ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ ಸ್ಕ್ರ್ಯಾಂಬ್ಲರ್ ಸರಣಿಯ ಹೊಸ ವೆರಿಯೆಂಟ್ ಅನ್ನು ಪರಿಚಯಿಸಿದ್ದು, ಇದನ್ನು ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಎಂದು ಕರೆಯಲಾಗುತ್ತದೆ. ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬ್ಲ್ಯಾಕ್ ಮತ್ತು ಗ್ರೇ ಬಣ್ಣಗಳನ್ನು ಒಳಗೊಂಡಿದೆ.

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಕೆಫೆ ರೇಸರ್ ಮತ್ತು ಫುಲ್ ಥ್ರೊಟಲ್ ವೆರಿಯೆಂಟ್ ಗಳನ್ನು ಬದಲಾಯಿಸಿ ನೈಟ್‌ಶಿಫ್ಟ್ ಮಾದರಿಯನ್ನು ಪರಿಚಯಿಸಿದೆ. ಈ ಎರಡು ರೂಪಾಂತರಗಳ ಮಿಶ್ರಣ ನೈಟ್‌ಶಿಫ್ಟ್ ವೆರಿಯೆಂಟ್ ಎಂದು ಹೇಳಬಹುದು. ಸ್ಕ್ರ್ಯಾಂಬ್ಲರ್ ಐಕಾನ್ ಬೈಕ್ ಹೊಸ ಡುಕಾಟಿ ರೆಡ್ ಕಲರ್ ಆಯ್ಕೆಯನ್ನು ಪಡೆದರೆ, ಡಸರ್ಟ್ ಸ್ಲೆಡ್ ರೆಡ್ ಬಣ್ಣದಿಂದ ಸಮೃದ್ಧವಾಗಿರುವ 'ಸ್ಪಾರ್ಕ್ಲಿಂಗ್ ಬ್ಲೂ' ಲಿವೆರಿ ಬಣ್ಣವನ್ನು ಪಡೆಯುತ್ತದೆ. ಸ್ಕ್ರಾಂಬ್ಲರ್ ಡಸರ್ಟ್ ಸ್ಲೆಡ್‌ಗಾಗಿ ಐಸ್ಬರ್ಗ್ ವೈಟ್ ಫಿನಿಶಿಂಗ್ ಹೊಂದಿದೆ.

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ನೈಟ್‌ಶಿಫ್ಟ್ ಕೆಫೆ ರೇಸರ್ ಕ್ಲಿಪ್-ಆನ್‌ಗಳಿಗಿಂತ ಕಿರಿದಾದ ಅಲ್ಯೂಮಿನಿಯಂ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ, ಇದು ಅಗ್ರೇಸಿವ್ ಲುಕ್ ಅನ್ನು ಹೊಂದಿದ್ದರು, ಬೈಕ್ ರೈಡ್ ಮಾಡಲು ಆರಾಮದಾಯಕವಾದ ಅನುಭವ ಅನ್ನು ನೀಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕಿನ ಮುಂಭಾಗ ಫೆಂಡರ್ ನಲ್ಲಿ ಸಣ್ಣ ಕಟ್ಟಿಂಗ್ ಗಳನ್ನು ಕಾಣಬಹುದು. ಇನ್ನು ಹಿಂಭಾಗದ ಫೆಂಡರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಸಣ್ಣ ಸ್ವಿಂಗಾರ್ಮ್-ಮೌಂಟಡ್ ಫೆಂಡರ್ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಸ್ಕ್ರ್ಯಾಂಬ್ಲರ್ ಬೈಕಿನಲ್ಲಿ ಟರ್ನ್ ಇಂಡೀಕೆಟರ್ ಅನ್ನು ಸೀಟುಗಳ ಹಿಂಭಾಗದ ಸ್ಟಬ್ ಮೇಲೆ ಜೋಡಿಸಲಾಗಿದೆ. ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್ 180 ಕೆಜಿ ತೂಕವನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಈ ಹೊಸ ನೈಟ್‌ಶಿಫ್ಟ್ ಬೈಕಿನಲ್ಲಿ ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೈಲ್‌ಲೈಟ್ ಮತ್ತು ಗೇರ್ ಮತ್ತು ಫ್ಯೂಯಲ್ ಲೆವೆಲ್ ಇಂಡಿಕೇಟರ್ ಅನ್ನು ಸೂಚಿಸುವ ಎಲ್‌ಸಿಡಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ. ಬಹಳ ದೊಡ್ಡ ಡಿಸ್ ಪ್ಲೇ ಅಲ್ಲವಾದರೂ ಸ್ಪಷ್ಟವಾಗಿ ಕಾಣುವ ವೃತಕಾರದ ಡಿಸ್ ಪ್ಲೇಯನ್ನು ಅಳವಡಿಸಿದೆ.

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇತ್ತೀಚೆಗೆ ಎಲ್ಲಾ ದುಬಾರಿ ಬೈಕುಗಳಲ್ಲಿ ಕಂಡು ಬರುವಂತಹ ಬಾಷ್ ಕಾರ್ನರಿಂಗ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರೊಂದಿಗೆ ಬ್ರೆಂಬೊ ಬ್ರೇಕ್ ಕ್ಯಾಲಿಪರ್‌ಗಳನ್ನು ಒಳಗೊಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಹೊಸ ನೈಟ್‌ಶಿಫ್ಟ್ ಬೈಕಿನಲ್ಲಿ ಏರ್ ಮತ್ತು ಆಯಿಲ್ ಕೂಲ್ಡ್ 803ಸಿಸಿ, ಡೆಸ್ಮೋಡ್ರೊಮಿಕ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಬ್ರಷ್ಡ್ ಹೈಲೈಟ್‌ಗಳೊಂದಿಗೆ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಯುರೋಫ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಅನಾವರಣವಾಯ್ತು 2021ರ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕ್

ಇನ್ನು ಇದರ 803ಸಿಸಿ ಎಂಜಿನ್ 8,250 ಆರ್‌ಪಿಎಂನಲ್ಲಿ 72 ಬಿಹೆಚ್‌ಪಿ ಮತ್ತು 5,750 ಆರ್‌ಪಿಎಂನಲ್ಲಿ 66 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ನೈಟ್‌ಶಿಫ್ಟ್ ಬೈಕನ್ನು ಭಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Friday, November 13, 2020, 19:37 [IST]
English summary
2021 Ducati Scrambler Nightshift Unveiled. Read In Kannada.
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+