ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಬಿಎಸ್-6 ಎನ್‌ಟಾರ್ಕ್ 125 ಸ್ಕೂಟರ್ ಅನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಈ ಬಿಎಸ್-6 ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ.

ಬಿಡುಗಡೆಯಾದ ಬಳಿಕ ನಾಲ್ಕು ತಿಂಗಳಲ್ಲಿ ಬಿಎಸ್-6 ಎನ್‌ಟಾರ್ಕ್ 125 ಸ್ಕೂಟರಿನ ಬೆಲೆಯನ್ನು ಮೂರು ಬಾರಿ ಹೆಚ್ಚಿಸಿದೆ. ಟಿವಿಎಸ್ ಮೋಟಾರ್ ಕಂಪನಿಯು ಜೂನ್ ತಿಂಗಳಲ್ಲಿ ಬಿಎಸ್-6 ಎನ್‌ಟಾರ್ಕ್ 125 ಸ್ಕೂಟರಿನ ಬೆಲೆಯನ್ನು ರೂ.910 ಗಳವರೆಗೆ ಹೆಚ್ಚಿಸಿದರು. ಬಳಿಕ ಜುಲೈ ತಿಂಗಳಲ್ಲಿ ಮತ್ತೆ ರೂ.1,500 ಗಳವರೆಗೆ ಬೆಲೆಯನ್ನು ಹೆಚ್ಚಿಸಿದರು. ಇದೀಗ ಬಿಎಸ್-6 ಎನ್‌ಟಾರ್ಕ್ 125 ಸ್ಕೂಟರಿನ ಬೆಲೆಯನ್ನು ಮೂರನೇ ಬಾರಿ ರೂ.500 ಗಳವರೆಗೆ ಹೆಚ್ಚಿಸಿದೆ.

ಬೆಲೆ ಏರಿಕೆಯ ಬಳಿಕ, ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಡ್ರಮ್ ಬ್ರೇಕ್ ರೂಪಾಂತರದ ಆರಂಭಿಕ ಬೆಲೆಯು ರೂ.68,385 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.72,385 ಗಳಾಗಿದೆ. ಇನ್ನು ಟಾಪ್-ಸ್ಪೆಕ್ ‘ರೇಸ್-ಎಡಿಷನ್' ಬೆಲೆಯು ರೂ.74,865 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ಬಿಡುಗಡೆಯಾಯ್ತು ಕಡಿಮೆ ಬೆಲೆಯ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್

ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯ ಏರಿಕೆಯ ಹೊರತಾಗಿ, ಸ್ಕೂಟರಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ ತನ್ನ ಹೊಸ ರೇಸ್-ಎಡಿಷನ್' ಅನ್ನು ಹೊಸ ಬಣ್ಣಗಳ ಆಯ್ಕೆಯನ್ನು ಬಿಡುಗಡೆಗೊಳಿಸಿದ್ದರು.

ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ. ರೇಸ್ ಎಡಿಷನ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಈ ಬಾರಿ ಪ್ರಮುಖ ಆಕರ್ಷಣೆಯಾಗಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನಲ್ಲಿ 124 ಸಿಸಿ ಫ್ಯೂಯಲ್-ಇಂಜೆಕ್ಟ್ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 9.1 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನ 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ರೇಸ್ ಎಡಿಷನ್ ಸಹ ಖರೀದಿಗೆ ಲಭ್ಯವಿದೆ. ಸ್ಟ್ಯಾಂಡರ್ಡ್ ಮಾದರಿಗಿಂತಲೂ ಇದು ಹಲವಾರು ಕಾಸ್ಮೆಟಿಕ್ ಹಾಗೂ ಪ್ರೀಮಿಯಂ ಫೀಚರ್ಸ್ ಅಪ್‌ಡೇಟ್‌ಗಳನ್ನು ಮಾಡಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ತೂಕದಲ್ಲಿ ಹೆಚ್ಚಳವಾಗಿದೆ. ಬಿಎಸ್-6 ಎನ್‌ಟಾರ್ಕ್ 125 ಸ್ಕೂಟರ್ ತೂಕವು 1.9 ಕೆಜಿಯಷ್ಟು ಹೆಚ್ಚಾಗಿದೆ. ಒಟ್ಟು ತೂಕ 118 ಕೆಜಿಯಾಗಿದೆ. ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು 5-ಲೀಟರ್‌ನಿಂದ 5.8-ಲೀಟರ್‌ಗೆ ಹೆಚ್ಚಿಸಿದೆ.

ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಎಫ್ಐ, ಸುಜುಕಿ ಆಕ್ಸೆಸ್ 125, ಯಮಹಾ ರೇ ಜೆಡ್ಆರ್ 125 ಮಾದರಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








