ಅನಾವರಣವಾಯ್ತು ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಪಾನಿಗಲೆ ವಿ4 ಎಸ್‌ಪಿ ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್ ಹೆಚ್ಚು ಟ್ರ್ಯಾಕ್-ಫೋಕಸ್ಡ್ ಮಾದರಿಯಾಗಿದೆ.

ಡುಕಾಟಿ ಕಂಪನಿಯು ತನ್ನ ಹೊಸ ವಿ4 ಸರಣಿಗೆ 'ಎಸ್‌ಪಿ' (ಸ್ಪೋರ್ಟ್ ಪ್ರೊಡಕ್ಷನ್) ಮತ್ತೆ ಪುನಾರಂಭಿಸಿದೆ. ಜೊತೆಗೆ ಡುಕಾಟಿ ಸೂಪರ್‌ಲೆಗ್ಗೇರಾ ವಿ4 'ಹೈಪರ್‌ಬೈಕ್'ನಿಂದ ಪಡೆದ ಫೀಚರ್ ಗಳನ್ನು ಈ ಹೊಸ ಪಾನಿಗಲೆ ವಿ4 ಎಸ್‌ಪಿ ಬೈಕ್ ಪಡೆದುಕೊಂಡಿದೆ. ಈ ಹೊಸ ಡುಕಾಟಿ ಪಾನಿಗಲೆವಿ4 ಎಸ್‌ಪಿ ಬೈಕ್ ಬ್ರಷ್ಡ್ ಅಲ್ಯೂಮಿನಿಯಂ ಇಂಧನ ಟ್ಯಾಂಕ್‌ನೊಂದಿಗೆ ಹೊಸ ಬಣ್ಣವನ್ನು ಹೊಂದಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್ ಅದೇ 1,103ಸಿಸಿ, ಡೆನಿಮೋಸೆಡಿಸಿ ಸ್ಟ್ರಾಡೇಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 113 ಬಿಹೆಚ್‌ಪಿ ಮತ್ತು 9,500 ಆರ್‌ಪಿಎಂನಲ್ಲಿ 124 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಪಾನಿಗಲೆ ವಿ4 ಆರ್ ಮತ್ತು ಸೂಪರ್‌ಲೆಗ್ಗರಾ ವಿ4 ನಂತೆ ಎಸ್‌ಪಿ ಎಸ್‌ಟಿಎಂ ಇವಿಒ-ಎಸ್‌ಬಿಕೆ ಡ್ರೈ ಕ್ಲಚ್ ಹೊಂದಿದ್ದು, ಓಪನ್ ಕಾರ್ಬನ್ ಫೈಬರ್ ಕ್ಲಚ್ ಕವರ್ ಹೊಂದಿದೆ. ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಓಹ್ಲಿನ್ಸ್ ಎನ್ಐಎಕ್ಸ್ 30 ಫೋರ್ಕ್ ಮತ್ತು ಹಿಂಭಾಗದಲ್ಲಿ ಟಿಟಿಎಕ್ಸ್ 36 ಶಾಕ್ ಮತ್ತು ಎಲೆಕ್ಟ್ರಾನಿಕ್ ಸ್ಟೀರಿಂಗ್ ಡ್ಯಾಂಪರ್ ಅನ್ನು ಸಹ ಪಡೆಯುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಕಾರ್ಬನ್ ಫೈಬರ್ ರಿಮ್ಸ್ ಮತ್ತು ಇತರ ಕಾರ್ಬನ್ ಫೈಬರ್ ಬಿಟ್‌ಗಳನ್ನು ಸಹ ಪಡೆಯುತ್ತದೆ, ಈ ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್ 173 ಕೆಜೆ ತೂಕವನ್ನು ಹೊಂದಿದೆ.

ಇನ್ನು ಈ ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಯಲ್ಲಿ ಡಿಸ್ಕ್ ಬ್ರೇಕ್ ಗಳೊಂದಿಗೆ ಬ್ರೆಂಬೊ ಸ್ಟೈಲ್‌ಮಾ ಆರ್ ಕ್ಯಾಲಿಪರ್‌ಗಳನ್ನು ಹೊಂದಿವೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್ ರೇಸ್ ಎ ಮತ್ತು ರೇಸ್ ಬಿ ರೈಡಿಂಗ್ ಮೋಡ್‌ಗಳು ಮತ್ತು ಡುಕಾಟಿ ಕಾರ್ಸ್‌ನಿಂದ ಪಡೆದ ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಂತೆ ಕೆಲವು ಎಲೆಕ್ಟ್ರಾನಿಕ್ ನವೀಕರಣಗಳನ್ನು ಸಹ ಒಳಗೊಂಡಿದೆ.

ಹೊಸ ಪಾನಿಗಲೆ ವಿ4 ಎಸ್‌ಪಿ ಬೈಕ್ ಪೂರ್ಣ ರೇಸಿಂಗ್ ಕಿಟ್ ಸಹ ನೀಡಲಾಗುತ್ತದೆ, ರಿಯರ್ ವ್ಯೂ ಮೀರರ್ ಗಳನ್ನು ತೆಗೆಯಲು ಅಲ್ಯೂಮಿನಿಯಂ ಕ್ಯಾಪ್, ಪರವಾನಗಿ ಪ್ಲೇಟ್ ಹೋಲ್ಡರ್ ತೆಗೆಯಲು ಕಿಟ್, ಓಪನ್ ಕ್ಲಚ್ ಕವರ್ ಮತ್ತು ಜಿಪಿಎಸ್ ಮಾಡ್ಯೂಲ್ನೊಂದಿಗೆ ಡುಕಾಟಿ ಡಾಟಾ ಅನಾಲೈಜರ್ ಪ್ಲಸ್ ಅನ್ನು ಒಳಗೊಂಡಿದೆ.

ಈ ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ ಬೈಕ್ ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇತ್ತೀಚಿನ ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.


Click it and Unblock the Notifications








