ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು
2019-20ರ ಆರ್ಥಿಕ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಉತ್ತಮವಾಗಿ ಮಾರಾಟವಾಗಿವೆ. 2020ರ ಆರ್ಥಿಕ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.20.6 ರಷ್ಟು ಬೆಳವಣೆಗೆಯನ್ನು ಕಂಡಿದೆ.

ವರದಿಗಳ ಪ್ರಕಾರ 2020ರ ಹಣಕಾಸು ವರ್ಷದಲ್ಲಿ ಒಟ್ಟು 1,52,000 ದ್ವಿಚಕ್ರ ವಾಹನಗಳ(ಸ್ಕೂಟರ್ ಮತ್ತು ಬೈಕ್) ಯುನಿಟ್ ಗಳನ್ನು ಮಾರಾಟ ಮಾಡಲಾಗಿವೆ. ಇನ್ನು ಕಳೆದ ಆರ್ಥಿಕ ವರ್ಷದಲ್ಲಿ ಒಟ್ಟು 1,26,000 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ವರ್ಷ 26,000 ಎಲೆಕ್ಟ್ರಿಕ್ ವಾಹನಗಳು ಹೆಚ್ಚುವರಿಯಾಗಿ ಮಾರಾಟವಾಗಿವೆ,

2020ರ ಹಣಕಾಸು ವರ್ಷದಲ್ಲಿ ಒಟ್ಟು 1,52,000 ದ್ವಿಚಕ್ರ ವಾಹನಗಳ ಮಾರಾಟವಾಗಿವೆ. ಇದರಲ್ಲಿ ಒಟ್ಟು ಶೇ.97 ರಷ್ಟು ಎಲೆಕ್ಟ್ರಿಕ್ ಸ್ಕೂಟರ್‍ಗಳು ಒಳಗೊಂಡಿದೆ. ಉಳಿದ ಶೇ.3 ರಷ್ಟು ಬೈಕುಗಳು ಮಾರಾಟವಾಗಿವೆ. ಎಲೆಕ್ಟ್ರಿಕ್ ಸ್ಕೂಟರ್‍ಗಳು ಉತ್ತಮವಾಗಿ ಮಾರಾಟವಾಗುತ್ತಿವೆ.
MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದ ವರದಿಯನ್ನು ಸೊಸೈಟಿ ಆಫ್ ಮ್ಯಾನ್ಯುಫ್ಯಾಕ್ಚರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಸ್‌ಎಂಇವಿ) ಬಿಡುಗಡೆ ಮಾಡಿದೆ.

ಇವಿ ಉದ್ಯಮವು ಬೃಹತ್ ಆಗಿ ಬೆಳೆಯುತ್ತಿದೆ. ನಗರಪ್ರದೇಶದಲ್ಲಿ ಶುದ್ದ ಗಾಳಿಯನ್ನು ಸೇವಿಸಿ ಆರೋಗ್ಯವಾಗಿರಲು ಮಾಲಿನ್ಯವನ್ನು ಕಡಿಮೆಮಾಡಬೇಕು. ನಗರಗಳಲ್ಲಿನ ಮಾಲಿನ್ಯವನ್ನು ತಡೆಯನ್ನು ಎಲೆಕ್ಟ್ರಿಕ್ ವಾಹನಗಳನ್ನು ಸಹಕಾರಿಯಾಗಿರುತ್ತದೆ ಎಂದು ಎಸ್‌ಎಂಇವಿ ಮಹಾನಿರ್ದೇಶಕ ಸೊಹಿಂದರ್ ಗಿಲ್ ಅವರು ಹೇಳಿದರು.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

2019ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸಲಾಗಿತ್ತು. ಇದರಲ್ಲಿ ಆಂಪಿಯರ್, ಒಕಿನಾವಾ ಮತ್ತು ಹೀರೋ ಎಲೆಕ್ಟ್ರಿಕ್ ನಿಂದ ಹೆಚ್ಚಿನ ಸಂಖ್ಯೆಯ ಲೋ ರೇಂಜ್ ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿದೆ. ಜೊತೆಗೆ ಒಕಿನಾವಾ ಮತ್ತು ಅಥೆರ್ ಕಂಪನಿಯ ಪ್ರೀಮಿಯಂ ಮಾದರಿಗಳು ಕೂಡ ಸೇರಿವೆ.

ಜನಪ್ರಿಯ ದ್ವಿಚಕ್ತ್ರ ಕಂಪನಿಗಳಾದ ಟಿವಿಎಸ್ ಮತ್ತು ಬಜಾಜ್ ಆಟೋ ಕಂಪನಿಗಳು ಕೂಡ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸಿದರು. ಬಜಾಜ್ ಆಟೋ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಎಲೆಕ್ಟ್ರಿಕ್ ಅನ್ನು ಒಳಗೊಂಡಿದೆ. ಇವೆರಡೂ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‍ಗಳಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ಕೂಡ ಕಳೆದ ವರ್ಷ ಪರಿಚಯಿಸಿದೆ. ಇದರಲ್ಲಿ ರಿವಾಲ್ಟ್ ಆರ್ವಿ 400 ಮತ್ತು ಅಲ್ಟ್ರಾವೈಲೆಟ್ ಎಫ್ 77 ಸೇರಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಜನಪ್ರಿಯ ದ್ವಿಚಕ್ರ ವಾಹನಗಳು ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕುಗಳನ್ನು ಪರಿಚಯಿಸುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಉತ್ತಮ ಬೇಡಿಕೆಯನ್ನು ಹೊಂದಿದೆ.


Click it and Unblock the Notifications