ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನ ಟೀಸರ್ ಬಿಡುಗಡೆ
ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ಡುಕಾಟಿ ಈ ಮಲ್ಟಿಸ್ಟ್ರಾಡಾ ವಿ4 ಬೈಕಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕನ್ನು ಮುಂದಿನ ತಿಂಗಳ 4ರಂದು ಅನಾವರಣಗೊಳಿಸಲಿದೆ. ಈ ಹೊಸ ಅಡ್ವೆಂಚರ್ ಟೂರರ್ ಬೈಕ್ ಆನ್‌ಬೋರ್ಡ್ ನ್ಯಾವಿಗೇಷನ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಲಿದೆ ಎಂದು ಟೀಸರ್ ನಲ್ಲಿ ಬಹಿರಂಗಪಡಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಅಡ್ವೆಂಚರ್ ಟೂರರ್ ಬೈಕುಗಳಲ್ಲಿ ಒಂದಾಗಿದೆ.

ಟೀಸರ್ ಚಿತ್ರದಲ್ಲಿ ಕಂಡುಬಂದಂತೆ, ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ನ್ಯಾವಿಗೇಷನ್ ಸಿಸ್ಟಂ ಡೈರಕ್ಷನಲ್, ಟಾರ್ಗೆಟ್ ರಿಚ್ ಆಗಲು ಉಳಿದಿರುವ ದೂರ ಮತ್ತು ಇತರ ಡೇಟಾದ ನಡುವೆ ಬರುವ ಅಂದಾಜು ಸಮಯದಂತಹ ವಿವಿಧ ಮಾಹಿತಿಗಳು ಪ್ರದರ್ಶಿಸುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಫೀಚರ್ ದೂರ ಸೆಟ್ಟಿಂಗ್‌ಗಳನ್ನು ತೋರಿಸುತ್ತದೆ. ಇನ್ನು ಟೀಸರ್ ಚಿತ್ರದಲ್ಲಿ ಸ್ವಿಚ್‌ಗಿಯರ್ ಫೀಚರ್ ಅನ್ನು ಕೂಡ ಒಳಗೊಡಿರುವುದನ್ನು ಕೂಡ ಬಹಿರಂಗವಾಗಿದೆ,

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಈಗಾಗಲೇ ಉತ್ಪಾದನೆಯನ್ನು ಆರಂಭಿಸಿದ್ದಾರೆ. ಡುಕಾಟಿ ಕಂಪನಿಯು ಈ ಬೈಕನ್ನು 2020ರ ನವೆಂಬರ್ 4ರಂದು ಅಧಿಕೃತವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಾಗಿ ಅನಾವರಣಗೊಳಿಸಲಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಇನ್ನು ಡುಕಾಟಿ ಕಂಪನಿಯು ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕಿನ ಎಂಜಿನ್ ಮಾಹಿತಿಯನ್ನು ಬಹಿರಂಗಪಡಿಸಿದೆ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ 1,158 ಸಿಸಿ, 90 ಡಿಗ್ರಿ ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 168 ಬಿಹೆಚ್‌ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ರ್‌ಬಾಕ್ಸ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್ & ಡೌನ್ ಸಿಸ್ಟಂ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ತನ್ನ 2020ರ ಮಲ್ಟಿಸ್ಟ್ರಾಡಾ 950 ಎಸ್ ಅಡ್ವೆಂಚರ್-ಟೂರರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಕ್ಕೆ ಸಜ್ಜಾಗಿದೆ. ಡುಕಾಟಿ ಕಂಪನಿಯು ತನ್ನ ಬಿಎಸ್ 6 ಮಲ್ಟಿಸ್ಟ್ರಾಡಾ 950 ಎಸ್ ಬೈಕನ್ನು ಮುಂದಿನ ತಿಂಗಳ 2 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಇನ್ನು ಡುಕಾಟಿ ಡೀಲರುಗಳು 2020ರ ಮಲ್ಟಿಸ್ಟ್ರಾಡಾ 950 ಎಸ್ ಬೈಕಿಗಾಗಿ ಅಧಿಕೃತವಾಗಿ ಪ್ರೀ-ಬುಕ್ಕಿಂಗ್ ಅನ್ನು ಸ್ವೀಕರಿಸಲು ಈಗಾಗಲೇ ಪ್ರಾರಂಭಿಸಿದ್ದಾರೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.1 ಲಕ್ಷ ಪಾವತಿಸಿ ಆನ್‌ಲೈನ್ ಅಥವಾ ಬ್ರ್ಯಾಂಡ್‌ನ ಡೀಲರುಗಳ ಬಳಿ ಬುಕ್ಕಿಂಗ್ ಮಾಡಬಹುದಾಗಿದೆ.


Click it and Unblock the Notifications








