ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಬಾಲಿವುಡ್ ಸ್ಟಾರ್‍‍ಗಳಿಗೆ ರೀಲ್ ಲೈಫ್ ನಲ್ಲಿ ಮಾತ್ರವಲ್ಲದೇ, ರಿಯಲ್ ಲೈಫ್‍‍ನಲ್ಲೂ ಬೈಕ್‍‍ಗಳ ಕ್ರೇಜ್ ಹೆಚ್ಚೆ ಇದೆ. ಬಾಲಿವುಡ್ ಸ್ಟಾರ್‍‍ಗಳು ಐಷಾರಾಮಿ ಮತ್ತು ದುಬಾರಿ ಬೈಕ್‍‍ಗಳನ್ನುಸ್ ಇಷ್ಟಪಡುತ್ತಾರೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಕಮಾಂಡೋ ನಂತಹ ಆಕ್ಷನ್ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡ ಬಾಲಿವುಡ್ ನಟ ವಿದ್ಯುತ್ ಜಾಮ್ವಲ್ ಅವರು ಹೊಸ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಕಂಪನಿಯು ತನ್ನ ರಾಕೆಟ್ 3ಆರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಟ್ರಯಂಫ್ ರಾಕೆಟ್ 3ಆರ್ ಬೈಕ್ ಅನ್ನು ಖರೀದಿಸಿರುವ ಚಿತ್ರವನ್ನು ಟ್ರಯಂಫ್ ಸಂಸ್ಥೆಯು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಟ್ರಯಂಫ್ ರಾಕೆಟ್ 3ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾದ ಸಮಯದಲ್ಲೇ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದರು. ಇದರ ಭಾಗವಾಗಿ ಮೊದಲ ಹಂತದಲ್ಲಿ ದೇಶದ ಎಂಟು ನಗರಗಳಲ್ಲಿ ವಿತರಣೆಯನ್ನು ಮಾಡಲಾಗುತ್ತದೆ. ಈ ಎಂಟು ನಗರಗಳು ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಕೊಚ್ಚಿ, ಚಂಡೀಗಡ, ಪುಣೆ, ದೆಹಲಿ ಮತ್ತು ಮುಂಬೈ ಆಗಿದೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ. ಈ ಬೈಕ್‍ ಅನ್ನು ಹೊಸ ಫೀಚರ್ಸ್ ಮತ್ತು 2500 ಸಿಸಿ ಎಂಜಿನ್‍‍ನೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಟ್ರಯಂಫ್ 3 ಬೈಕ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ರಾಕೆಟ್ 3 ಆಗ್ರೇಸಿವ್ ರೈಡ್‍ಗೆ ಪ್ರಸಿದ್ದಿಯಾಗಿರುವ ರೋಡ್‍ಸ್ಟರ್ ಆಗಿದ್ದರೆ, ಇನ್ನೊಂದು ರಾಕೆಟ್ 3 ಜಿಟಿ ಆರಾಮದಾಯಕ ರೈಡ್‍ಗೆ ಪ್ರಸಿದ್ದಿಯಾಗಿದೆ. ರಾಕೆಟ್ 3ಆರ್ ಬೈಕ್ ಅನ್ನು ಬ್ರಿಟಿನ್ ಮೂಲದ ಟ್ರಯಂಫ್ ಕಂಪನಿಯ ಹೊಸ ಪ್ಲಾಟ್‍‍ಫಾರಂ ಆಧಾರದ ಮೇಲೆ ನಿರ್ಮಿಸಲಾಗಿದೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ರಾಕೆಟ್ 3ಆರ್ ಬೈಕ್ ಕಡಿಮೆ ಎತ್ತರದ ಸೀಟ್, ಅಡ್ಜಸ್ಟಬಲ್ ಬ್ಯಾಕ್ ರೆಸ್ಟ್ ಮುಂದೆ ವಿಂಡ್‍‍ಸ್ಕ್ರೀನ್‍ನೊಂದಿಗೆ ಅರಾಮದಾಯಕ ಸವಾರಿ ಮಾಡಲು ಸೂಕ್ತವಾಗಿದೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

2020ರ ಹೊಸ ಟ್ರಯಂಫ್ ರಾಕೆಟ್ 3ಆರ್ ಬೈಕ್ 2,500 ಸಿಸಿಯ ಇನ್ ಲೈನ್ 3 ಸಿಲಿಂಡರ್ ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 167 ಬಿ‍‍ಹೆಚ್‍‍ಪಿ ಪವರ್ ಮತ್ತು 4,000 ಆರ್‍‍ಪಿ‍ಎಂನಲ್ಲಿ 221 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಈ ಎಂಜಿನ್ ಹೊಸದಾದ ಕ್ರಾಂಕ್‍‍ಕೇಸ್ ಅಸೆಂಬ್ಲಿ, ಬ್ಯಾಲೆನ್ಸರ್ ಶಾಫ್ಟ್ ಹಾಗೂ ಲ್ಯುಬ್ರಿಕೇಷನ್ ಸಿಸ್ಟಂಗಳನ್ನು ಹೊಂದಿದೆ. ಇದರಿಂದಾಗಿ ಈ ಎಂಜಿನ್‍‍ನ ತೂಕವು 18 ಕೆ.ಜಿಯಷ್ಟು ಕಡಿಮೆಯಾಗಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ತೂಕವನ್ನು ಹಳೆಯ ತಲೆಮಾರಿನ ಬೈಕಿಗೆ ಹೋಲಿಸಿದರೆ ಸುಮಾರು 40 ಕೆ.ಜಿಯಷ್ಟು ಕಡಿಮೆಗೊಳಿಸಿದೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

2020ರ ರಾಕೆಟ್ 3ಆರ್ ಬೈಕಿನಲ್ಲಿ ಹೀಟೆಡ್ ಗ್ರಿಪ್, ಟಾರ್ಕ್ ಅಸಿಸ್ಟೆಡ್ ಕ್ಲಚ್, ಎಲ್ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲೈಟ್‌, ಎಕ್ಸ್ ಟೆಂಡೆಡ್ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಫುಟ್‌ಪೆಗ್‌, ಸ್ಪೊರ್ಟಿ 20 ಸ್ಪೋಕ್ ಅಲ್ಯೂಮಿನಿಯಂ ವ್ಹೀಲ್ ಸೇರಿದಂತೆ ಹಲವು ಸ್ಟಾಂಡರ್ಡ್ ಫೀಚರ್‍‍ಗಳಿವೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಟ್ರಯಂಫ್ ರಾಕೆಟ್ 3ಆರ್ ಬೈಕ್ ಹೊಸ ಅಲ್ಯುಮಿನಿಯಂ ಚಾಸೀಸ್ ಅನ್ನು ಸಹ ಹೊಂದಿದೆ. ರಾಕೆಟ್ 3 ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಯುಎಸ್‍‍ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍‍ಗಳಿವೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಟ್ರಯಂಫ್ ರಾಕೆಟ್ 3ಆರ್ ಬೈಕಿನಲ್ಲಿ ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಟ್ವಿನ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಗಳಿವೆ. 2020ರ ರಾಕೆಟ್ 3 ಬೈಕಿನಲ್ಲಿ ಫೂಚರಿಸ್ಟಕ್ ವೈರ್ಡ್ ಹ್ಯಾಂಡಲ್‍‍ಬಾರ್‍, ಟಾರ್ಕ್ ಅಸಿಸ್ಟ್ ಹೈಡ್ರಾಲಿಕ್ ಕ್ಲಚ್, ಫುಲ್ ಅಡ್ಜಸ್ಟಬಲ್ ಶೋವಾ ಮೊನೊಶಾಕ್ ಆರ್‍ಎಸ್‍ಯು, ಶೋವಾ ಯುಎಸ್‍ಡಿ ಫ್ರಂಟ್ ಪೋರ್ಕ್, ಬ್ರೆಂಬೊ ಬ್ರೇಕ್ ಮತ್ತು ಟ್ರಿಪಲ್ ಎಕ್ಸಾಸ್ಟ್ ಸಿಸ್ಟಂ ಅಳವಡಿಸಲಾಗಿದೆ.

ದುಬಾರಿ ಬೆಲೆಯ ಟ್ರಯಂಫ್ ರಾಕೆಟ್ 3ಆರ್ ಬೈಕನ್ನು ಖರೀದಿಸಿದ ಬಾಲಿವುಡ್ ನಟ

ಹೊಸ ರಾಕೆಟ್ 3ಆರ್ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಟಿಎಫ್‍‍ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಕೀಲೆಸ್ ಇಗ್ನಿಷನ್ ಮತ್ತು ಸ್ಟೀರಿಂಗ್ ಲಾಕ್‍ಗಳನ್ನು ಅಳವಡಿಸಲಾಗಿದೆ. ಹೊಸ ರಾಕೆಟ್ 3 ಬೈಕ್ ರೋಡ್, ರೈನ್, ಸ್ಪೋರ್ಟ್ ಎಂಬ ಮೋಡ್‍‍ಗಳನ್ನು ಹೊಂದಿದೆ.

Article Published On: Tuesday, March 3, 2020, 14:43 [IST]
English summary
Bollywood Actor Vidyut Jammwal Buys Triumph Rocket 3 R. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+