ಭಾರತದಲ್ಲಿ ಬಿಡುಗಡೆಯಾಯ್ತು ಹೂಸ ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕ್
ಟ್ರಯಂಫ್ ಕಂಪನಿಯು ಇತ್ತೀಚೆಗೆ ತನ್ನ 2020ರ ಸ್ಟ್ರೀಟ್ ಟ್ರಿಪಲ್ ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಟ್ರಯಂಫ್ ಕಂಪನಿಯು ಹೊಸ ಸ್ಟ್ರೀಟ್ ಟ್ವಿನ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಈ ಬಿಎಸ್-6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನ ಆರಂಭಿಕ ಬೆಲೆಯು ರೂ.7.45 ಲಕ್ಷಗಳಾಗಿದೆ. ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕ್ ಬಿಎಸ್ 6 ಅಪ್‌ಡೇಟ್‌ನ ಹೊರತಾಗಿ ಉಳಿದತೆ ಬಿಎಸ್-4 ಮಾದರಿಗೆ ಹೋಲುತ್ತದೆ. ಈ ಬೈಕಿನ ವಿನ್ಯಾಸವು 1959ರ ಬೊನೆವೆಲ್ಲಿ ಮಾದರಿಯಂತೆ ಮಾರ್ಡನ್ ಅಂಶಗಳೊಂದಿಗೆ ರೆಟ್ರೊ ಸ್ಟೈಲಿಂಗ್ ಅನ್ನು ಒಳಗೊಂಡಿದೆ. ಈ ಬೈಕಿನಲ್ಲಿ ಸೈಡ್ ಟರ್ನ್ ಸಿಗ್ನಲ್ ಗಳ ಜೊತೆ ರೌಂಡ್ ವಿನ್ಯಾಸವನ್ನು ಹೊಂದಿರುವ ಹೆಡ್‌ಲೈಟ್ ಅನ್ನು ಹೊಂದಿದೆ.

ಬಿಎಸ್-6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕ್ ಆಲ್-ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಇದರಲ್ಲಿ ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳು, ಬ್ಲ್ಯಾಕ್ ಸೈಡ್ ಪ್ಯಾನೆಲ್‌ಗಳು ಮತ್ತು ಬ್ಲ್ಯಾಕ್ ಎಂಜಿನ್ ಅನ್ನು ಒಳಗೊಂಡಿದೆ. ಇದು ಈ ಬೈಕನ್ನು ಮಾರ್ಡನ್ ಕ್ಲಾಸಿಕ್ ವಿನ್ಯಾಸದೊಂದಿಗೆ ಸ್ಪೋರ್ಟಿಯರ್ ಆಗಿ ಕಾಣುವಂತೆ ಮಾಡುತ್ತದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಬಿಎಸ್-6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41 ಎಂಎಂ ಕೆವೈಬಿ ಫೋರ್ಕ್‌ಗಳೊಂದಿಗೆ ಕಾರ್ಟ್ರಿಡ್ಜ್ ಡ್ಯಾಂಪಿಂಗ್ ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯೊಂದಿಗೆ ಕೆವೈಬಿ ಟ್ವಿನ್ ಆರ್‌ಎಸ್‌ಯುಗಳನ್ನು ಹೊಂದಿದೆ.

ಇನ್ನು ಈ ಹೊಸ ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310 ಎಂಎಂ ಫ್ಲೋಟಿಂಗ್ ಡಿಸ್ಕ್ ಬ್ರೆಂಬೊ ಫೋರ್-ಪಿಸ್ಟನ್ ಫಿಕ್ಸ್ಡ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ನೊಂದಿಗೆ ನಿಸ್ಸಿನ್ 2-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸಹ ನೀಡಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರ್

ಬಿಎಸ್ 6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನಲ್ಲಿ ಎಲ್ಸಿಡಿ ಮಲ್ಟಿ-ಫಂಕ್ಷನಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದು ಸ್ಪೀಡೋಮೀಟರ್, ಎಂಜಿನ್ ಆರ್‌ಪಿಎಂ, ಓಡೋಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್, ಫ್ಯೂಯಲ್ ಗೇಜ್, ಸರ್ವಿಸ್ ಇಂಡಿಕೇಟರ್, ಕ್ಲಾಕ್, 2 ಟ್ರಿಪ್ ಮೀಟರ್ ಮತ್ತು ಪ್ರಸ್ತುತ ಇಂಧನ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಬಿಎಸ್ 6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನಲ್ಲಿ 900 ಸಿಸಿ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 65 ಬಿಹೆಚ್‍ಪಿ ಪವರ್ ಮತ್ತು 3,700 ಆರ್‌ಪಿಎಂನಲ್ಲಿ 80 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಮಲ್ಟಿ-ಪ್ಲೇಟ್ ಅಸಿಸ್ಟ್ ಕ್ಲಚ್ ಅನ್ನು ಜೋಡಿಸಲಾಗಿದೆ. ಬಿಎಸ್ 6 ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕ್ ಜೆಟ್ ಬ್ಲ್ಯಾಕ್, ಮ್ಯಾಟ್ ಐರನ್‌ಸ್ಟೋನ್ ಮತ್ತು ಕೊರೊಸಿ ರೆಡ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ.

ಟ್ರಯಂಫ್ ಕಂಫನಿಯು ಸದ್ದಿಲ್ಲದೆ ಹೊಸ ಸ್ಟ್ರೀಟ್ ಟ್ವಿನ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಟ್ರಯಂಫ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ.


Click it and Unblock the Notifications








