ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ತನ್ನ ಬಿಎಸ್-6 ಮೊಜೊ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಮಹೀಂದ್ರಾ ಕಂಪನಿಯು ಹೊಸ ಮೊಜೊ 300 ಬೈಕಿನ ಹೊಸ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.

ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಹೊಸ ಟೀಸರ್ ವೀಡಿಯೋದಲ್ಲಿ ಮಹೀಂದ್ರಾ ಮೊಜೊ 300 ಬೈಕಿನ ಎಲ್ಲಾ ಬಣ್ಣಗಳ ಆಯ್ಕೆಯನ್ನು ಬಹಿರಂಗಪಡಿಸಿದೆ. ಈ ಹೊಸ ಮಹೀಂದ್ರಾ ಬಿಎಸ್-6 ಮೊಜೊ 300 ಬೈಕ್ ಗಾರ್ನೆಟ್ ಬ್ಲ್ಯಾಕ್, ರೂಬಿ ರೆಡ್, ರೆಡ್ ಅಗೇಟ್ ಮತ್ತು ಪರ್ಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಮಹೀಂದ್ರಾ ಕಂಪನಿಯು ಈ ಬಿಎಸ್-6 ಮೊಜೊ 300 ಬೈಕಿನ ಬುಕ್ಕಿಂಗ್ ಅನ್ನು ಸ್ವೀಕರಿಸಲು ಇತ್ತೀಚೆಗೆ ಪ್ರಾರಂಭಿಸಿದೆ. ಈ ಹೊಸ ಮೊಜೊ 300 ಬೈಕನ್ನು ಖರೀದಿಸಲು ಇಚ್ಚಿಸುವ ಗ್ರಾಹಕರು ಟೋಕನ್ ಮೊತ್ತ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಈ ಹೊಸ ಮಹೀಂದ್ರಾ ಮೊಜೊ 300 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.80 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಮಹೀಂದ್ರಾ ಮೊಜೊ 300 ಬೈಕನ್ನು ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಹೊಂದಿರುವುಲ್ಲ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಈ ಹೊಸ ಮಹೀಂದ್ರಾ ಮೊಜೊ 300 ಬೈಕ್ ಈ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೋನ ಸೋಂಕಿನ ಭೀತಿಯಿಂದ ಈ ಹೊಸ ಬೈಕಿನ ಬಿಡುಗಡೆಯು ವಿಳಂಬವಾಗಿದೆ. ಇದೀಗ ಮಹೀಂದ್ರಾ ಕಂಪನಿಯು ಹೊಸ ಮೊಜೊ 300 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಮಹೀಂದ್ರಾ ಮೊಜೊ ಬೈಕನ್ನು ಭಾರತದಲ್ಲಿ 2015ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಮಹೀಂದ್ರಾ ಮೊಜೊ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಟೂರಿಂಗ್ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ ಆಕರ್ಷಕ ಟ್ವಿನ್ ಹೆಡ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಈ ಬೈಕಿನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಹೊಸ ಮಹೀಂದ್ರಾ ಮೊಜೊ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಜಾವಾ ಮತ್ತು ಜಾವಾ 42 ಬೈಕುಗಳಲ್ಲಿ ಇರುವ ಮಾದರಿಯ ಎಂಜಿನ್ ಅನ್ನು ಹೊಸ ಮಹೀಂದ್ರಾ ಮೊಜೊ ಬೈಕಿನಲ್ಲಿ ಅಳವಡಿಸುವ ಸಾಧ್ಯತೆಗಳಿದೆ.

ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಈ ಹೊಸ ಮೊಜೊ ಬೈಕಿನಲ್ಲಿ 293 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 26.2 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ 0.8 ಬಿಹೆಚ್‌ಪಿ ಪವರ್ ಮತ್ತು 0.95 ಎನ್ಎಂ ಟಾರ್ಕ್ ಕಡಿಮೆಯಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ.

ಹೊಸ ಮಹೀಂದ್ರಾ ಮೊಜೊ ಬೈಕಿನ ಟೀಸರ್ ವೀಡಿಯೋ ಬಿಡುಗಡೆ

ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಿದೆ. ಬೈಕಿನ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಂಸ್ಪೆಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

More from DriveSpark

Article Published On: Wednesday, July 29, 2020, 14:18 [IST]
English summary
Mahindra Mojo BS6 Colours Revealed in New Teaser Video. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+