ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ತನ್ನ ಬಿಎಸ್-6 ಮೊಜೊ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಬಿಎಸ್-6 ಮಹೀಂದ್ರಾ ಮೊಜೊ 300 ಬೈಕಿನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿತ್ತು.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಇದೀಗ ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ಬಿಎಸ್-6 ಮೊಜೊ 300 ಬೈಕಿನ ಮತ್ತೊಂದು ಟೀಸರ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಸ್ 6 ಮಹೀಂದ್ರಾ ಮೊಜೊ 300 ಹೊಸ ಗಾರ್ನೆಟ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಹೊಸ ಮಹೀಂದ್ರಾ ಮೊಜೊ 300 ಬೈಕನ್ನು ಹಿಂದಿನಬಿಎಸ್-4 ಮಾದರಿಗೆ ಹೋಲಿಸಿದರೆ ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಮಹೀಂದ್ರಾ ಟೂ ವ್ಹೀಲರ್ ಕಂಪನಿಯು ತನ್ನ ಬಿಎಸ್-6 ಮೊಜೊ 300 ಬೈಕನ್ನು ಇತ್ತೀಚೆಗೆ ಮೊದಲ ಬಾರಿಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿತ್ತು.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಈ ಹೊಸ ಮಹೀಂದ್ರಾ ಮೊಜೊ 300 ಬೈಕ್ ಈ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೋನ ಸೋಂಕಿನ ಭೀತಿಯಿಂದ ಈ ಹೊಸ ಬೈಕಿನ ಬಿಡುಗಡೆಯು ವಿಳಂಬವಾಗಿದೆ. ಇದೀಗ ಮಹೀಂದ್ರಾ ಕಂಪನಿಯು ಹೊಸ ಮೊಜೊ 300 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಇದರ ಭಾಗವಾಗಿ ಈ ಮಹೀಂದ್ರಾ ಮೊಜೊ 300 ಬೈಕ್ ಪುಣೆಯ ಹೊರವಲಯದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿತ್ತು. ಮಹೀಂದ್ರಾ ಕಂಪನಿಯು ಮೊಜೊ ಎಕ್ಸ್‌ಟಿ 300 ಮತ್ತು ಯುಟಿ 300 ಅನ್ನು ಸ್ಥಗಿತಗೊಳಿಸಿದ ಬಳಿಕ ಮಹೀಂದ್ರಾ ಮೊಜೊ 300 ಎಬಿಎಸ್ ಅನ್ನು 2019ರಲ್ಲಿ ಬಿಡುಗಡೆಗೊಳಿಸಿದ್ದರು. ಇದರ ಬಿಎಸ್-6 ಆವೃತ್ತಿಯು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಮಹೀಂದ್ರಾ ಮೊಜೊ ಬೈಕನ್ನು ಭಾರತದಲ್ಲಿ 2015ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ್ದರು. ಮಹೀಂದ್ರಾ ಮೊಜೊ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಟೂರಿಂಗ್ ಬೈಕುಗಳಲ್ಲಿ ಒಂದಾಗಿದೆ. ಈ ಬೈಕಿನಲ್ಲಿ ಆಕರ್ಷಕ ಟ್ವಿನ್ ಹೆಡ್ ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಈ ಬೈಕಿನಲ್ಲಿ ದೊಡ್ಡ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಹೊಸ ಮಹೀಂದ್ರಾ ಮೊಜೊ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಜಾವಾ ಮತ್ತು ಜಾವಾ 42 ಬೈಕುಗಳಲ್ಲಿ ಇರುವ ಮಾದರಿಯ ಎಂಜಿನ್ ಅನ್ನು ಹೊಸ ಮಹೀಂದ್ರಾ ಮೊಜೊ ಬೈಕಿನಲ್ಲಿ ಅಳವಡಿಸುವ ಸಾಧ್ಯತೆಗಳಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಹೊಸ ಮೊಜೊ ಬೈಕಿನಲ್ಲಿ 293 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 26.2 ಬಿಹೆಚ್‍ಪಿ ಪವರ್ ಮತ್ತು 27.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ 0.8 ಬಿಹೆಚ್‌ಪಿ ಪವರ್ ಮತ್ತು 0.95 ಎನ್ಎಂ ಟಾರ್ಕ್ ಕಡಿಮೆಯಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮೊಜೊ 300

ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಅಳವಡಿಸಿದೆ. ಬೈಕಿನ ಸಂಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಂಸ್ಪೆಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

More from DriveSpark

Article Published On: Friday, July 17, 2020, 12:27 [IST]
English summary
Mahindra Mojo BS6 Model To Feature New Garnet Black & Red Paint Scheme Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+