ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪಲ್ಸರ್ ಎನ್ಎಸ್ ಸರಣಿಯ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಬಜಾಜ್ ಕಂಪನಿಯು ಪಲ್ಸರ್ ಎನ್ಎಸ್ ಸರಣಿಯ ಎನ್ಎಸ್160 ಮತ್ತು ಎನ್ಎಸ್200 ಬೈಕುಗಳ ಬೆಲೆಯನ್ನು ಏರಿಕೆ ಮಾಡಿದೆ.

ಬಜಾಜ್ ಆಟೋ ಕಂಪನಿಯು ತನ್ನ ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕನ್ನು ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಬಜಾಜ್ ಕಂಪನಿಯು ಬಿಎಸ್-6 ಪಲ್ಸರ್ ಎನ್‍ಎಸ್ 160 ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ, ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1,08,589 ಗಳಾಗಿದೆ.

ಬಜಾಜ್ ಆಟೋ ತನ್ನ ಬಿಎಸ್-6 ಪಲ್ಸರ್ ಎನ್‍ಎಸ್200 ಬೈಕಿನ ಬೆಲೆಯನ್ನು ಮೂರನೇ ಬಾರಿಗೆ ಹೆಚ್ಚಿಸಿದೆ. ಇನ್ನು ಬಿಎಸ್-6 ಪಲ್ಸರ್ ಎನ್‍ಎಸ್200 ಬೈಕಿನ ಬೆಲೆಯನ್ನು ರೂ.2,219 ಗಳವರೆಗೆ ಹೆಚ್ಚಿಸಲಾಗಿದೆ. ಇದೀಗ ಈ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್200 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1,31,219ಗಳಾಗಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಮೊದಲಿಗೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160 ಬೈಕ್ ಬಗ್ಗೆ ಹೇಳುವುದಾದರೆ, ಇದರಲ್ಲಿ 160.3 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,000 ಆರ್‍ಪಿಎಂನಲ್ಲಿ 17.2 ಬಿಹೆಚ್‍ಪಿ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 14.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕಿನ ವಿನ್ಯಾಸದಲ್ಲಿಯು ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬೈಕ್ 2017 ಎಂಎಂ ಉದ್ದ, 804 ಎಂಎಂ ಅಗಲ, 1060 ಎಂಎಂ ಎತ್ತರ ಮತ್ತು 1372 ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಪಲ್ಸರ್ ಎನ್‍ಎಸ್160 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ 160 ಜಿಕ್ಸರ್, ಯಮಹಾ ಎಫ್‍ಝಡ್ 160 4ವಿ ಮತ್ತು ಹೀರೋ ಎಕ್ಸ್‌ಟ್ರೀಮ್ 160ಆರ್ ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಇನ್ನು ಬಿಎಸ್-6 ಪಲ್ಸರ್ ಎನ್‍ಎಸ್200 ಕಪ್ಪು, ಬಿಳಿ, ಕೆಂಪು ಮತ್ತು ಹಳದಿ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಬಿಎಸ್- 6 ಪಲ್ಸರ್ ಎನ್‍ಎಸ್ 200 ಬೈಕ್ ಫ್ಯೂಯಲ್ ಇಂಜೆಕ್ಷನ್ ನವೀಕರಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಬಿಎಸ್-6 ಪಲ್ಸರ್ ಎನ್‍ಎಸ್200 ಬೈಕಿನಲ್ಲಿ 99.5 ಸಿಸಿ, ನಾಲ್ಕು-ವಾಲ್ವ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 24.2 ಬಿಹೆಚ್‌ಪಿ ಪವರ್ ಮತ್ತು 18.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಎಸ್-6 ಪಲ್ಸರ್ ಎನ್ಸ್‍ಎಸ್200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಅಪಾಚೆ ಆರ್‌ಟಿಆರ್200 4 ವಿ, ಯಮಹಾ ಎಫ್‌ಜೆಡ್ 25 ಮತ್ತು ಸುಜುಕಿ ಜಿಕ್ಸರ್ 250 ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.

ಬಜಾಜ್ ಪಲ್ಸರ್ ಎನ್ಎಸ್ ಸರಣಿಯ ಬೈಕ್‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍ಗಳ ಕ್ರೇಜ್ ಇದೆ. ಆದರೆ ಲ್ಸರ್ ಎನ್ಎಸ್ ಸರಣಿಯ ಬೈಕುಗಳ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುವುತ್ತದಯೇ ಎಂಬುದನ್ನು ಕಾದು ನೋಡಬೇಕು.


Click it and Unblock the Notifications








