ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಬಿಎಸ್-6 ವಾಹನಗಳ ಮಾರಾಟವು ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ನಿಯಮ ಅನುಸಾರ ಪ್ರಸ್ತುತ ವಾಹನ ಮಾದರಿಗಳನ್ನು ಉನ್ನತೀಕರಿಸುತ್ತಿವೆ. ಇದೀಗ ಸುಜುಕಿ ಮೋಟಾರ್‌ಸೈಕಲ್ ಕೂಡಾ ತನ್ನ ಜನಪ್ರಿಯ ಸ್ಕೂಟರ್ ಆವೃತ್ತಿಯಾದ ಆಕ್ಸೆಸ್ 125 ಆವೃತ್ತಿಯನ್ನು ಹೊಸ ಎಮಿಷನ್ ಅನುಗುಣವಾಗಿ ಅಭಿವೃದ್ದಿಪಡಿಸಿ ಬಿಡುಗಡೆ ಮಾಡಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

125ಸಿಸಿ ವಿಭಾಗದ ಸ್ಕೂಟರ್‌ಗಳ ಮಾರಾಟದಲ್ಲಿ ಆಕ್ಸೆಸ್ 125 ಮಾದರಿಗೆ ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಬಿಎಸ್-6 ಆವೃತ್ತಿಯು ಮತ್ತಷ್ಟು ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಹೊಸ ಆಕ್ಸೆಸ್ ಮಾದರಿಯು ಪ್ರಮುಖವಾಗಿ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಿದ್ದು, ಈ ಹಿಂದಿನಂತಯೇ ಸ್ಟ್ಯಾಂಡರ್ಡ್ ಮತ್ತು ಸ್ಪೆಷಲ್ ಎಡಿಷನ್‌ಗಳಲ್ಲಿ ಹೊಸ ಸ್ಕೂಟರ್ ಅಭಿವೃದ್ದಿಗೊಂಡಿದ್ದರೂ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಪಡೆದಿವೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಬಿಎಸ್-6 ಎಂಜಿನ್ ಮತ್ತು ಕೆಲವು ಪ್ರೀಮಿಯಂ ಸೌಲಭ್ಯಗಳಿಂದಾಗಿ ಬೆಲೆಯಲ್ಲಿ ತುಸು ಏರಿಕೆಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಟ್ಯಾಂಡರ್ಡ್ ಆವೃತ್ತಿಯು ರೂ.64,800 ಬೆಲೆ ಹೊಂದಿದ್ದರೆ ಸ್ಪೆಷಲ್ ಆವೃತ್ತಿಯು ರೂ.68,500 ಬೆಲೆ ಹೊಂದಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಇನ್ನು ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಅಲಾಯ್ ಡ್ರಮ್ ಬ್ರೇಕ್, ಅಲಾಯ್ ಡಿಸ್ಕ್ ಬ್ರೇಕ್ ಮತ್ತು ಸ್ಟೀಲ್ ಡ್ರಮ್ ಬ್ರೇಕ್ ವೆರಿಯೆಂಟ್‌ಗಳಿದ್ದು, ಸ್ಪೆಷಲ್ ಎಡಿಷನ್‌ನಲ್ಲಿ ಅಲಾಯ್ ಡ್ರಮ್ ಬ್ರೇಕ್ ಮತ್ತು ಅಲಾಯ್ ಡಿಸ್ಕ್ ಬ್ರೇಕ್ ವೆರಿಯೆಂಟ್‌ಗಳನ್ನು ಹೊಂದಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಹೀಗಾಗಿ ಪ್ರತಿ ವೆರಿಯೆಂಟ್‌ಗಳಲ್ಲೂ ವಿಭಿನ್ನವಾದ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಲಿದ್ದು, ಎಂಜಿನ್ ಮಾತ್ರ ಎಲ್ಲಾ ಮಾದರಿಗಳಲ್ಲೂ ಒಂದೇ ಆಗಿತ್ತದೆ. ಹೊಸ ಸ್ಕೂಟರ್‌ನಲ್ಲಿ ಬಿಎಸ್-6 ಪ್ರೇರಿತ 124-ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8-ಬಿಎಚ್‌ಪಿ ಮತ್ತು 10-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇಕೋ ಪರ್ಫಾಮೆನ್ಸ್ ಟೆಕ್ನಾಲಜಿಯೊಂದಿಗೆ ಅಭಿವೃದ್ದಿ ಹೊಂದಿರುವ ಹೊಸ ಎಂಜಿನ್ ಅಧಿಕ ಪ್ರಮಾಣದ ಮೈಲೇಜ್ ನೀಡಲಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಜೊತೆಗೆ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸಿರುವ ಹೊಸ ಎಮಿಷನ್ ತಂತ್ರಜ್ಞಾನವು ಮಾಲಿನ್ಯ ಹೊರಸೂಸುವಿಕೆಯಲ್ಲೂ ಸಾಕಷ್ಟು ಸುಧಾರಣೆ ಕಂಡಿದ್ದು, 2020ರ ಮಾದರಿಯಲ್ಲಿ ಈ ಬಾರಿ ಹಲವಾರು ಹೊಸ ಫೀಚರ್ಸ್‌ಗಳನ್ನು ಜೋಡಿಸಲಾಗಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಇಕೋ ಅಸಿಸ್ಟ್ ಇಲ್ಯುಮೆನೆಷನ್, ಫ್ಯೂಲ್ ಇಂಜೆಕ್ಷಡ್ ಎಂಜಿನ್, ಹೊರಭಾಗದಲ್ಲಿ ಫ್ಯೂಲ್ ಟ್ಯಾಂಕ್ ಕ್ಯಾಪ್ ಮತ್ತು ಹೊಸ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್ ಹೊಂದಿದ್ದು, ಈ ಹಿಂದಿನ ಆವೃತ್ತಿಗಿಂತಲೂ ಆರಾಮದಾಯಕ ರೈಡಿಂಗ್ ಅನುಭವ ನೀಡಲಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಆಕ್ಸೆಸ್ 125 ಸ್ಕೂಟರ್ ಆವೃತ್ತಿಯು ಬೆಸ್ಟ್ ಸೆಲ್ಲಿಂಗ್ ಸ್ಕೂಟರ್ ವಿಭಾಗದಲ್ಲಿ ಟಾಪ್ 5 ಸ್ಥಾನದಲ್ಲಿದ್ದು, ಆಕರ್ಷಕ ಬೆಲೆ, ಅತ್ಯುತ್ತಮ ಡಿಸೈನ್, ಹೆಚ್ಚು ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಬಹುಬೇಡಿಕೆಯ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಜೊತೆಗೆ ಸುಜುಕಿ ಸಂಸ್ಥೆಯು ಆಸಕ್ತ ಗ್ರಾಹಕರಿಗಾಗಿ ಆಕ್ಸೆಸ್ 125 ಸ್ಪೆಷಲ್ ಎಡಿಷನ್ ಮಾದರಿಯನ್ನು ಅಭಿವೃದ್ದಿಗೊಳಿಸಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ದುಬಾರಿ ಬೆಲೆಯೊಂದಿಗೆ ಸ್ಪೆಷಲ್ ಎಡಿಷನ್‌ನಲ್ಲಿ ಕೆಲವು ಹೆಚ್ಚುವರಿ ಫೀಚರ್ಸ್‌ಗಳನ್ನು ಸಹ ಸೇರಿಸಲಾಗಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಸ್ಪೆಷಲ್ ಎಡಿಷನ್‌ನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಮತ್ತು ಹೊಸ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್ ಸೌಲಭ್ಯವಿರಲಿದ್ದು, ಆರಾಮದಾಯಕ ರೈಡಿಂಗ್ ಒದಗಿಸುವುದಲ್ಲದೇ ಗ್ರಾಹಕರಿಗೆ ಗರಿಷ್ಠಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಈ ಮೂಲಕ ಪ್ರತಿಸ್ಪರ್ಧಿ ಸ್ಕೂಟರ್ ಮಾದರಿಗಳಾದ ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಗ್ರಾಜಿಯಾ, ಆಕ್ಟಿವಾ 125 ಮತ್ತು ಟಿವಿಎಸ್ ಜೂಪಿಟರ್ ಸ್ಕೂಟರ್‌ಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಎಲ್ಲಕ್ಕಿಂತ ಮುಖ್ಯವಾಗಿ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಬಿಎಸ್-6 ವರ್ಷನ್ ಸುಜುಕಿ ಆಕ್ಸೆಸ್ 125 ಸ್ಕೂಟರ್ ಬಿಡುಗಡೆ

ಹೀಗಾಗಿ ಸುಜುಕಿ ಸಂಸ್ಥೆಯು ಭವಿಷ್ಯದ ವಾಹನ ಮಾದರಿಗಳ ಮಾರಾಟದಲ್ಲಿ ಮಹತ್ವದ ಹೆಜ್ಜೆಯಿಡುತ್ತಿದ್ದು, ಸದ್ಯದಲ್ಲೇ ಬರ್ಗಮನ್ ಸ್ಟ್ರೀಟ್ 125 ಮತ್ತು ಇನ್ನುಳಿದ ಬೈಕ್ ಆವೃತ್ತಿಗಳನ್ನು ಹೊಸ ನಿಯಮದಂತೆ ಉನ್ನತೀಕರಿಸಿ ಬಿಡುಗಡೆ ಮಾಡಲಿದೆ.

More from DriveSpark

Article Published On: Monday, January 6, 2020, 19:20 [IST]
English summary
Suzuki Motorcycle India launches New Suzuki Access 125 BS 6. Read more in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+