ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರ್ ಇದೇ ವಿನ್ಯಾಸದಲ್ಲಿರಬೇಕು ಅದೇ ವಿನ್ಯಾಸದಲ್ಲಿರಬೇಕು ಎಂಬ ಪರಿಕಲ್ಪನೆಯನ್ನು ಹೋಗಲಾಡಿಸಿ ಪ್ರತಿ ದಿನವೂ ಹೊಸ ಹೊಸ ವಿನ್ಯಾಸದ ಸ್ಕೂಟರ್ ಗಳು ಬಿಡುಗಡೆಯಾಗುತ್ತಲೇ ಇವೆ.

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಈಗ ಖ್ಯಾತ ಕಂಪನಿಯೊಂದು ಬಿಡುಗಡೆಗೊಳಿಸಿರುವ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರಿನ ವಿನ್ಯಾಸವು ವಿಶಿಷ್ಟವಾಗಿದ್ದು, ಭವಿಷ್ಯದಲ್ಲಿ ಸ್ಕೂಟರ್ ಗಳು ಹೀಗೆಯೇ ಇರಬಹುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ವಿಶ್ವ ವಿಖ್ಯಾತ ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು, ಬಿಎಂಡಬ್ಲ್ಯು ಮೋಟೊರಾಡ್ ಹೆಸರಿನಲ್ಲಿ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುತ್ತದೆ.

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ವಿಶ್ವಾದ್ಯಂತ ದಿನೇ ದಿನೇ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ತಿಳಿದಿರುವ ಬಿಎಂಡಬ್ಲ್ಯು ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಸಹ ಉತ್ಪಾದಿಸುತ್ತಿದೆ. ಈಗ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಡೆಫಿನಿಷನ್ ಸಿಇ 04 ಎಂಬ ಹೆಸರಿನ ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಲಾ ಎಲೆಕ್ಟ್ರಿಕ್ ಬೈಕುಗಳಲ್ಲಿರುವಂತಹ ಫೀಚರ್, ಶೇಪ್ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಅದರ ನೋಟವು ಹಿಂದೆಂದೂ ನೋಡಿರದ ಸೆಟ್ಟಿಂಗ್‌ನಲ್ಲಿದೆ. ಬಿಎಂಡಬ್ಲ್ಯು ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಉದ್ದವಾದ ಬಾಕ್ಸ್ ರೀತಿಯ ವಿನ್ಯಾಸವನ್ನು ನೀಡಿದೆ.

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್ ಹಾಲಿವುಡ್ ಚಿತ್ರಗಳಲ್ಲಿ ಕಂಡು ಬರುವ ಡಮ್ಮಿ ಸ್ಕೂಟರಿನಂತಿದೆ. ಆದರೆ ಡೆಫಿನಿಷನ್ ಸಿಇ 04 ಆಧುನಿಕ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು ಅದನ್ನು ಬಳಸಬಹುದು. ಈ ಸ್ಕೂಟರಿನಲ್ಲಿರುವ ವಿನ್ಯಾಸ ಸ್ಕೂಟರ್ ಬಗೆಗಿನ ಜನರ ದೃಷ್ಟಿಕೋನವನ್ನು ಬದಲಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್‌ನಲ್ಲಿ ಬೈಕುಗಳಲ್ಲಿರುವಂತಹ ಹಿಂಬದಿಯ ಸೀಟ್ ಅನ್ನು ನೀಡಲಾಗಿದೆ. ಬಿಎಂಡಬ್ಲ್ಯು ಮೋಟೊರಾಡ್ ಈ ವ್ಯವಸ್ಥೆಯನ್ನು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ವಿಭಿನ್ನವಾಗಿ ಸ್ಥಾಪಿಸಿದೆ. ಈ ಸ್ಕೂಟರಿನಲ್ಲಿರುವ ಫುಟ್, ಎಂಜಿನ್ ಹಾಗೂ ಸ್ಕೂಟರಿನ ಮುಂಭಾಗವು ಭವಿಷ್ಯದ ವಿನ್ಯಾಸವನ್ನು ಹೊಂದಿವೆ.

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರಿನಲ್ಲಿ ಸ್ಮಾರ್ಟ್ ಫೋನ್ ಗಾಗಿ ದೊಡ್ಡ ಸ್ಕ್ರೀನ್ ನೀಡಲಾಗಿದೆ. ಈ ಸ್ಕ್ರೀನ್ ಸ್ಕೂಟರಿನ ಶ್ರೇಣಿ, ಚಾರ್ಜ್ ಲೆವೆಲ್, ಕನೆಕ್ಟಿವಿಟಿ, ವೇಗದಂತಹ ವಿವಿಧ ಮಾಹಿತಿಯನ್ನು ಒದಗಿಸುತ್ತದೆ. ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ವ್ಯಾಪ್ತಿಯ ಬಗೆಗಿನ ಮಾಹಿತಿಯನ್ನು ಬಿಡುಗಡೆಗೊಳಿಸಿಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಇದರ ಜೊತೆಗೆ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಯಾವ ರೀತಿಯ ಫೀಚರ್ ಗಳನ್ನು ಅಳವಡಿಸಬೇಕು ಎಂಬ ಮಾಹಿತಿಯನ್ನು ರಹಸ್ಯವಾಗಿಟ್ಟಿದೆ. ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಡೆಫಿನಿಷನ್ ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಾನ್ಸೆಪ್ಟ್ ಮಾದರಿಯಾಗಿ ಪರಿಚಯಿಸಿದೆ.

ಸ್ಕೂಟರ್‌ಗಳ ಪರಿಕಲ್ಪನೆಯನ್ನೇ ಬದಲಿಸಲಿದೆ ಬಿಎಂಡಬ್ಲ್ಯು ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್

ಇದರಿಂದಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲು ಇನ್ನೂ ಹಲವಾರು ವರ್ಷಗಳು ಬೇಕಾಗುತ್ತವೆ. ಆದರೆ ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಲ್ಲ. ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉತ್ಪಾದನಾ ಮಾದರಿಯಾಗಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

More from DriveSpark

Article Published On: Friday, November 13, 2020, 10:08 [IST]
English summary
BMW Motorrad Company reveals new concept e scooter. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+