ್‌ರಾಡ್

ಈ ಎರಡೂ ಬೈಕ್‌ಗಳನ್ನು ತಲಾ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಬಿಎಂಡಬ್ಲ್ಯು ಎಫ್ 900 ಆರ್ ಬೈಕ್ ಅನ್ನು ಬ್ಲ್ಯಾಕ್ ಸ್ಟಾರ್ಮ್ ಮೆಟಾಲಿಕ್ ಮತ್ತು ಸ್ಟೈಲ್ ಸ್ಪೋರ್ಟ್ ಹಾಕೆನ್ಹೀಮ್ ಸಿಲ್ವರ್ ಮೆಟಾಲಿಕ್ / ರೇಸಿಂಗ್ ರೆಡ್ ಬಣ್ಣಗಳಲ್ಲಿ ಮಾರಾಟ ಮಾಡಲಾದರೆ, ಬಿಎಂಡಬ್ಲ್ಯು ಎಫ್ 900 ಎಕ್ಸ್‌ಆರ್ ಬೈಕ್ ಅನ್ನು ಲೈಟ್ ವೈಟ್ ಅಥವಾ ಸ್ಟೈಲ್ ಸ್ಪೋರ್ಟ್ ರೇಸಿಂಗ್ ರೆಡ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

More from DriveSpark

Article Published On: Saturday, May 23, 2020, 14:03 [IST]
English summary
BMW F 900 R & F 900 XR Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+