ಡೀಲರ್ ಬಳಿ ತಲುಪಿದ ಬಿಎಸ್-6 ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕ್
ಡುಕಾಟಿ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕುಗಳನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿತ್ತು. ಇದರಲ್ಲಿ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಯುನಿಟ್‍ಗಳು ಡೀಲರ್ ಬಳಿ ತಲುಪಲು ಪ್ರಾರಂಭವಾಗಿವೆ.

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕ್ ಡೀಲರ್ ಬಳಿ ತಲುಪಿರುವುದನ್ನು ಬೈಕ್ ವಾಲೆ ಬಹಿರಂಗಪಡಿಸಿದೆ. ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.95 ಲಕ್ಷಗಳಾಗಿದರೆ, ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕಿನ ಬೆಲೆಯು ರೂ.13.74 ಲಕ್ಷಗಳಾಗಿದೆ. ಈ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕನ್ನು ಈ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗಿತ್ತು.

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಸರಣಿಯಲ್ಲಿರುವ ಪಾನಿಗಲೆ ವಿ2 ಮಾದರಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಇದಾದ ಬಳಿಕ ಬಿಎಸ್-6 ಮಾದರಿಯಾಗಿ ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕುಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಸ್ಕ್ರ್ಯಾಂಬ್ಲರ್ 1100 ಪ್ರೊ ಹೊಸ ಗ್ರಾಫಿಕ್ಸ್ ಅನ್ನು ಹೊಂದಿದೆ. ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕುಗಳು ಓಷನ್ ಡ್ರೈವ್' ಎಂಬ ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿರಲಿದೆ. ಇನ್ನು ಈ ಬೈಕುಗಳ ಬಲಭಾಗದಲ್ಲಿ ಹೊಸ ಡ್ಯುಯಲ್ ಟೈಲ್-ಪೈಪ್, ಹೊಸ ನಂಬರ್ ಪ್ಲೇಟ್ ಹೋಲ್ಡರ್ ಮತ್ತು ಹೊಸ ಲಿವರಿ ಅನ್ನು ಪಡೆದಿದೆ.

ಈ ಎರಡು ಬೈಕುಗಳಲ್ಲಿ ಹೆಡ್‌ಲ್ಯಾಂಪ್‌ನಲ್ಲಿ ಬ್ಲ್ಯಾಕ್ ಮೆಟಲ್ 'ಎಕ್ಸ್' ರೂಪದಲ್ಲಿ ರೆಟ್ರೊ ಟಚ್ ಅನ್ನು ನೀಡಿದೆ. ಬಿಎಸ್-6 ಸ್ಕ್ರ್ಯಾಂಬ್ಲರ್ 1100 ಪ್ರೊ ಮತ್ತು ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕುಗಳಲ್ಲಿ 1079 ಸಿಸಿ ಏರ್-ಕೂಲ್ಡ್ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಈ ಎಂಜಿನ್ 7500 ಆರ್‌ಪಿಎಂನಲ್ಲಿ 85 ಬಿಹೆಚ್‌ಪಿ ಪವರ್ ಮತ್ತು 4,750 ಆರ್‌ಪಿಎಂನಲ್ಲಿ 88 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಡುಕಾಟಿ ಬೈಕುಗಳಲ್ಲಿ ಆಕ್ಟಿವ್, ಸಿಟಿ ಮತ್ತು ಜರ್ನಿ ಎಂಬ ಮೂರು ರೈಡಿಂಗ್ ಮೋಡ್‌ಗಳಿವೆ. ಈ ಬೈಕುಗಳಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕಿನಲ್ಲಿ ಸಸ್ಪೆಂಕ್ಷನ್ ಗಳಿಗಾಗಿ ಮುಂಭಾಗದಲ್ಲಿ ಇನವರ್ಡಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಕಾಯಾಬಾ ಮೊನೊಶಾಕ್ ಸೆಟಪ್ ಅನ್ನು ನೀಡಿದೆ.

ಇನ್ನು ಸ್ಪೋರ್ಟ್ ಪ್ರೊ ಬೈಕಿನ ಮುಂಭಾಗದಲ್ಲಿ 48 ಎಂಎಂ ಇನವರ್ಡಟ್ ಓಹ್ಲಿನ್ಸ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಮೊನೊಶಾಕ್ ಅನ್ನು ಹೊಂದಿದೆ.

ಇನ್ನು ಹೊಸ ಡುಕಾಟಿ ಬೈಕುಗಳಲ್ಲಿ ಬ್ರೇಕಿಂಗ್ ಸಿಸ್ಟಂ ಒಂದೇ ರೀತಿಯಲ್ಲಿದೆ. ಇದು 320 ಎಂಎಂ ಡಿಸ್ಕ್‌ಗಳನ್ನು ಬ್ರೆಂಬೊ ಎಂ 4.32 ಮೊನೊಬ್ಲೋಕ್ ಕ್ಯಾಲಿಪರ್‌ಗಳೊಂದಿಗೆ ಮುಂಭಾಗದಲ್ಲಿ 245 ಎಂಎಂ ರೋಟರ್ ಅನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಸ್ಲೈಡಿಂಗ್ ಕ್ಯಾಲಿಪರ್ ಅನ್ನು ಒಳಗೊಂಡಿರುತ್ತವೆ.

ಇದರೊಂದಿಗೆ ಡ್ಯುಯಲ್-ಚಾನೆಲ್ ಬಾಷ್ ಕಾರ್ನರಿಂಗ್ ಎಬಿಎಸ್ ಅನ್ನು ನೀಡಲಾಗಿದೆ. ಇನ್ನು ಬಿಡುಗಡೆಗೊಂಡಿರುವ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಪ್ರೊ ಬೈಕ್ ಡೀಲರ್ ಗಳ ಬಳಿ ತಲುಪಿರುವುದನ್ನು ಶೀಘ್ರದಲ್ಲೇ ಈ ಮಾದರಿಯ ವಿತರಣೆಯನ್ನು ಪ್ರಾರಂಭಿಸಬಹುದು.


Click it and Unblock the Notifications








