ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ತನ್ನ ಬಿಎಸ್-6 ಮೊಜೊ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಮಹೀಂದ್ರಾ ಮೊಜೊ 300 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.99 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಈ ಹೊಸ ಮಹೀಂದ್ರಾ ಮೊಜೊ ಬೈಕಿನಲ್ಲಿ 294.7 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 25.2 ಬಿಹೆಚ್‌ಪಿ ಪವರ್ ಮತ್ತು 25.96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ಹಿಂದಿನ ಮಾದರಿಯು 26.3 ಬಿಹೆಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬಿಎಸ್ 6 ಮಾದರಿಯ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕಡಿಮೆಯಾಗಿದೆ. ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಇನ್ನು ಹೊಸ ಮಹೀಂದ್ರಾ ಮೊಜೊ ಬೈಕಿನ ಸಬ್ ಫ್ರೇಮ್ ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದ ಹಿಂದಿನ ಬಿಎಸ್ 4 ಮಾದರಿಗಿಂತ ಸೀಟ್ ಎತ್ತರ ಹೆಚ್ಚಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಈ ಹೊಸ ಮಹೀಂದ್ರಾ ಮೊಜೊ 300 ಬೈಕ್ ಗಾರ್ನೆಟ್ ಬ್ಲ್ಯಾಕ್, ರೂಬಿ ರೆಡ್, ರೆಡ್ ಅಗೇಟ್ ಮತ್ತು ಪರ್ಲ್ ಬ್ಲ್ಯಾಕ್ ಎಂಬ ನಾಲ್ಕು ರೀತಿಯ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಮಹೀಂದ್ರಾ ಕಂಪನಿಯು ಈ ಬಿಎಸ್-6 ಮೊಜೊ 300 ಬೈಕಿನ ಬುಕ್ಕಿಂಗ್ ಅನ್ನು ಸ್ವೀಕರಿಸಲು ಈಗಗಾಲೇ ಪ್ರಾರಂಭಿಸಿದೆ. ಈ ಹೊಸ ಮೊಜೊ 300 ಬೈಕನ್ನು ಖರೀದಿಸಲು ಇಚ್ಚಿಸುವ ಗ್ರಾಹಕರು ಟೋಕನ್ ಮೊತ್ತ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಇನ್ನು ಹೊಸ ಮಹೀಂದ್ರಾ ಮೊಜೊ ಬೈಕಿನಲ್ಲಿ ಟ್ವಿನ್-ಪಾಡ್ ಹೆಡ್‌ಲ್ಯಾಂಪ್, ಸ್ಟೆಪ್-ಅಪ್ ಸಿಂಗಲ್ ಪೀಸ್ ಸೀಟ್, ಒಡೋಮೀಟರ್ ಮತ್ತು ಟ್ರಿಪ್-ಮೀಟರ್, ಸೈಡ್ ಮೌಂಟೆಡ್ ಎಕ್ಸಾಸ್ಟ್ ಸಿಸ್ಟ, ಸೆಮಿ ಡಿಜಿಟಲ್ ಕ್ಲಸ್ಟರ್ ಮತ್ತು ದೊಡ್ಡ ರೇಡಿಯೇಟರ್ ಕವರ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಮಹೀಂದ್ರಾ ಮೊಜೊ ಬೈಕನ್ನು ಭಾರತದಲ್ಲಿ 2015ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಮಹೀಂದ್ರಾ ಮೊಜೊ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಟೂರಿಂಗ್ ಬೈಕುಗಳಲ್ಲಿ ಒಂದಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಿದೆ. ಈ ಬಿಎಸ್-6 ಮಹೀಂದ್ರಾ ಮೊಜೊ 300 ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಂಸ್ಪೆಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕ್

ಹೊಸ ಮಹೀಂದ್ರಾ ಮೊಜೊ 300 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಮಹೀಂದ್ರಾ ಮೊಜೊ 300 ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಡೊಮಿನಾರ್ 250 ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Thursday, July 30, 2020, 16:14 [IST]
English summary
BS6 Mahindra Mojo 300 Launched At Rs 1.99 Lakh. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+