ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಡುಕಾಟಿ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ವಿಶ್ವ ಡುಕಾಟಿ ಪ್ರೀಮಿಯರ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಬೈಕನ್ನು ಪ್ರದರ್ಶಿಸಲಾಗಿತ್ತು.

ಈ ಹೊಸ ಡುಕಾಟಿ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆದರೆ ಡುಕಾಟಿ ಕಂಪನಿಯು ಈ ಸೂಪರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಿಲ್ಲವೆಂದು ವರದಿಗಳು ಪ್ರಕಟವಾಗಿದೆ. ಇನ್ನು ಡುಕಾಟಿ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ 959 ಪಾನಿಗಲೆ ಬೈಕನ್ನು ಎಂಟ್ರಿ ಲೆವಲ್ ಸೂಪರ್‌ಸ್ಪೋರ್ಟ್ ಬೈಕ್ ಆಗಿ ಬದಲಾಯಿಸಲಾಗುತ್ತದೆ.

ಪಾನಿಗಲೆ ವಿ2ನ ಬಾಡಿವರ್ಕ್ ಪೆರಲ್ ವೈಟ್ ಬಣ್ಣದೊಂದಿಗೆ ಏರ್ ವೆಂಟ್ಸ್ ಮತ್ತು ಸೈಡ್ ಫೇರಿಂಗ್‌ಗಳಲ್ಲಿ ರೆಡ್ ಬಣ್ಣದ ಅಂಶಗಳನ್ನು ಒಳಗೊಂಡಿದೆ. ಈ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕ್ ರೆಡ್ ಬಣ್ಣದ ಅಲಾಯ್ ವ್ಹೀಲ್ ಅನ್ನು ಹೊಂದಿದೆ.
MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಡುಕಾಟಿ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕಿನಲ್ಲಿ ಇತರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕಿನಲ್ಲಿ ಬಿಎಸ್ 6 ಪ್ರೇರಿತ 955 ಸಿಸಿ ಸೂಪರ್‌ಕ್ವಾಡ್ರೊ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 155 ಬಿಹೆಚ್‌ಪಿ ಮತ್ತು 104 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಡುಕಾಟಿ ಕಂಪನಿಯು ಭಾರತದಲ್ಲಿ ಪಾನಿಗಲೆ ವಿ2 ಬೈಕನ್ನು ಬಿಡುಗಡೆಗೊಳಿಸಲಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಡುಕಾಟಿ ತನ್ನ ಪಾನಿಗಲೆ ವಿ2 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇತ್ತೀಚೆಗೆ ಡುಕಾಟಿ ಕಂಪನಿಯು ಈ ಪಾನಿಗಲೆ ವಿ2 ಬೈಕಿನ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಹೊಸ ಡುಕಾಟಿ ಪಾನಿಗಲೆ ವಿ2 ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.1 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇನ್ನು ಹೂಸ ಪಾನಿಗಲೆ ವಿ2 ಬೈಕ್ ಕೆಲವು ಸಣ್ಣ ಬದಲಾವಣೆಯೊಂದಿಗೆ ಬಿಡುಗಡೆಯಾಗಲಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಈ ಹೊಸ ಪಾನಿಗಲೆ ವಿ2 ಬೈಕ್ ಫ್ರಂಟ್ ಫೇರಿಂಗ್, ಮತ್ತು ಸಿಂಗಲ್ ಸೈಡ್ ಸ್ವಿಂಗಾರ್ಮ್ ಅನ್ನು ಒಳಗೊಂಡಿರುತ್ತದೆ. ಈ ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿರಲಿದೆ. ಡುಕಾಟಿ ಪಾನಿಗಲೆ ವಿ2 ಬೈಕ್ ತನ್ನ ಸಂಪೂರ್ಣ ಎಲೆಕ್ಟ್ರಾನಿಕ್ಸ್ ಕಿಟ್ ಅನ್ನು 959 ಮಾದರಿಯಿಂದ ಎರವಲು ಪಡೆಯುತ್ತದೆ.

ಡುಕಾಟಿ ಕಂಪನಿಯು ಹೊಸ ಪಾನಿಗಲೆ ವಿ2 ವೈಟ್ ರೊಸ್ಸೊ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಿಲ್ಲ. ಆದರೆ ಹೊಸ ಪಾನಿಗಲೆ ವಿ2 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಈ ಹೊಸ ಪಾನಿಗಲೆ ವಿ2 ಬೈಕ್ ಹಿಂದಿನ ಬಿಎಸ್-4 ಮಾದರಿಗಿಂತ ತುಸು ಹೆಚ್ಚು ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.


Click it and Unblock the Notifications








