ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಬಜಾಜ್ ಕಂಪನಿಯು ಈ ವರ್ಷದ ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್‌ನ‌ ಮೊದಲ ಮಾದರಿಯಾಗಿದೆ.

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಭಾರತೀಯ ಮಾರುಕಟ್ಟೆಯಲ್ಲಿ 2020ರ ಜುಲೈ ತಿಂಗಳಲ್ಲಿ ಚೇತಕ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ 120 ಯುನಿಟ್‌ಗಳು ಮಾರಾಟವಾಗಿವೆ. 2020ರ ಜುಲೈ ತಿಂಗಳ ಮಾರಾಟದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಪ್ರತಿಸ್ಪರ್ಧಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಿಂದಿಕ್ಕಿದೆ. ಈ ಬಜಾಜ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೂಡ ಈ ವರ್ಷದ ಆರಂಭದಲ್ಲಿ ಪರಿಚಯಿಸಲಾಯಿತು.

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಬಜಾಜ್ ಚೇತಕ್‌ನಂತೆಯೇ ಬ್ರ್ಯಾಂಡ್‌ನ‌ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಬೆಂಗಳೂರು ನಗರದಲ್ಲಿ ಮಾತ್ರ ಲಭ್ಯವಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಎಥರ್ 450ಎಕ್ಸ್ ಮಾದರಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಮೊದಲ ತಿಂಗಳಲ್ಲಿ 21 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದ್ದರು. ಬಜಾಜ್ ಚೇತಕ್ ಸ್ಕೂಟರ್ ಅನ್ನು ಅರ್ಬೈನ್ ಮತ್ತು ಲೆಕ್ಟಿಕ್ ಪ್ರೀಮಿಯಂ ಎಂಬ ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಈ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿರುವ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಮತ್ತು ಅನುಕೂಲಕರ ಫೀಚರ್ಸ್‍‍ಗಳಿವೆ. ಚೇತಕ್ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಹೊಂದಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆಯು ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ.1 ಲಕ್ಷಗಳಾಗಿದೆ.

ಜುಲೈ ತಿಂಗಳ ಮಾರಾಟದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ ಬಜಾಜ್ ಚೇತಕ್

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಾಣುತ್ತದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ.

Article Published On: Tuesday, August 25, 2020, 11:46 [IST]
English summary
Overtakes Its Rival The TVS iQube Electric. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+