ಭಾರತದಲ್ಲಿ ಇನ್ಮುಂದೆ ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ಅಮೆರಿಕದ ಜನಪ್ರಿಯ ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹಾರ್ಲೆ ಡೇವಿಡ್ಸನ್ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ್ದರೂ ಹೊಸ ವಾಹನಗಳ ಮಾರಾಟ ಮತ್ತು ಹೊಸ ಉತ್ಪನ್ನಗಳ ಅಭಿವೃದ್ದಿಯನ್ನು ಸಹಭಾಗೀತ್ವದ ಕಂಪನಿಯೊಂದಿಗೆ ಮುಂದುವರಿಸಲಿದೆ.

ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ಭಾರತದಲ್ಲಿ ಈ ಮೊದಲ ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ಭಾರತದಲ್ಲಿನ ಉದ್ಯಮ ವ್ಯವಹಾರಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿಕೊಂಡಿತ್ತು. ಆದರೂ ಭಾರತದಲ್ಲಿ ಬೈಕ್ ಮಾರಾಟ ಮತ್ತು ಹೊಸ ವಾಹನಗಳ ಬಿಡುಗಡೆಯನ್ನು ಮುಂದುವರಿಸವುದಾಗಿ ಸುಳಿವು ನೀಡಿದ್ದ ಹಾರ್ಲೆ ಕಂಪನಿಯು ಇದೀಗ ಭಾರತದ ನಂ.1 ಕಮ್ಯುಟರ್ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿದೆ.

ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ದೇಶಿಯ ಮಾರುಕಟ್ಟೆಯಲ್ಲಿನ ಬೈಕ್ ಮಾರಾಟ ಮತ್ತು ಹೊಸ ಉತ್ಪನ್ನಗಳ ಅಭಿವೃದ್ದಿಗಾಗಿ ಹೀರೋ ಮೋಟೊಕಾರ್ಪ್ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ಉದ್ಯಮ ವ್ಯವಹಾರಗಳನ್ನು ಮುಂದುವರಿಸುವ ಆಸಕ್ತಿ ಹೊಂದಿದೆ.

ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ಸತತ ಆರ್ಥಿಕ ಹಿನ್ನಡೆ ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಸಹಭಾಗೀತ್ವ ಯೋಜನೆಯತ್ತ ಮುಖಮಾಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲೇ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಿದೆ.

ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ಇದಕ್ಕಾಗಿ ಕಳೆದ ವರ್ಷವೇ ಹೀರೋ ಮೋಟೊಕಾರ್ಪ್ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ಕರೋನಾ ವೈರಸ್ ಪರಿಣಾಮ ಹೊಸ ಯೋಜನೆಯನ್ನು ತಟಸ್ಥವಾಗಿಟ್ಟಿತ್ತು. ಇದೀಗ ಉದ್ಯಮ ವ್ಯವಹಾರಗಳ ಪರಿಸ್ಥಿತಿ ತಿಳಿಗೊಂಡಿರುವ ಹಿನ್ನಲೆ ಸಹಭಾಗೀತ್ವ ಯೋಜನೆಗೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದು, ಹೊಸ ಯೋಜನೆ ಅಡಿ ಹೀರೋ ಕಂಪನಿಯೇ ಹಾರ್ಲೆ ಬೈಕ್‌ಗಳ ಅಭಿವೃದ್ದಿ ಮತ್ತು ಮಾರಾಟವನ್ನು ಕೈಗೊಳ್ಳಲಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಹೀರೋ ಮೋಟೊಕಾರ್ಪ್ ಕಂಪನಿಯು ದೇಶಾದ್ಯಂತ ಮಾರಾಟ ಸರಪಳಿಯಲ್ಲಿ ಅತ್ಯುತ್ತಮ ಅವಕಾಶ ಹೊಂದಿದ್ದು, ಇದೇ ಕಾರಣಕ್ಕೆ ಹಾರ್ಲೆ ಕಂಪನಿಯು ಹೀರೋ ಕಂಪನಿಯ ಜೊತೆಗೆ ಕೈಜೋಡಿಸಿದೆ.

ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ಜೊತೆಗೆ ಉದ್ಯಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರೂ ಹಾರ್ಲೆ ಡೇವಿಡ್ಸನ್ ಕಂಪನಿಯಲ್ಲಿನ ಭಾರತೀಯ ಉದ್ಯೋಗಿಗಳು ಹೀರೋ ಮೋಟೊಕಾರ್ಪ್ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದು, ಅಧಿಕೃತ ಕಚೇರಿ, ಮಾರಾಟ ಮಳಿಗೆಗಳನ್ನು ಹೊರತುಪಡಿಸಿ ಇನ್ನುಳಿದ ವ್ಯವಹಾರಗಳು ಸಾಮಾನ್ಯ ಮಾದರಿಯಲ್ಲೇ ಹೀರೋ ಜೊತೆ ಮುಂದುವರಿಯಲಿವೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಹಾರ್ಲೆ ಬೈಕ್‌ಗಳನ್ನು ಮಾರಾಟ ಮಾಡಲಿದೆ ಹೀರೋ ಮೋಟೊಕಾರ್ಪ್

ಇನ್ನು ಸಹಭಾಗೀತ್ವ ಯೋಜನೆ ಅಡಿಯಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ಹೊಸದಾಗಿ 350 ಸಿಸಿಯಿಂದ 500 ಸಿಸಿ ಸಾಮಾರ್ಥ್ಯದ ಕೆಲವು ಹೊಸ ಮೋಟಾರ್‌ಸೈಕಲ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಹೊಸ ಬೈಕ್‌ಗಳನ್ನು ಹೀರೋ ಕಂಪನಿಯೇ ಅಭಿವೃದ್ದಿಪಡಿಸಿ ತನ್ನ ಅಧಿಕೃತ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲಿದೆ.

More from DriveSpark

Article Published On: Tuesday, October 27, 2020, 20:51 [IST]
English summary
Harley-Davidson & Hero MotoCorp Announce Partnership For Indian Market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+