ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಆರ್‍ಎಸ್200 ಬೈಕ್
ಬಜಾಜ್ ಆಟೋ ಕಂಪನಿಯು ತನ್ನ ಬಿಎಸ್-6 ಪಲ್ಸರ್ ಆರ್‍ಎಸ್200 ಬೈಕನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಬಜಾಜ್ ಪಲ್ಸರ್ ಸರಣಿಯಲ್ಲಿ ಆರ್‍ಎಸ್200 ಜನಪ್ರಿಯ ಮಾದರಿಗಳಲ್ಲ ಒಂದಾಗಿದೆ.

ಇದೀಗ ಈ ಬಿಎಸ್-6 ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನ ಬೆಲೆಯನ್ನು ಹೆಚ್ಚಿಸಿದ. ಬಜಾಜ್ ಆಟೋ ಕಂಪನಿಯು ಈ ಜನಪ್ರಿಯ ಪಲ್ಸರ್ ಆರ್‍ಎಸ್200 ಬೈಕನ್ನು ಬಿಡುಗಡೆಗೊಳಿಸಿದ ಬಳಿಕ ಎರಡು ಬಾರಿ ಬೆಲೆಯನ್ನು ಏರಿಸಿದೆ. ಇದೀಗ ಈ ಬಿಎಸ್-6 ಪಲ್ಸರ್ ಆರ್‍ಎಸ್200 ಬೈಕಿನ ಬೆಲೆಯನ್ನು ರೂ.999 ಗಳವರೆಗೆ ಹೆಚ್ಚಿಸಿದೆ. ಇದೀಗ ಈ ಬಿಎಸ್-6 ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನ ಬೆಲೆಯು ರೂ.1.49 ಲಕ್ಷಗಳಾಗಿದೆ.

ಹೊಸ ಬಜಾಜ್ ಪಲ್ಸರ್ ಆರ್‍ಎಸ್200 ಬೈಕಿನಲ್ಲಿ 199.5 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 4-ವಾಲ್ವ್, ಫ್ಯೂಯಲ್-ಇಂಜೆಕ್ಟ್, ಟ್ರಿಪಲ್ ಸ್ಪಾರ್ಕ್, ಡಿಟಿಎಸ್-ಐ ಎಂಜಿನ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಈ ಎಂಜಿನ್ 9,750 ಆರ್‌ಪಿಎಂನಲ್ಲಿ 24.15 ಬಿಹೆಚ್‍ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 18.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಪಲ್ಸರ್ ಆರ್‍ಎಸ್ 200 ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 140.8 ಕಿ.ಮೀಗಳಾಗಿದೆ.

ಹೊಸ ಪಲ್ಸರ್ ಆರ್‍ಎಸ್200 ಬೈಕಿನಲ್ಲಿರುವ ಹಾರ್ಡ್‌ವೇರ್ ಸ್ಪೆಸಿಫಿಕೇಶನ್‍ಗಳನ್ನು ಬೇರೆ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡುವಂತೆ ಅಪ್‍ಗ್ರೇಡ್ ಮಾಡಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಬಿಎಸ್-6 ಬಜಾಜ್ ಪಲ್ಸರ್ ಆರ್‍ಎಸ್ 200 ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍ಗಳಿವೆ.

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ನೋಡುವುದಾದದರೆ ಮುಂಭಾಗದಲ್ಲಿ 300 ಎಂಎಂ ಹಾಗೂ ಹಿಂಭಾಗದಲ್ಲಿ 230 ಎಂಎಂ ಪೆಟಲ್ ಟೈಪ್ ಡಿಸ್ಕ್ ಬ್ರೇಕ್‌ಗಳಿವೆ. ಇದರೊಂದಿಗೆ ಎಬಿಎಸ್ ಅನ್ನು ನೀಡಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಪಲ್ಸರ್ ಆರ್‍ಎಸ್ 200 ಬೈಕಿನಲ್ಲಿ ಎಲ್ಇಡಿ ಡಿಆರ್‍ಎಲ್ ಹೊಂದಿರುವ ಟ್ವಿನ್ ಪಾಡ್ ಪ್ರೊಜೆಕ್ಟರ್‍ಗಳು, ಎಲ್ಇಡಿ ಟೇಲ್‍ಲೈಟ್, ಬ್ಲಿಂಕರ್‍ಗಳು, ಪೂರ್ಣ ಪ್ರಮಾಣದ ಫೇರಿಂಗ್ ಡಿಸೈನ್, ಮಸ್ಕ್ಯುಲರ್ ಶೇಪ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಹಾಗೂ ಸ್ಪ್ಲಿಟ್ ಸ್ಟೈಲ್ ಸೀಟುಗಳಿವೆ.

ಬಜಾಜ್ ಪಲ್ಸರ್ ಸರಣಿಯ ಬೈಕ್‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍ಗಳ ಕ್ರೇಜ್ ಇದೆ. ಆದರೆ ಈ ಪಲ್ಸರ್ ಆರ್‍ಎಸ್200 ಬೈಕಿನ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತಾ ಎಂಬುದು ಕಾದು ನೋಡಬೇಕು.


Click it and Unblock the Notifications