Suzuki e Access: ಹೊಸ ಸುಜುಕಿ ಇ-ಸ್ಕೂಟರ್‌ಗೆ ದೊಡ್ಡ ಆಫರ್ ಘೋಷಣೆ.. ಇದು ಫ್ರೀ.. ಕ್ಯೂ ನಿಲ್ಲಲು ರೆಡಿಯಾಗಿ!

ಜನವರಿ 9ರಂದು ನೂತನ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪರಿಚಯಿಸಲಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಮೊದಲ ತಿಂಗಳೇ 201 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. ಸದ್ಯ, ಇದೇ 'ಇ ಆಕ್ಸೆಸ್' ಸ್ಕೂಟರ್‌ ಮಾರಾಟ ಸಂಖ್ಯೆಯನ್ನು ಅಧಿಕಗೊಳಿಸಲು ಕಂಪನಿಯು ಮುಂದಾಗಿದ್ದು, ವಿವಿಧ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಚ್ಚ ಹೊಸ 'ಸುಜುಕಿ ಇ ಆಕ್ಸೆಸ್' ಒಟ್ಟು ರೂ.19,800 ವರೆಗೆ ಆಫರ್‌ನ್ನು ಪಡೆದಿದೆ. ಇದರಲ್ಲಿ ರೂ.10,000 ಲಾಯಲ್ಟಿ ಬೋನಸ್ ಹಾಗೂ ರೂ.9,800 ಫೈನಾನ್ಸ್ ಬೆನಿಫಿಟ್ ಸೇರಿದೆ. ಜೊತೆಗೆ ಈ ಸ್ಕೂಟರ್ ಖರೀದಿ ಮೇಲೆ 7 ವರ್ಷಗಳ ವಿಸ್ತೃತ ವಾರಂಟಿಯು ಲಭ್ಯವಿದ್ದು, ರೂ.18,000 ಮೌಲ್ಯದ ಹೋಮ್ ಚಾರ್ಜರ್ ಉಚಿತವಾಗಿ ಸಿಗುತ್ತದೆ.

Suzuki e Access Get Rs 19 800 Offers Details

'ಸುಜುಕಿ ಇ ಆಕ್ಸೆಸ್' ವಿಶೇಷತೆಗಳೇನು:

ಇದು ಬಜೆಟ್ ಬೆಲೆಯಲ್ಲಿಯೂ ದೊರೆಯುತ್ತದೆ. ರೂ.1.88 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಎಲ್ಲ ವರ್ಗದ ಜನರು ಸುಲಭವಾಗಿ ಕೊಂಡುಕೊಳ್ಳಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಲೀಲಾಜಾಲವಾಗಿ ಓಡಿಸಬಹುದು.

ನೂತನ 'ಸುಜುಕಿ ಇ ಆಕ್ಸೆಸ್' ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ಎಲ್‌ಇಡಿ ಹೆಡ್‌ಲೈಟ್‌, ಎಲ್‌ಇಡಿ ಇಂಡಿಕೇಟರ್‌ಗಳು ಮತ್ತು ಟೈಲ್‌ಲೈಟ್‌ನ್ನು ಒಳಗೊಂಡಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು 12-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್‌ಗಳು ಹಾಗೂ ದೊಡ್ಡದಾದ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ & ಮೆಟಾಲಿಕ್ ಮ್ಯಾಟ್ ಫೈಬ್ರೊಯಿನ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Suzuki e Access Get Rs 19 800 Offers Details

ಈ ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 1,860 ಎಂಎಂ ಉದ್ದ, 715 ಎಂಎಂ ಅಗಲ ಮತ್ತು 1,135 ಎಂಎಂ ಎತ್ತರವಿದೆ. ಹಾಗೆಯೇ 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,305 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 122 ಕೆಜಿ ತೂಕವಿದೆ.

ಇದು ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 3.07 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 95 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಈ ಸ್ಕೂಟರ್‌ನಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 4.1 ಕೆಡಬ್ಲ್ಯೂ ಅಶ್ವ ಶಕ್ತಿ ಹಾಗೂ 15 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 71 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

Suzuki e Access Get Rs 19 800 Offers Details

ಹೊಸ 'ಸುಜುಕಿ ಇ ಆಕ್ಸೆಸ್' 4.2-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ರಿಮೋಟ್ ಸ್ಟಾರ್ಟ್, ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಕೋ, ರೈಡ್ ಎ & ರೈಡ್ ಬಿ ಎಂಬ 3 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಡಿಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಬರೀ 2 ಗಂಟೆ 12 ನಿಮಿಷಗಳಲ್ಲಿ ಶೇಕಡ 0 ರಿಂದ 100% ಚಾರ್ಜ್ ಆಗಿ ಬಿಡುತ್ತದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಸುರಕ್ಷತೆಯಿಂದಲ್ಲೂ ಮನೆ ಮಾತಾಗಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಸ್ವಿಂಗರ್ಮ್ ಮೌಂಟೆಡ್ ಮಾನೋಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಇದಕ್ಕೆ ಹಲವು ಎದುರಾಳಿಗಳಿವೆ. ಬಜಾಜ್ ಚೇತಕ್ (Bajaj Chetak), ಎಥರ್ ರಿಜ್ಟಾ (Ather Rizta), ಟಿವಿಎಸ್ ಐಕ್ಯೂಬ್ (TVS iQube) ಮತ್ತು ಹೀರೋ ವಿಡಾ ವಿ2 (Hero Vida V2) ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Wednesday, February 25, 2026, 16:08 [IST]
English summary
Suzuki e access get rs 19800 offers details
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+