Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2023ಕ್ಕೆ ಬಿಡುಗಡೆಯಾಗಲಿದೆ ಬಜಾಜ್ - ಟ್ರಯಂಫ್ ಸಹಭಾಗಿತ್ವದ ಮೊದಲ ಬೈಕ್
ಬಜಾಜ್ ಆಟೋ ಹಾಗೂ ಟ್ರಯಂಫ್ ಕಂಪನಿಗಳು 2020ರ ಆರಂಭದಲ್ಲಿ ಬೈಕುಗಳ ಬಿಡುಗಡೆ ಸಂಬಂಧ ಸಹಭಾಗಿತ್ವವನ್ನು ಮಾಡಿಕೊಂಡವು. ಈ ಎರಡು ಕಂಪನಿಗಳು ಒಟ್ಟಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮಿಡ್ ರೆಂಜ್ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಯೋಜಿಸಿವೆ.

ಈ ಪಾಲುದಾರಿಕೆಯಡಿಯಲ್ಲಿ 2022ರಲ್ಲಿ ಮೊದಲ ಬೈಕನ್ನು ಬಿಡುಗಡೆಗೊಳಿಸಲಾಗುವುದು. ಎಕನಾಮಿಕ್ ಟೈಮ್ಸ್ ಆಟೋಗೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್, ಬಜಾಜ್-ಟ್ರಯಂಫ್ ಸಹಭಾಗಿತ್ವದಲ್ಲಿ ಉತ್ಪಾದನೆಯಾಗಲಿರುವ ಈ ಬೈಕ್ ಅನ್ನು 2023ರಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹೊಸ ಬೈಕಿನ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದರು.

ಕಂಪನಿಯು ನಿಗದಿತ ಸಮಯದಲ್ಲಿ ಬೈಕಿನ ಉತ್ಪಾದನೆಯನ್ನು ಆರಂಭಿಸಲಿದೆ. ಮುಂದಿನ ಸವಾಲುಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. 2021ರಲ್ಲಿ ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಿದರೆ ನಿಗದಿಪಡಿಸಿದ ಸಮಯದೊಳಗೆ ಬೈಕ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ರಯಂಫ್ ಮೋಟಾರ್‌ಸೈಕಲ್ ಹಾಗೂ ಬಜಾಜ್ ಆಟೋ ಸಹಭಾಗಿತ್ವದಲ್ಲಿ 200-750 ಸಿಸಿಯ ಬೈಕುಗಳನ್ನು ಬಿಡುಗಡೆಗೊಳಿಸಲಾಗುವುದು. ಟ್ರಯಂಫ್ ಈ ವಾಹನಗಳನ್ನು ಇಂಗ್ಲೆಂಡ್ ನಲ್ಲಿರುವ ಘಟಕದಲ್ಲಿ ಸಂಶೋಧಸಿ ಅಭಿವೃದ್ಧಿಪಡಿಸಲಿದ್ದು, ಬಜಾಜ್ ಆಟೋದ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು.

ಈ ಸಹಭಾಗಿತ್ವದಲ್ಲಿ ಬಜಾಜ್ ಬೈಕುಗಳು ಬಿಡುಗಡೆಯಾಗುವುದಿಲ್ಲ. ಆದರೆ ಟ್ರಯಂಫ್‌ನ ಬೈಕುಗಳು ಮಾತ್ರ ಬಿಡುಗಡೆಯಾಗುತ್ತವೆ. ಟ್ರಯಂಫ್ ಮೋಟರ್ ಸೈಕಲ್ಸ್ ಕಂಪನಿಯು ಯುರೋಪಿನ ಹೊರಗೆ ದಕ್ಷಿಣ ಏಷ್ಯಾ ಹಾಗೂ ದಕ್ಷಿಣ ಅಮೆರಿಕಾ ದೇಶಗಳಲ್ಲಿ ಪ್ರಾಬಲ್ಯವನ್ನು ಹೊಂದಲು ಬಯಸಿದೆ. ಈ ಕಾರಣಕ್ಕೆ ಕಂಪನಿಯು ಸ್ಥಳೀಯ ಬೈಕ್ ತಯಾರಕ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳುತ್ತಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬಜಾಜ್-ಟ್ರಯಂಫ್ ಜಂಟಿ ಸಹಭಾಗಿತ್ವದಲ್ಲಿ ಬಿಡುಗಡೆಯಾಗುವ ಮೊದಲ ಬೈಕ್ 250-350 ಸಿಸಿಯಾಗಿರಬಹುದು. ಈ ಬೈಕ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಬೆನೆಲ್ಲಿ ಇಂಪೀರಿಯಲ್ 400 ಹಾಗೂ ಜಾವಾ ಬೈಕುಗಳಿಗೆ ಪೈಪೋಟಿ ನೀಡಲಿದೆ.

ಟ್ರಯಂಫ್ ಕಂಪನಿಯು ಮುಂದಿನ ಆರು ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಒಂಬತ್ತು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಇತ್ತೀಚೆಗೆ ಟೈಗರ್ 850 ಸ್ಪೋರ್ಟ್ ಬೈಕ್ ಬಗೆಗಿನ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಅಪ್ ಡೇಟ್ ಮಾಡಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯು ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಬೈಕಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಟ್ರಯಂಫ್ ಕಂಪನಿಯು ಟೈಗರ್ 900 ಅಡ್ವೆಂಚರ್ ಬೈಕ್ ಬದಲಿಗೆ ಟೈಗರ್ 850 ಸ್ಪೋರ್ಟ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ.

ಇದರ ಜೊತೆಗೆ ಕೆಲವು ವಿಶೇಷ ಆವೃತ್ತಿಯ ಮಾದರಿಗಳನ್ನು ಭಾರತದಲ್ಲಿ ಬೊನ್ನೆವಿಲ್ಲೆ ಸರಣಿಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಟ್ರಯಂಫ್ ಕಂಪನಿ ಹೇಳಿದೆ. ಕಂಪನಿಯು ಭಾರತದಲ್ಲಿ ಟೈಗರ್ 650 ಸ್ಪೋರ್ಟ್ ಅಡ್ವೆಂಚರ್ ಬೈಕ್ ಅನ್ನು ಶೀಘ್ರದಲ್ಲೇ ಅನಾವರಣಗೊಳಿಸಲಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟ್ರಯಂಫ್ ಕಂಪನಿಯು ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕುಗಳ ಖರೀದಿ ಹಾಗೂ ಮಾರಾಟವನ್ನು ಆರಂಭಿಸಿದೆ. ಈ ಬೈಕ್‌ಗಳನ್ನು ಕಂಪನಿಯ ಡೀಲರ್ ಗಳ ಬಳಿ ಮಾರಾಟ ಮಾಡಲಾಗುವುದು ಎಂದು ಕಂಪನಿಯು ತಿಳಿಸಿದೆ.

ಹೊಸ ಬೈಕ್‌ಗಳ ರೀತಿಯಲ್ಲಿಯೇ ಕಂಪನಿಯು ಹಳೆಯ ಬೈಕ್‌ಗಳನ್ನು ಮಾರಾಟ ಮಾಡಲಿದೆ. ಹಳೆಯ ಬೈಕ್ ಖರೀದಿಸಿದ ನಂತರ ಹಲವಾರು ಹಂತದ ತಪಾಸಣೆ ಹಾಗೂ ಮಾನದಂಡಗಳನ್ನು ಪೂರೈಸಿದ ನಂತರವೇ ಅವುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಟ್ರಯಂಫ್ ಕಂಪನಿ ಹೇಳಿದೆ.